Wednesday, July 10, 2024

ಹಳೆಯ ಸಂಸತ್ ಭವನದ ಮೂಲ ಸ್ಥಳದಲ್ಲಿ ಪುನಃ ಪುತ್ಥಳಿ ಸ್ಥಾಪಿಸಲು ಆಗ್ರಹ



ವಿಜಯಪುರ : ನವದೆಹಲಿಯ ಐತಿಹಾಸಿಕ ಮಹತ್ವದ ಹಳೆಯ ಸಂಸತ್ ಭವನದ ಮುಂದಿದ್ದ, ರಾಷ್ಟçದ ಮಹಾನ್ ನಾಯಕರಾದ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ತೆರುವುಗೊಳಿಸಿದನ್ನು ಖಂಡಿಸಿ ಬುದ್ಧ, ಬಸವ, ಅಂಬೇಡ್ಕರ್ ಸೇವಾ ಸಂಸ್ಥೆಯವತಿಯಿAದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ರ‍್ಯಾಲಿಯ ನೇತೃತ್ವ ವಹಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಸೇವಾ ಸಂಸ್ಥೆಯ ಅಧ್ಯಕ್ಷ ತುಳಸಿರಾಮ ಹರಿಜನ ಮಾತನಾಡಿ, ಭಾರತೀಯ ಚರಿತ್ರೆಯ ಪುಟದಲ್ಲಿ ಅಜರಾಮರವಾಗಿ ಉಳಿದ ವಿಶ್ವಮಾನ್ಯ ಅಮೂಲ್ಯ ರತ್ನಗಳೆಂದರೆ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಂತಹ ಮಹಾನ್ ನಾಯಕರಿಗೆ ಗೌರವ ಸಲ್ಲಿಸುವ ದ್ಯೋತಕವಾಗಿ ಹಿಂದಿನ ನಾಯಕರು ರಾಷ್ಟçದ ಐತಿಹಾಸಿಕ ಸಂಸತ್ ಭವನದ ಮುಂದೆ ಪುತ್ಥಳಿಗಳನ್ನು ನಿರ್ಮಿಸಿ ಚರಿತ್ರೆಯ ಪುಟದಲ್ಲಿ ಅಚ್ಛಳಿಯದಂತೆ ನೋಡಿಕೊಂಡಿದ್ದರು. ಆದರೆ ದೇಶದಲ್ಲಿರುವ ಈಗಿನ ಕೇಂದ್ರ ಸರ್ಕಾರ ಯಾವುದೇ ಸಕಾರಣವಿಲ್ಲದೇ ಏಕಾಏಕಿ ಪ್ರತಿಮೆಗಳನ್ನು ತೆರವುಗೊಳಿಸಿರುವ ಕ್ರಮ ವಿಶ್ವವ್ಯಾಪಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಅಸಂಖ್ಯಾತ ಅನುಯಾಯಿಗಳಿಗೆ ಆಘಾತವನ್ನುಂಟು ಮಾಡಿದೆ. ಕೂಡಲೇ ರಾಷ್ಟçಪತಿಗಳು ಹಳೆಯ ಸಂಸತ್ ಭವನದ ಮೂಲ ಸ್ಥಳದಲ್ಲಿ ಪುನಃ ಪ್ರತಿಷ್ಠಾಪಿಸುವ ಮೂಲಕ ಗೌರವ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭ ಯುವ ಮುಖಂಡ ಪ್ರತಾಪ ಚಿಕ್ಕಲಕಿ ಮಾತನಾಡಿ, ವಿದೇಶ ಮೂಲದ ಪರಕೀಯ ದಾಳಿಕೋರರ ದಾಳಿಗೆ ತುತ್ತಾದ ವಿಶ್ವಪ್ರಸಿದ್ಧ ನಳಂದಾ ವಿಶ್ವವಿದ್ಯಾಲಯವನ್ನು ಮರು ನಿರ್ಮಾಣ ಮಾಡುವ ಮೂಲಕ ಭಾರತವು ಎಲ್ಲ ದಾಳಿಗಳನ್ನು ತಡೆದುಕೊಂಡು ಮತ್ತೆ ಮತ್ತೆ ಪುಟಿದೇಳುತ್ತದೆ ಎಂಬುದನ್ನು ಸಾಬೀತು ಪಡಿಸಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ. ಇಂತಹ ಪ್ರಧಾನ ಮಂತ್ರಿಯವರು ಹಳೆಯ ಸಂಸತ್ ಭವನ ಮುಂದಿನ ಛತ್ರಪತಿ ಶಿವಾಜಿ ಮಹರಾಜರು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗಳನ್ನು ಯಾವ ಉದ್ದೇಶಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂಬುದನ್ನು ದೇಶದ ಜನತೆಗೆ ಮನವರಿಕೆ ಮಾಡಿಕೊಡಬೇಕು ಜೊತೆಗೆ ಮೂಲ ಸ್ಥಳದಲ್ಲಿಯೇ ಪುನಃ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿದರು. 

