Sunday, September 15, 2024

15ನೇ ದಿನಕ್ಕೆ ಕಾಲಿಟ್ಟ ಟಿಪಿಜೆಪಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ


ವಿಜಯಪುರ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ (ಟಿಪಿಜೆಪಿ) ಪದಾಧಿಕಾರಿಗಳು ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಮುಂದೆ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಭಾನ್ರುವಾರ 15ನೇ ದಿನಕ್ಕೆ ಕಾಲಿಟ್ಟಿದೆ.


ಈ ಸಂದರ್ಭದಲ್ಲಿ ಟಿಪಿಜೆಪಿ ಆಲಮೇಲ ತಾಲೂಕಾ ಉಪಾಧ್ಯಕ್ಷರಾದ ಮಂಜುಕುಮಾರ ಕಾಂಬಳೆ ಮಾತನಾಡಿ, ಇಲ್ಲಿಯವರೆಗೂ 15 ದಿನಗಳ ವರೆಗೆ ನಿರಂತರ ಶಾಂತ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದು ಇರುತ್ತದೆ. ಆದರೂ ಸರ್ಕಾರ ಸ್ಪಂದಿಸದೆ ಇರುವುದು ಸರ್ಕಾರದ ನಿಷ್ಕಾಳಜಿತನ ಎತ್ತಿ ತೋರಿಸುತ್ತದೆ. ಕೂಡಲೇ ಶೀಘ್ರವಾಗಿ ನಮ್ಮ ಹಣವನ್ನು ನಮಗೆ ಮರಳಿಸಬೇಕು ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸದೆ ಇದ್ದರೆ ಮುಂದಿನ ದಿನಮಾನಗಳಲ್ಲಿ ನಾವು ಉಗ್ರವಾದ ಹೋರಾಟ ಹಮ್ಮಿಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಬಾಬು ಪಟೇಲ ಬಿರಾದಾರ ಮಾತನಾಡಿ, ಸರ್ಕಾರ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬಡವರ ಮೇಲಿನ ಕಾಳಜಿ ವಹಿಸದೆ ನಿರ್ಲಕ್ಷö್ಯ ತೋರಿಸುತ್ತಿರುವುದು ದುರದುಷ್ಟಕರವಾಗಿದೆ. ಆದಷ್ಟು ಬೇಗನೆ ಬಡವರ ಹಣವನ್ನು ಮರಳಿಸಿ ಬಡವರ ಜೀವನವನ್ನು ಉಳಿಸಬೇಕು ಎಂದರು.

ಈ ಸಂದÀರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್.ಬಿ. ಸಿನ್ನೂರ, ಕಾರ್ಯದರ್ಶಿ ಆರ್.ಕೆ. ದೊಡಮನಿ, ಮಂಜು ಕಾಂಬಳೆ, ಲಾಲಸಾಬ ವಾಲೀಕಾರ, ಆರ್.ಪಿ. ಮಹೇಂದ್ರಕರ, ಯಶವಂತ ಗಾಯಕವಾಡ, ಬಿ.ಎಂ.ಬಿರಾದಾರ, ಸುರೇಶ ಹಡಪದ, ಸಂಗಣ್ಣ ಪೀರಾಪೂರ, ಮಲ್ಲಮ್ಮ ಕಾಂಬಳೆ, ನೀಲಮ್ಮ ಲೋಣಿ, ಶ್ಯಾಮಲಾಬಾಯಿ ಈರನಕೇರಿ, ನೀಲಮ್ಮ ವಸ್ತçದ, ನಾಗಮ್ಮ ಬಿರಾದಾರ ಸೇರಿದಂತೆ ನೂರಾರು ನೊಂದ ಗ್ರಾಹಕರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment