Friday, August 23, 2024

ಗಡಿ ಭಾಗದ ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯ ಒದಗಿಸಬೇಕು: ಬಿಜ್ಜರಗಿ



ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ: ಜಿಲ್ಲೆಯ ಮಹಾರಾಷ್ಟ್ರ ಗಡಿ ಭಾಗದ ಕನ್ನಡ ಶಾಲೆಗಳಿಗೆ ರಾಜ್ಯ ಸರ್ಕಾರ ಕನ್ನಡ ಭಾಷೆಯ ನಲಿಕಲಿ ಸಾಹಿತ್ಯವನ್ನು  ಒದಗಿಸಬೇಕು ಎಂದು ಯುವ ವಿಕಾಸ ಸಂಘದ ಸಂಸ್ಥಾಪಕ ಅಧ್ಯಕ್ಷ ಶ್ರೀಧರ ಬಿಜ್ಜರಗಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಹೊಂದಿಕೊಂಡಿರುವ ಮಹರಾಷ್ಟ್ರದ ಗಡಿಯಲ್ಲಿ ಅನೇಕ ಕನ್ನಡ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಕನ್ನಡದ ಶಾಲೆಗಳು ಕನ್ನಡ ಭಾಷೆ, ಸಾಹಿತ್ಯ ಸೇರಿದಂತೆ ಕನ್ನಡದ ಕಂಪನ್ನು ಮಹರಾಷ್ಟ್ರದ ನೆಲದಲ್ಲಿ ಪಸರಿಸುತ್ತಿವೆ. ಇನ್ನು ಕನ್ನಡ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದು ಕಲಿಯುತ್ತಿದ್ದಾರೆ. ಕನ್ನಡ ಶಾಲೆಗಳಿಗೆ ಮಹರಾಷ್ಟ್ರ ಸರ್ಕಾರ ಅನೇಕ ಸವಲತ್ತುಗಳನ್ನು ನೀಡಿದೆ. ಕನ್ನಡ ಶಾಲೆಗೆ ಉಚಿತ ಪುಸ್ತಕಗಳು, ನೋಟ ಬುಕ್ ಗಳು ಸೇರಿದಂತೆ ಪಠ್ಯಕ್ಕೆ ಬೇಕಾಗುವ ಉಪಕರಣಗಳನ್ನು ನೀಡುತ್ತಿದೆ. ಆದರೆ ನಲಿಕಲಿ ಸಾಹಿತ್ಯಗಳು ಮರಾಠಿಯಲ್ಲಿ ಒದಗಿಸಲಾಗಿದೆ. ಕಾರಣ ಕನ್ನಡದ ಕಂದಮ್ಮಗಳಿಗೆ ಅದನ್ನು ಕನ್ನಡದ ಶಿಕ್ಷಕರು ತರ್ಜುಮೆ ಮಾಡಿ ಹೇಳಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಕನ್ನಡದ ಪುಟಾಣಿ ಕಣ್ಮಣಿಗಳಿಗೆ ಅದನ್ನ ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ. ಕಾರಣ ಗಡಿ ಭಾಗದ ಕನ್ನಡ ಶಾಲೆಗೆ ರಾಜ್ಯ ಸರ್ಕಾರ ನಲಿಕಲಿ ಕನ್ನಡದ ಸಾಹಿತ್ಯಗಳನ್ನು ಒದಗಿಸಬೇಕು. ಇದರಿಂದ ಕನ್ನಡದ ಕಂದಮ್ಮಗಳಿಗೆ ಅನುಕೂಲವಾಗಲಿದೆ ಎಂದರು.

ರಾಜ್ಯದ ಎಲ್ಲ ಗಡಿ ಭಾಗದ ಕನ್ನಡ ಶಾಲೆಗೆ ನಲಿಕಲಿ ಕನ್ನಡದ ಸಾಹಿತ್ಯಗಳನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಯುವ ವಿಕಾಸ ಸಂಘದ ಸದಸ್ಯ ಪ್ರಕಾಶ ಮೇಟಿ, ಪ್ರವೀಣ ಕುರ್ಲೆ, ಸಚಿನ್ ಗದ್ಯಾಳ, ರಾಜಕುಮಾರ ಗೌಂಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



No comments:

Post a Comment