ಇದೇ ಸಂದರ್ಭ ಮುಖಂಡರಾದ ಜಿತೇಂದ್ರ ಕಾಂಬಳೆ, ಮತೀನಕುಮಾರ ದೇವದರ, ವೈ.ಸಿ. ಮಯೂರ, ಭಾರತಿ ಹೊಸಮನಿ, ನಾಗೇಶ ತಳಕೇರಿ, ಪರಶುರಾಮ ಚಲವಾದಿ, ರಮೇಶ ಕವಲಗಿ, ಅಕ್ಷಯ ಅಜಮನಿ, ಬಸವಕುಮಾರ ಕಾಂಬಳೆ, ಗೋಪಿನಾಥ ಚಲವಾದಿ, ಪ್ರದೀಪ ಚಲವಾದಿಯವರು ಮಾತನಾಡಿದರು. 

ಈ ಸಂದರ್ಭ ಸಂಜು ಮೇಲಿನಮನಿ, ರಘು ಕಣಮೇಶ್ವರ, ಮಲ್ಲು ಜಾಲಗೇರಿ, ವಿವೇಕ ಶಾಹಾಪೂರ, ವೆಂಕಟೇಶ ವಗ್ಯಾಣವರ, ಸಿದ್ಧು ರಾಯಣ್ಣವರ, ಶಂಕರ ಚಲವಾದಿ, ಸಂಜು ಕಂಬಾಗಿ, ಆಕಾಶ ಕಲ್ಲವಗೋಳ, ಬಾಗ್ಯಶ್ರೀ ವಗ್ಯಾಣವರ, ಲಕ್ಷö್ಮಣ ಬಿರಾದಾರ, ಮಲ್ಲಿಕಾರ್ಜುನ ಪಾಟೀಲ, ಲಕ್ಷö್ಮಣ ಚಲವಾದಿ, ರೋಹಿತ ಮಲಕಣ್ಣವರ, ಮಂಜುನಾಥ ಶಿವಶರಣ, ರಮೇಶ ಕಾಂಬಳೆ, ಅಪ್ಪಾಸಾಬ ಬನಸೋಡೆ, ಮಲ್ಲು ಬನಸೊಡೆ, ವಿಕಾಸ ಹೊಸಮನಿ, ರುದ್ರು ಬನಸೋಡೆ ಇದ್ದರು.

ಇದಕ್ಕೂ ಮುನ್ನ ಪ್ರತಿಭಟನಾ ರ‍್ಯಾಲಿಯು ನಗರದ ಶ್ರೀ ಸಿದ್ದೇಶ್ವರದಿಂದ ಆರಂಭಗೊAಡು ಗಾಂಧಿವೃತ್ತ, ಬಸವೇಶ್ವರ, ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿತು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment