Thursday, June 6, 2024

ಅರಣ್ಯ ಉಳಿಸಿ ಬೆಳೆಸುವ ಕಾರ್ಯವಾಗಲಿ ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ :  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯಪುರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಜಯಪುರ, ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಬಿ.ಎಲ್.ಡಿ.ಇ. ಸಂಸ್ಥೆ ವಿಜಯಪುರ ಇವರ ಸಂಯುಕ್ತಾ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯವಾಗಿ ಸಸಿ ನೇಡುವ ಕಾರ್ಯಕ್ರಮದಲ್ಲಿ ಶ್ರೀ. ರಮೇಶ ಎಸ್. ಕಡಪಟ್ಟಿ, ಪರಿವೀಕ್ಷಣಾಧಿಕಾರಿಗಳು, ಸರಕಾರಿ ವೀಕ್ಷಣಾಲಯ ವಿಜಯಪುರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜೂನ ತಿಂಗಳಿನಲ್ಲಿ ನೆಟ್ಟಿರುವ ಸಸಿಗಳು ಮರವಾಗಿವೆ. ಅದೇ ರೀತಿ ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ನೆಟ್ಟಿರುವ ಸಸಿಗಳನ್ನು ಮಗುವಿನಂತೆ ಗಾಳಿ ಮಳೆ ರಬಸದಲ್ಲಿ ಬೀಳದಂತೆ ಮುನ್ನೆಚರಿಕೆ ವಹಿಸಿರುವ ಕಾರಣಕ್ಕಾಗಿ ಇಂದು ಕಾನೂನಿನ ಸೌರಕ್ಷಣೆಗೆ ಒಳಗಾದ ಮಕ್ಕಳಿಗೆ ಹಾಗೂ ಪಾಲಕರಿಗೆ ನೇರಳಾಗಿವೆ. ಇದು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೆಮ್ಮೆ ತರುವ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಲ್ಲಿಕಾರ್ಜುನ ಅಪ್ಪಾಸಾಹೆಬ ಅಂಬಲಿ ಗೌರವಾನ್ವಿತ ಪ್ರೀನ್ಸಿಪಲ್ ಸಿನೀಯರ್ ಸಿವೀಲ್ ಜಡ್ಜ್, ಸಿ.ಜೆ.ಎಮ್. ಮತ್ತು ಸದಸ್ಯ ಕಾರ್ಯದರ್ಶಗಳು ಕಾನೂನು ಸೇವಾ ಪ್ರಾಧಿಕಾರ ವಿಜಯಪುರ ರವರು ಮಾತನಾಡಿ ಬಸವಾದಿ ಶರಣರು ಪರಮ ಪೂಜ್ಯ, ಸಿದ್ದೇಶ್ವರ ಸ್ವಾಮಿಜಿಯವರು ಹುಟ್ಟಿದ ನಾಡು ವಿಜಯಪುರ ಇತಿಹಾಸವನ್ನು ನಿರ್ಮಿಸಿದ ಗೋಲಗುಂಬಜ ಹೊಂದಿದ ಅಂತಹ ಹೆಸರುಳ್ಳ ನಾಡಿನಲ್ಲಿ ಇಂದು ನಾವು ಈ ವಿಶ್ವ ಪರಿಸರದ ದಿನದಂದು ಸಸಿ ನೇಡುವುದರ ಜೊತೆಗೆ ಪರಿಸರ ಉಳಿಸಿ ಬೆಳೆಸುವುದು ಮಹತ್ತರ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು. 

ಆ ನಿಟ್ಟಿನಲ್ಲಿ ನಮ್ಮ ರ‍್ವಜರು, ನಮ್ಮ ಹಿರಿಯರು ಪರಿಸರ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಇಂದು ತದ್ವಿರುದ್ದವಾಗಿ ಆಧುನಿಕರಣಕ್ಕೆ ಒಳಪಟ್ಟು ಪ್ರೀಡ್ಜ್, ಎ.ಸಿ., ಬಳಕೆ ಸಾಮಾನ್ಯವಾಗಿದೆ. ಈ ಒಂದು ಯಂತ್ರಗಳಿAದ ಹೊರಹೊಮ್ಮುವ ಕಲ್ಮಶಗಳಿಂದ ಓಝೋನ್ ಪದರಗಳಿಗೆ ರಂದ್ರಗಳಾಗುತ್ತಿರುವುದರಿAದ ಇಂದು ನಾವು ಏಚೇತ್ತವಾದ ಬೀಸಿಲಿನ ತಾಪವನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಇಂದು ಪರಿಸರ ದಿನದಂದು ನಾವು ಎಲ್ಲರೂ ಪ್ರಜ್ಞಾವಂತ ನಾಗರೀಕರಾಗಿ ಮನೆಗೊಂದು ಮರ ಬೆಳೆಸೋಣ ಮತ್ತು ನಮ್ಮ ಪೂರ್ವಜನರು, ಹಿರಿಯರು ಹಾಕಿ ಕೊಟ್ಟ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸುವುದರಿಂದ ಪರಿಸರ ಉಳಿಯಲು ನಾವು ಕಾರಣಿಭೂತರಾಗೋಣ ಅದರಂತೆ ಮುಂದಿನ ಪೀಳಿಗೆಗೆ ಆರೋಗ್ಯವಂತ ಪರಿಸರವನ್ನು ಕೊಡೋಣ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮುಖ್ಯ ಅತಿಥಿಗಳಾದ ಬಸವರಾಜ ಯಲಿಗಾರ, ಡಿ.ವಾಯ್.ಎಸ್.ಪಿ. ವಿಜಯಪುರ ಶಹರ ರವರು ಮಾತನಾಡಿ ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಿರಲಿ ಮತ್ತು ಒಬ್ಬ ಮನುಷ್ಯ ಜೀವನದಲ್ಲಿ ಸಾವಿರ ಸಸಿಗಳನ್ನು ನೆಟ್ಟು ಅವು ಮರವಾಗಿ ಬೆಳೆಯುವಂತೆ ನೀಗಾ ವಹಿಸೋಣ ಎಂದು ಕರೆ ನೀಡಿದರು. 

 ಶ್ರೀಕಾಂತ್ ಬಿರಾದಾರ್ ಆಪ್ತ ಸಮಾಲೋಚಕರು ಸರ್ಕಾರಿ ವೀಕ್ಷಣಾಲಯ ವಿಜಯಪುರ ರವರು ಮಾತನಾಡಿ ನಾವು ಹಳ್ಳಿಗಳಲ್ಲಿ ಪಕ್ಷಿಗಳ ದ್ವನಿಗಳನ್ನು ಕೇಳುವುದು ಸಹಜ ಆದರೆ ನಗರ ಪ್ರದೇಶಗಳ ಪಕ್ಷಿಗಳ ದ್ವನಿ ಕೇಳಿ ಬರುವುದು ತುಂಬಾ ವಿರಳ ಅದರ ತದ್ವಿರುದ್ದವಾಗಿ ಇಂದು ನಗರ ಪ್ರದೇಶದಲ್ಲಿರುವ ನಮ್ಮ ಸರಕಾರಿ ವೀಕ್ಷಣಾಲಯ ಆವರಣದಲ್ಲಿ ಸುಮಾರು 80 ಮರಗಳಿರುವ ಕಾರಣಕ್ಕಾಗಿ ಪಕ್ಷಿಗಳಲ್ಲಿ ಒಂದಾದ ಕೋಗಿಲೆಯ ಇಂಪಾದ ದ್ವನಿ ಕೇಳುತ್ತಿರುವುದು ಹೆಮ್ಮೆಯ ಸಂಗತಿ. ಸಂತೃಪ್ತಿಯನ್ನು ಹೊಂದಬೇಕಾದರೆ ದಿನನಿತ್ಯದ ಜೀವನದಲ್ಲಿ ಪರಿಸರವನ್ನು ಪ್ರೀತಿಸುವುದು, ಪರಿಸರದ ಕಾಳಜಿ, ಮತ್ತು ಪರಿಸರ ವೀಕ್ಷಣೆ ಮಾಡುವುದರಿಂದ ನಾವು ಒತ್ತಡ ಮುಕ್ತ ಜೀವನ ಸಾಗಿಸಲು ಸಾಧ್ಯವಿದೆ.

ಅಧ್ಯಕ್ಷರು ಶ್ರೀ ದೀಪಾಕ್ಷಿ ಜಾನಕಿ ಮಾನ್ಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ ರವರು ಮಾತನಾಡಿ ನಾವು ಮನೆಯಲ್ಲಿ ಮಕ್ಕಳನ್ನು ಹೇಗೆ ಪಾಲನೆ ಪೋಷಣೆ ಮಾಡುತ್ತೇವೆ ಹಾಗೆ ಒಂದು ಸಸಿಯನ್ನು ನೆಟ್ಟು ಮರವಾಗುವವರೆಗೆ ಆ ಸಸಿಯನ್ನು ನಾವು ಮಗುವಿನಂತೆ ಬೆಳೆಸೋಣ ಎಂದು ಸಂಕಲ್ಪನೆ ಮಾಡಿದರು. ಶ್ರೀಕಾಂತ್ ಬಿರಾದಾರ್ ಆಪ್ತ ಸಮಾಲೋಚಕರು ಸರ್ಕಾರಿ ವೀಕ್ಷಣಾಲಯ ವಿಜಯಪುರ ಇವರು ನಿರೂಪಿಸಿದರು. ಸುನೀಲ ಕಳಸನ್ನವರ. ಗೃಹಪಾಲಕರು, ಸರ್ಕಾರಿ ವೀಕ್ಷಣಾಲಯ ವಿಜಯಪ, ರಾಜೇಶ ಉಕ್ಕಲಿ ವಂದಣಾರ್ಪಣೆ ನೆರವೇರಿಸಿದರು. 

ರಮೇಶ ಕಡಪಟ್ಟಿ, ಪರಿವೀಕ್ಷಣಾಧಿಕಾರಿಗಳು ಸರಕಾರಿ ವೀಕ್ಷಣಾಲಯ, ಶ್ರೀ. ರಮೇಶ ಜಿ. ಕುಲಕರ್ಣಿ, ಮಾನ್ಯ ಸದಸ್ಯರು ಬಾಲ ನ್ಯಾಯ ಮಂಡಳಿ , ಪರಮೇಶ್ವರ ಕವಟಗಿ, ಸಿ.ಪಿ.ಐ. ಎಸ್.ಪಿ. ಆಫೀಸ್ ವಿಜಯಪುರ, ಶ್ರೀ ಶಿವಾನಂದ ಕಟ್ಟಿಮನಿ, ಎ.ಎಸ್.ಐ. ಸಂಚಾರಿ ಪೋಲಿಸ್ ಠಾಣೆ ವಿಜಯಪುರ, ಶ್ರೀಮತಿ ವಾಣಿಶ್ರೀ ನಿಂಬಾಳ, ಶ್ರೀ ವಿಜಯಕುಮಾರ ತಳವಾರ, ಎನ್.ಎಸ್.ಎಸ್. ಪ್ರೋಗ್ರಾಮ್ ಆಫೀಸರ್, ಎನ್.ಎಸ್.ಎಸ್ ಶಿಬರ‍್ಥಿಗಳು ಬಿ.ಎಲ್.ಡಿ.ಈ. ಎ.ಎಸ್. ಪಾಟಿಲ್ ಕಾಲೆಜ್ ವಿಜಯಪುರ, ಕುಮಾರಿ ಶೋಭಾ ಕಾಂಬಳೆ, ಶ್ರೀಮತಿ ಸಾವಿತ್ರಿ ಹಿಟ್ನಳ್ಳಿ, ಶ್ರೀಮತಿ ಸರಸ್ವತಿ ನುಚ್ಚನ್ನವರ, ಶ್ರೀ.ಕುಮಾರ ದೇವರಗುಡಿ, ಲಕ್ಷ್ಮಣ್ ಭಜಂತ್ರಿ, ಶ್ರೀ. ಚಂದ್ರಕಾAತ ವಾಂಡಕರ ಹಾಗೂ ಶ್ರೀಶೈಲ ಕಾಂಬಳೆ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment