Friday, June 21, 2024

"ಯೋಗ ಬಲ್ಲವನಿಗೆ ರೋಗವಿಲ್ಲ"



ಅಂತರಾಷ್ಟ್ರೀಯ ಯೋಗ ದಿನಚಾರಣೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಿಜಯಪುರದ ಗೋಲ್ ಗುಂಬಜ್ ಆವರಣದಲ್ಲಿ ದಿನಾಂಕ 21 ಜೂನ್ 2024 ರಂದು 10ನೇ ಅಂತಾರಾಷ್ಟ್ರೀಯ ಯೋಗವನ್ನು ಆಚಾರಿಸಲಾಯಿತು.

ಈ ವಿಶೇಷ ಯೋಗ ದಿನದ ನಿಮಿತ್ತ ವೃತ್ತಿಪರ ಯೋಗ ತರಬೇತುದಾರರಾದ ಶ್ರೀ. ಸುರೇಶ್ ಆನಂದಿ, ಅಂತರಾಷ್ಟ್ರೀಯ ಯೋಗದ ತೀರ್ಪುಗಾರರು, ಎವರಿಡೇ ಯೋಗ ಗುರುಗಳನ್ನು ಆವ್ಹಾನಿಸಲಾಗಿತ್ತು. ಇವರು ವಿವಿಧ ಯೋಗದ ವ್ಯಾಯಾಮಗಳನ್ನು ಶ್ಲೋಕದೊಂದಿಗೆ ಆರಂಭಿಸಿದ ಈ ಹಿಂದೆ ಖುಷಿ-ಮುನಿಗಳು ಮಾತ್ರ ಅಭ್ಯಾಸ ಮಾಡುತ್ತಿದ್ದ ಯೋಗವನ್ನು ಈಗ ಪ್ರತಿಯೊಬ್ಬರಲ್ಲೂ ಕಲಿಯುತ್ತಿದ್ದು, ವೈಜ್ಞಾನಿಕವಾಗಿ ಯೋಗದ ಮಹತ್ವ ಸಾಬೀತಾಗಿದೆ, ಯೋಗವು  ಒತ್ತಡವನ್ನು ನಿವಾರಿಸಲು ಮತ್ತು ಮಾನಸಿಕ ಶಾಂತಿಯನ್ನು ನೀಡಲು ಅತ್ಯುತ್ತಮ ಔಷಧವಾಗಿದೆ. ದಿನನಿತ್ಯದ ಯೋಗ ಪ್ರದರ್ಶನವು ಹಲವು ಪ್ರಯೋಜನಗಳಿಗೆ ಸಾಕ್ಷಿಯಾಗುತ್ತದೆ. ನಮ್ಮ ಜ್ಞಾನವೃಧ್ದಿ, ಮತ್ತು ಕೆಲಸದ ಕಾರ್ಯಕ್ಕೆ ಉತ್ತಮ ಸಾಧನೆವಾಗುತ್ತದೆ ಎಂದು ತಿಳಿಸುತ್ತಾ ವಿವಿಧ ಯೋಗಭ್ಯಾಸ ಜೊತೆಗೆ ಅದರ ಪ್ರಯೋಜನಗಳನ್ನು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ವಿಕಾಸ ಪ್ರಾಢಶಾಲೆ, ವಿಜಯಪುರ, ಎ.ಎಸ್.ಪಾಟೀಲ್ ವಾಣಿಜ್ಯ, ಕಾಲೇಜು, ವಿಜಯಪುರ ಹಾಗೂ ಸರ್ಕಾರಿ ಶಾಲೆ ನಂ. 03, ವಿಜಯಪುರದ ಶಾಲಾ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರಾದ ಎಸ್.ಎಂ. ಬಿರಾದರ್,, ಸಹ ಶಿಕ್ಷಕರರಾದ ಸಂಜೀವ್‍ಕುಮಾರ್, ವಿಜಯಕುಮಾರ್ ತಳವಾರ, ಮುಖ್ಯೋಪಾಧ್ಯಯರಾದ ಬಿ.ಡಿ. ಬೆಳೆಣೆನವರು, ಭಾಗವಹಿಸಿದರು. 

ವಿಶೇಷ ನೊಡಲ್ ಅಧಿಕಾರಿಯಾಗಿ ಶ್ರೀ. ರಾಕೇಶ್ ಸಿಂಧೆ, ಎ.ಎಸ್.ಎ.ಇ. ಧಾರವಾಡ ವಲಯ ಇವರು ಉಪಸ್ಥಿತರಿದ್ದರು, ಅಂತರರಾಷ್ಟ್ರೀಯ ಯೋಗದ ಪ್ರಾಮುಖ್ಯತೆ ಹಾಗೂ ಈ ವರ್ಷದ ಧ್ಯೇಯವಾಕ್ಯವಾದ "ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ" ಎಂಬುದರ ಬಗ್ಗೆ ತಿಳಿಸಿದರು.  ಜೊತೆಗೆ ಇಲಾಖೆಯ ಶ್ರೀ. ಎನ್. ಪ್ರಸನ್ನಕುಮಾರ್, ಶ್ರೀ. ವಿಜಯಕುಮಾರ್, ಶ್ರೀ. ಆರ್.ಎಂ.ಕರ್ಜಗಿ, ಶ್ರೀ ಮನೀಶ್‍ಕುಮಾರ್, ಶ್ರೀ ವಿಶ್ರøತ್‍ಗೌಡ,  ಹಾಗೂ ಇಲಾಖೆಯ ವಸ್ತುಸಂಗ್ರಹಾಲಯ, ಉಪವಲಯ, ಗಾರ್ಡನ್‍ನ ಎಲ್ಲಾ ಸಿಬ್ಬಂಧಿವರ್ಗ ಭಾಗವಹಿಸಿದರು. ನಿರೂಪಣೆಯನ್ನು ಶ್ರೀ ಬಿರಾದರುರವರು ಮಾಡಿದರು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment