ಈ ದಿವಸ ವಾರ್ತೆ
ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಅ.6, 2024 ರಂದು ಜನಕಲಾ ಸಾಂಸ್ಕೃತಿಕ ಮೇಳ- 2024 ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಬಂಧುತ್ವ ವೇದಿಕೆ, ದಲಿತ ಸಂಘಟನೆಗಳ ಮಹಾ ಒಕ್ಕೂಟ ಸೇರಿದಂತೆ ಹಲವಾರು ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಅಂದು ಜನಕಲಾ ಸಾಂಸ್ಕೃತಿಕ ಮೇಳ ಹಮ್ಮಿಕೊಳ್ಳಾಗಿದ್ದು, ಬಸಮ್ಮ ಪೀರಪ್ಪ ನಡುವಿನಮನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲಕ್ಷ್ಮೀಪತಿ ಕೋಲಾರ, ಮೈಸೂರಿನ ಜನಾರ್ಧನ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ದಾವಣಗೆರೆಯ ಬಿ. ಶ್ರೀನಿವಾಸ ಆಶಯ ಮಾತುಗಳನ್ನು ಆಡಲಿದ್ದಾರೆ ಎಂದರು.
ವಿವಿಧ ಸಾಂಸ್ಕೃತಿಕ ಮೇಳದಲ್ಲಿ ಹಲವು ತಂಡಗಳು ಭಾಗವಹಿಸಲಿದ್ದು, ಸಂಜೆ ಕಾರ್ಯಕ್ರಮ ಸಮಾರೋಪ ನಡೆಯಲಿದೆ. ದಾವಣಗೆರೆಯ ಎ.ಬಿ. ರಾಮಚಂದ್ರಪ್ಪ, ಧಾರವಾಡದ ಬಸವರಾಜ ಹೂಗಾರ ಪಾಲ್ಗೊಳ್ಳಲ್ಲಿದ್ದಾರೆ. ಬಳಿಕ ಡಾ.ಎಂ.ಎಂ. ಕಲಬುರ್ಗಿ ಜೀವನಾಧಾರಿತ, ಸಮುದಾಯ ರಾಯಚೂರು ಪ್ರಸ್ತುತಪಡಿಸುವ ರಕ್ತ ವಿಲಾಪ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಮುಖಂಡರಾದ ಅನಿಲ ಹೊಸಮನಿ, ಚನ್ನು ಮೂಲಿಮನಿ, ನಾಗರಾಜ ಲಂಬು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment