Friday, July 12, 2024

ವಿಶೇಷ ಚೇತನರಲ್ಲಿ ವಿಶೇಷವಾದ ಶಕ್ತಿ ಇದೆ. ಅದನ್ನು ಹೊರಹಾಕಬೇಕಷ್ಟೇ: ರಿಷಿ ಆನಂದ

ವಿಜಯಪುರ: ಜೀವನದಲ್ಲಿ ಗುರಿ ಇರಬೇಕು ಇದನ್ನು ಸಾಧಿಸಲು ವಿಶೇಷ ಚೇತನ ಮಕ್ಕಳಿಗೆ ಪಾಲಕರು ಬಹಳ ಶ್ರಮ ವಹಿಸಿ ಕಾಳಜಿ ವಹಿಸಿ ಅವರ ಮೇಲೆ ನಿಗಾ ವಹಿಸಿ ಅವರನ್ನು ಸಾಧನೆಗೆ ಪ್ರೇರೆಪಿಸುವ ಕೆಲಸಮಾಡಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹೇಳಿದರು.

ನಗರದ ಸರಕಾರಿ ಪಬ್ಲಿಕ್ ಸ್ಕೂಲ್ ಗಾಂಧಿ ಚೌಕದ ಶಾರದಾ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ವಿ ಹಿಯರ್ ಸಂಸ್ಥೆಯ ಯಸ್ ಬ್ಯಾಂಕ್ ಸಹಯೋಗದಲ್ಲಿ ಜಿಲ್ಲೆಯ 04 ವಲಯಗಳಾದ ಇಂಡಿ, ಸಿಂದಗಿ, ವಿಜಯಪುರ ನಗರ, ಹಾಗೂ ವಿಜಯಪುರ ಗ್ರಾಮೀಣಗಳಲ್ಲಿ ಶ್ರವಣದೋಷ ಹೊಂದಿದ ವಿಶೇಷ ಚೇತನ ಮಕ್ಕಳಿಗೆ ಶ್ರವಣೋಪಕರಣ ವಿತರಣಾ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಮಕ್ಕಳ ಪಾಲನೆ, ಪೋಷಣೆ ಮಾಡುವುದು ಪಾಲಕ ಜವಾಬ್ದಾರಿಯಾಗಿದೆ ಹಾಗೂ ಇಂತಹ ಮಕ್ಕಳಿಗೆ ನೂನ್ಯತೆಯು ಯಾವುದೇ ಕಾರಣದಿಂದ ಅಡ್ಡಿಯಾಗಬಾರದು, ಯಾವುದೇ ಸಮಸ್ಯೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಬೇಕೆಂದರು. ವಿಶೇಷ ಚೇತನರಲ್ಲಿ ವಿಶೇಷವಾದ ಶಕ್ತಿ ಇದೆ. ಅದನ್ನು ಹೊರಹಾಕಬೇಕಷ್ಟೇ ಎಂದರು.


ಈ ಸಂದರ್ಭ ವಿಜಯಪುರ ಜಿಲ್ಲಾ ಉಪ ನಿರ್ದೇಶಕ ಎನ್.ಎಸ್.ನಾಗೂರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೇಷ ಚೇತನ ಮಕ್ಕಳು ಹಾಗೂ ಪಾಲಕರು ಶ್ರವಣೋಪಕರಣಗಳನ್ನು ಪಡೆದುಕೊಂಡು ಅದನ್ನು ಬಳಸುವ ವಿಧಾನವನ್ನು ತಿಳಿಸುತ್ತಾರೆ, ಅದನ್ನು ತಿಳಿದುಕೊಂಡು ಜಾಗೃತಿಯಿಂದ ಬಳಸಬೇಕೆಂದರು.



ಈ ಸಂದರ್ಭ ಜಿಲ್ಲಾ ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ನಿರ್ದೇಶಕ ರಾಜಶೇಕರ ದೈವಾಡಗಿ ಮಾತನಾಡಿ, ಸಾಮಾನ್ಯ ಮಕ್ಕಳನ್ನು ನಿಭಾಯಿಸುವಾಗ ಕಷ್ಟವಾಗಿರುವಾಗ ಇಂತ ಮಕ್ಕಳನ್ನು ಸಾಕಿ ಅವರಿಗೆ ಶಿಕ್ಷಣ ಕೊಡುವುದು ತುಂಬಾ ಕಷ್ಟ ಅದೇ ರೀತಿ ಅಧಿಕಾರಿಗಳಲ್ಲಿ ಇಚ್ಚಾ ಶಕ್ತಿ ಇರಬೇಕು ಅಂದರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಒಂದು ಅಂಗ ದುರ್ಬಲವಾದರೆ ಅದರ ಶಕ್ತಿ ಸಾಮರ್ಥ್ಯವನ್ನು ದೇವರು ಬೇರೆ ಅಂಗಕ್ಕೆ ಕೊಟ್ಟಿರುತ್ತಾರೆ ಎಂದರು.

ಈ ಸಂದರ್ಭ ವಿಜಯಪುರ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಅಂಗ ವಿಕರ ಶಿಕ್ಷಣವನ್ನು ಮೊದಲು ಖಾಸಗಿ ಸಂಸ್ಥೆಗಳಿಗೆ ಕೊಡಲಾಗಿತ್ತು ಅದನ್ನು 2005ರಿಂದ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು. ಇಲ್ಲಿ ನೀಡುವ ವಿಕಲ ಚೇತನಮಕ್ಕಳಿಗೆ ಭತ್ಯೆಗಳನ್ನು ನೇರವಾಗಿ ತಲಪುವಂತೆ ಮಾಡಲಾಗುತ್ತದೆ ಇದರಿಂದ ಎಲ್ಲಿಯೂ ಹಣ ದುರ್ಬಕೆಯಾಗುವದಿಲ್ಲವೆಂದರು. ಮಂಜುನಾಥ ಎ ಗುಳೇದಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಯಸ್ ಬ್ಯಾಂಕ್‌ನ ಶಕಿಲಬಾಷಾ, ವಿ. ಹಿಯರ್ ವಾಗೇಲಾ ಸುದೀಪ ವೇದಿಕೆಯಲ್ಲಿದ್ದರು.

ಇದೇ ಸಂದರ್ಭ ಜಿಲ್ಲೆಯ ಎಲ್ಲ ವಲಯದ ಬಿಐಇಆರ್‌ಟಿಗಳು ಹಾಗೂ ವಿಶೇಷ ಚೇತನ ಮಕ್ಕಳು ಭಾಗವಹಿಸಿದ್ದರು.

ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಶ್ರೀಮತಿ ಟಿ.ಎಸ್.ಕೋಲ್ಹಾರ ರವರು ಸ್ವಾಗತಿಸಿದರು.

ಕಾರ್ಯಕ್ರಮವನ್ನು ಸಹಾಯಕ ಸಮನ್ವಯಾಧಿಕಾರಿ ಶಿವಾನಂದ ಪಡಶೆಟ್ಟಿ ನಿರೂಪಿಸಿದರು.

ಸಹಾಯಕ ಸಮನ್ವಯಾಧಿಕಾರಿ ಆರ್.ಬಿ.ಪಾಟೀಲ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment