Wednesday, July 17, 2024

ಎಸ್‌ಎಮ್‌ಎನ್ ಸೌಹಾರ್ದ ಕ್ಲೇಮ್‌ಗಳ ಮಾನದಂಡ ಸಡಲಿಕೆಗೆ ಒತ್ತಾಯ



ವಿಜಯಪುರ: ಎಸ್‌ಎಂಎನ್ ಸೌಹಾರ್ದ ಕ್ಲೇಮ್‌ಗಳ ಮಾನದಂಡ ಸಡಲಿಕೆ ಮಾಡುವಂತೆ ಆಗ್ರಹಿಸಿ ರೈತ ಮುಖಂಡ ಹಾಗೂ ಎಸ್‌ಎಂಎನ್ ಸೌಹಾರ್ದ ಹೋರಾಟ ಸಮಿತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಒತ್ತಾಯಿಸಿದ್ದಾರೆ.

ನಗರದ ಗಗನ ಮಹಲ್‌ದಲ್ಲಿ ವಂಚಿತ ಠೇವಣಿದಾರರ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಎಂಎನ್ ಸೌಹಾರ್ದ ವಿವಿಧ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ತೊಡಗಿಸಿ ವಂಚನೆಗೊಳಗಾದ ಗ್ರಾಹಕರಿಗೆ ಹಣ ಮರುಪಾವತಿಸಲು ಬೆಂಗಳೂರಿನ ಸಹಾಯಕ ಪ್ರಾದೇಶಿಕ ಆಯುಕ್ತರು ಹಾಗೂ ಎಸ್‌ಎಂಎನ್ ಸೌಹಾರ್ದ ಸಕ್ಷಮ ಪ್ರಾಧಿಕಾರಿಯವರು ವಂಚಿತ ಠೇವಣಿದಾರರಿಗೆ ಕ್ಲೇಮ್‌ಗೆ ಅರ್ಜಿ ಸಲ್ಲಿಸಲು ಜು. 22, 2024 ರಿಂದ ಆ.21, 2024 ರವರೆಗೆ ಒಂದು ತಿಂಗಳ ಕಾಲಾವಧಿ ನಿಗದಿಪಡಿಸಿದ್ದಾರೆ. ಆದ್ದರಿಂದ ನಿಗದಿತ ಸಮಯಕ್ಕೆ ತಮ್ಮಲ್ಲಿರುವ ದಾಖಲಾತಿಗಳನ್ನು ಸಕ್ಷಮ ಪ್ರಾಧಿಕಾರಿ ಅವರಿಗೆ ಕ್ಲೇಮ್ ಸಲ್ಲಿಸಬೇಕು ಎಂದರು.

ಅಲ್ಲದೆ ಕ್ಲೇಮ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹಲವು ಮಾನದಂಡಗಳನ್ನು ಅಳವಡಿಸಿದ್ದು, ಠೇವಣಿದಾರರಿಗೆ ಸಕ್ಷಮ ಪ್ರಾಧಿಕಾರಿಯವರು ಕೇಳಿದ ಮಾನದಂಡಗಳಲ್ಲಿ ಕೆಲವು ಮಾನದಂಡಗಳು ಪೂರೈಸಲು ಸಾಧ್ಯವಿಲ್ಲ. ನಾಮಿನಿ ಇದ್ದವರಿಗೆ ಒಂದು ಸಂದರ್ಭದಲ್ಲಿ ಡಿಪಾಜಿಟರ್ ಮೈತರಾದ್ದಲ್ಲಿ ನೇರವಾಗಿ ನಾಮಿನಿ ಇದ್ದವರಿಗೆ ಡಿಪಾಜಿಟ್‌ಬಾಂಡ್ ಪಡೆದುಕೊಂಡು ನೇರವಾಗಿ ಅವರ ಖಾತೆಗೆ ಹಣ ಜಮೆಮಾಡಬೇಕು. ಆದರೆ ವಂಶಾವಳಿ ಮತ್ತು ಉತ್ತರ ಜೀವಿತ, ವಾರ್ಸಾ ಇವೆಲ್ಲವುಗಳನ್ನು ಕೇಳಿದ್ದು ಕೇವಲ ಒಂದೇ ತಿಂಗಳಲ್ಲಿ ಇವೆಲ್ಲಗಳನ್ನು ತಹಶೀಲ್ದಾರ್ ಕಚೇರಿಯಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ದೂಷಿತ ಸೌಹಾರ್ದದಿಂದ ಮ್ಯಾನೇಜರ್ ಅವರಿಂದ ದೃಢೀಕರಿಸಲ್ಪಟ್ಟ ಉಳಿತಾಯ ಖಾತೆಯ ನಕಲು ಪ್ರತಿಯನ್ನು ಕೇಳಿದ್ದಾರೆ. ಆದರೆ ದೂಷಿತ ಸೌಹಾರ್ದದ ಎಲ್ಲ ಶಾಖೆಗಳು ಬಂದ್‌ಗೊಳಿಸಿದ್ದರಿAದ ವಂಚಿತಗ್ರಾಹಕರು ಈ ದಾಖಲೆಗಳನ್ನು ಎಲ್ಲಿಂದ ಪೂರೈಸಬೇಕು ಇದರ ಕುರಿತು ಸಕ್ಷಮ ಪ್ರಾಧಿಕಾರ ಸ್ಪಷ್ಟಪಡಿಸುವುದು ಅಗತ್ಯವಿದೆ ಎಂದು ಆಗ್ರಹಿಸಿದರು.

ಈ ಸಭೆಯಲ್ಲಿ ಎನ್.ಕೆ. ಮನಗೊಂಡ, ಐ.ಬಿ. ಸಾರವಾಡ, ಎಸ್.ಜಿ. ಸಂಗೊAದಿಮಠ, ಕೆ.ಡಿ.ನರಗುಂದ, ಬಸವರಾಜ ಅವಟಿ, ಬಸವರಾಜ ಚಿಕ್ಕೊಂಡ, ಬಸವರಾಜ ಬಾಡಗಿ, ಬಸವರಾಜ ನಂದಿಹಾಳ, ಮುಕ್ಕಪ್ಪ ಹುದ್ದಾರ, ಮಹಾಂತೇಶ ನಡಕಟ್ಟಿ, ಶರಣಪ್ಪ ಕಲ್ಲೂರ, ಶಾಂತಪ್ಪ ಪಾಟೀಲ, ಜಿ.ಜಿ.ಬಳ್ಳಿಗೇರ, ಶಿವಪ್ಪ ಚಂದಾನವರ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



No comments:

Post a Comment