Wednesday, August 14, 2024

ಅಖಂಡ ಭಾರತ ತುಂಡು.. ತುಂಡು..ಸಮಸ್ಯೆಗಳು.!

 


 ಸಮಸ್ತ ಭಾರತೀಯರೀಗ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದಲ್ಲಿ ಮುಳುಗಿದ್ದಾರೆ. ಇದು ಸಕಲ ಭಾರತೀಯರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ದೇಶದ ಪ್ರಗತಿ ಕುಂಟುತ್ತ ಸಾಗಿದೆ. ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನಗಳು ಸರಿಯಾಗಿ ಸಿಗುತ್ತಿಲ್ಲ. ಉದ್ಯೋಗದ ಅವಕಾಶಗಳು ಪ್ರಬಲ ಪುರುಷರ ಜಾತಿ ಪಾಲಾಗಿದೆ. ಹೆಣ್ಣು ಮಕ್ಕಳ ದುಡಿಮೆಗೆ ಬೆಲೆಯಿಲ್ಲದಂತಾಗಿ, ಮಕ್ಕಳು ಮತ್ತು ಮಹಿಳೆಯರು ಶ್ರಮಜೀವಿಗಳಾಗಿ ಬದುಕುತ್ತಿದ್ದಾರೆ. ಮಹಿಳೆಯರ ರಾಜಕಾರಣ ಸ್ಥಿತಿಗತಿ ಅಯೋಮಯವಾಗಿದೆ. ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಅವರು ಆಯ್ಕೆಯಾಗಿದ್ದರೂ ಪುರುಷರೇ ಅಧಿಕಾರ ನಡೆಸುತ್ತಿದ್ದಾರೆ. ಉನ್ನತ ಶಿಕ್ಷಣದಿಂದ ಮಹಿಳೆಯರು ವಂಚಿತರಾಗುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ ಹುಡುಗಿಯರು ಪಿಯುಸಿಯ ನಂತರ ಅಡುಗೆ ಮನೆಗೆ ಸೇರಿಕೊಳ್ಳುತ್ತಾರೆ. ಅವರ ಉನ್ನತಿ ಸಂಸಾರದಲ್ಲಿ ಮಂಕಾಗುತ್ತದೆ. ಮಕ್ಕಳ, ಗಂಡನ ಅಂಡು ತೊಳೆಯುವುದರಲ್ಲಿಯೇ ಅವರು ಮುದುಕಿಯರಾಗುತ್ತಾರೆ. ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶ್ರೀಮಂತರ ಮನೆಯಲ್ಲಿ ಬಡವರ ಮನೆಯ ಹೆಣ್ಣುಮಕ್ಕಳು ಜೀತಕ್ಕೆ, ಗುಲಾಮಗಿರಿಗೆ ಒಂದು ಹೊತ್ತಿನ ಊಟಕ್ಕೆ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅದೇಷ್ಟೋ ಮಾನವ ಕಳ್ಳಸಾಗಣೆ ನಿರಂತರವಾಗಿ ನಡೆಯುತ್ತಿದೆ. ಸಮಾಜದಲ್ಲಿ ಭಿಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲಸವಿಲ್ಲದ ಯುವಕರು, ಯುವತಿಯವರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಸರ್ಕಾರದಂತಹ ಉನ್ನತ ಪರೀಕ್ಷೆಗಳು ಸ್ಫರ್ಧಾತ್ಮಕ ಪರೀಕ್ಷೆಗಳು ಲಂಚಕ್ಕೆ ಮಾರಾಟವಾಗುತ್ತಿವೆ. ಅಂಕಗಳು, ಅಂಕಪಟ್ಟಿಗಳು ಲಕ್ಷ ಲಕ್ಷ ರೂಪಾಯಿಗಳಿಗೆ ಬಹಿರಂಗವಾಗಿ ಮಾರಾಟವಾಗುತ್ತಿದೆ. ಶಿಕ್ಷಣ ಕ್ಷೇತ್ರಗಳು ಮತ್ತು ರಾಜಕಾರಣಿಗಳು, ಶ್ರೀಮಂತರು ಮಠದ ಧರ್ಮಗುರುಗಳು ಹಂಚಿಕೊಂಡು ಶಿಕ್ಷಣವನ್ನು ವ್ಯಾಪಾರಿಗಳು ಮಾಡುತ್ತಿದ್ದಾರೆ. ನಾಡಿನ ವಿಶ್ವವಿದ್ಯಾಲಯಗಳು ಪಿಎಚ್‌ಡಿ ಪದವಿ ನೀಡಲು ವಿದ್ಯಾರ್ಥಿಗಳನ್ನು ಶೋಷಣೆಮಾಡಿ ಹೆಚ್ಚಿನ ಹಣ ಕೀಳುತ್ತಾರೆ. ಪಿಎಚ್‌ಡಿ ಮುಗಿಸಿದ ವಿದ್ಯಾರ್ಥಿಗಳಿಂದ ಚಿನ್ನ, ಬೆಳ್ಳಿ, ಉಡುಗೊರೆಗಳನ್ನು ಒತ್ತಾಯ ಪೂರ್ವಕವಾಗಿ ಬಯಸುತ್ತಾರೆ. ಮಾರ್ಗದರ್ಶಕರು ಮಾರ್ಗ ತಪ್ಪಿದ್ದಾರೆ. ಪಿಎಚ್.ಡಿ., ಪದವಿ ಪಡೆದ ಬಡವರ ಮಕ್ಕಳು ದಿನಗೂಲಿ ಕೆಲಸಕ್ಕೆ ಸೇರಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಸೇಲ್ಸ್‌ಮನಗಳಾಗಿದ್ದಾರೆ. ಕೆಲವು ಲಂಚ ಕೊಟ್ಟು ನೌಕರಿ ಸೇರಿ ಕೊಟ್ಟ ಹಣಕ್ಕೆ ಲಂಚ ಪಡೆಯು ತ್ತಿದ್ದಾರೆ. ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಅಡುಗೆ ಅನೀಲ , ಅಕ್ಕಿ, ಬೆಳೆ, ಗೋಧಿ, ದಿನಸಿ ವಸ್ತುಗಳು ಶ್ರೀಮಂತರ ಕೈಗೆಟಕುತ್ತವೆ. ಬಡವರ ಕೈ ತಪ್ಪುತ್ತಿವೆ. ಕೇರಿಗೆ ಹಬ್ಬ ಹರಿದಿನಗಳಲ್ಲಿ ಜನಸಾಮಾನ್ಯರು ಪ್ರಯಾಣಿಸಬೇಕಾದರೆ ಬಸ್ ದರಗಳು ಬೇಕಾಬಿಟ್ಟಿಯಾಗಿ ಏರಿಕೆಯಾಗುತ್ತವೆ. ಸರ್ಕಾರಿ ಬಸ್ಸುಗಳು , ರೈಲುಗಳು, ವಿಮಾನಗಳು ಮುಂಗಾರು ಸೀಟು ಕಾಯ್ದಿರಿಸುವಿಕೆಯಲ್ಲಿ ಹೆಚ್ಚಿನ ಹಣವನ್ನು ಪಡೆಯುತ್ತಿವೆ. ಸರ್ಕಾರಿ ಕಚೇರಿಗಳು ಹಸಿದ ಭೂತಬರೆಹ. ಲಂಚವೆAಬ ಆಹಾರ ನೀಡಿದರೆ ಮಾತ್ರ. ಫೈಲು ಮುಂದು ಸರಿಯುತ್ತಿದೆ. ಇಲ್ಲದಿದ್ದರೆ ಉಪಯುಕ್ತ ಫೈಲ್ಗಳು (ಮೂಲವ್ಯಾದಿ) ಹೊರಬರುತ್ತದೆ. ಬದುಕು ತಂತಿಯ ಮೇಲೆ ನಡೆದಂತೆ ಭಾಸವಾಗುತ್ತಿದೆ. ಬಸ್ಸುಗಳಲ್ಲಿ ಸಂಚಾರ ಮಾಡುವಾಗ ಒಂದು ಕ್ಷಣದ ಸೀಟಿಗಾಗಿ ಜಗಳಗಳಾಗುತ್ತವೆ. ನ್ಯಾಯ ಬೆಲೆ ಅಂಗಡಿಯ ಸರದಿ ಸಾಲಿನಲ್ಲಿ ಯಾರೋ ಒಳನುಳಿಸಿದರೆ ಹೊರದೇಶಿ ಗಡಿ ಪ್ರವೇಶಿಸಿದಂತೆ ಜಗಳವಾಗುತ್ತಿವೆ. ಜನರು ಸಹನೆ ಕಳೆದುಕೊಳ್ಳುತ್ತಿದ್ದಾರೆ. ಯುವಕರು ಮತ್ತು ಯುವತಿಯರು ತುಂಬಾಕಿನ ದಾಸರಾಗಿದ್ದಾರೆ. ಮಾಧಕ ದ್ರವ್ಯಗಳ ವ್ಯಸನಿಗಳಾಗಿದ್ದಾರೆ. ಮಟ್ಕಾ, ಮಾವ, ಬೀದಿ, ಸಿಗರೇಟ್ ಮಾರಾಟ ನಿರಂತರವಾಗಿದೆ. ಗ್ರಂಥಾಲಯಗಳು, ಪುಸ್ತಕಗಳು, ಪುಸ್ತಕಗಳು ಕೈಗೆ ಸೇರದೆ ಕೊಳೆಯುತ್ತಿವೆ. ಮೊಬೈಲ್ ಬಂದು ಮನುಷ್ಯರ ಐಲುಗಳನ್ನು ಹೆಚ್ಚಿಗೆ ಗೊಳಿಸಿವೆ. ಪಾರ್ಲೆಜಿ ಬಯಸುವ ಮಕ್ಕಳು 5 ಜಿ ಮೊಬೈಲ್ ಬಯಸುತ್ತಿದ್ದಾರೆ. 

 ತಿನ್ನುವ ಆಹಾರ ಕಲುಷಿತಗೊಳ್ಳುತ್ತಿವೆ. ಪಾಸ್ಟ್ ಫುಡ್ಗಳು ಜನರ ಜೇಬಿಗೆ ಕತ್ತರಿ ಹಾಕುತ್ತಿವೆ. ಬದುಕು ಬದಲಾದಂತೆ ದೇಶದ ತುಂಬಾ ಬರೀ ಋಣಾತ್ಮಕ ಅಂಶಗಳೇ ಕಾಣುತ್ತಿವೆ. ಧನಾತ್ಮಕ ಅಂಶಗಳು ಕೊಳೆಯುತ್ತಿವೆ. ರೋಗರುಜಿನಗಳು ಹೆಚ್ಚಾಗಿವೆ. ಇತರರು ಮನಬಂದಂತೆ ಸುಳಿಯುತ್ತಿದ್ದಾರೆ. ರೋಗಿಗಳ ಆಸ್ಪತ್ರೆಗಳಿಗೆ ಹೋಗದೆ ಮನೆಯಲ್ಲಿಯೇ ಆಯುರ್ವೇದ ಚಿಕಿತ್ಸೆಗಳು ಹೆಚ್ಚು ಹೋಗುತ್ತಿವೆ. ಯೋಗ, ಧ್ಯಾನ, ಸಾತ್ವಿಕ ಚಿಂತನೆ ಆಧುನಿಕ ಬದುಕಿಗೆ ಚೈತನ್ಯ ನೀಡುತ್ತದೆ. 

 ಒಳ್ಳೆಯ ಸಾಧು, ಸಂತರು, ತತ್ವಜ್ಞಾನಿಗಳು, ಈ ದೇಶವನ್ನು ಕಟ್ಟಿದ್ದಾರೆ. ಈ ನೆಲದ ಸಂಸ್ಕೃತಿ ಪರಂಪರೆಯನ್ನು ಆಧುನಿಕತೆ ಹಾಳುಮಾಡುತ್ತಿವೆ. ಹಬ್ಬ ಹರಿದಿನಗಳು ಯಾಂತ್ರಿಕ ಸಮಯ. ಇಂತಹ ಸಂದರ್ಭದಲ್ಲಿ ದೇಶ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬನ್ನಿ ನಾವೆಲ್ಲ ಸೇರಿ ಒಂದೆ ಮಾತರಂ. ಜೈ ಹಿಂದ್ ಎನ್ನೋಣ...


ಕಲ್ಲಪ್ಪ ಶಿವಶರಣ

ಪತ್ರಕರ್ತ 

ಮೊ: 7204279187


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜು, ವಿಶ್ವವಿದ್ಯಾನಿಲಯ ವರದಿ, ಹೋರಾಟಗಾರರ ಮನವಿ, ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳ ಸಮಸ್ಯೆಗಳು ಸೇರಿದಂತೆ ಇತರ ಸುದ್ದಿಗಳು ಮತ್ತು ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸ್ವೀಕರಿಸಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗಿದೆ.


No comments:

Post a Comment