ಈ ದಿವಸ ವಾರ್ತೆ
ವಿಜಯಪುರ : ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಮಾಧ್ಯಮಪಟ್ಟಿಯಲ್ಲಿರುವ ದಿನ ಮತ್ತು ಪ್ರಾದೇಶಿಕ ಪತ್ರಿಕೆಗಳು ತೀರಾ ಸಂಕಷ್ಟ ಅನುಭವಿಸುತ್ತಿವೆ. ಸರ್ಕಾರದ ಜಾಹೀರಾತುಗಳು ನೀಡುವಲ್ಲಿ ತಾರತಮ್ಯವಾಗುತ್ತಿವೆ. ರಾಜ್ಯಮಟ್ಟದ ಪತ್ರಿಕೆಗಳಿಗೆ ಹೆಚ್ಚಿನ ಜಾಹೀರಾತುಗಳನ್ನು ರಾಜ್ಯ ಸರ್ಕಾರ ನೀಡಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡದೇ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಗಂಭೀರ ಆರೋಪ ಮಾಡಿದರು.
ಅವರು ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ವಿಜಯಪುರ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರ ಪತ್ರಿಕೆಗಳಿಗೆ ಕಳೆದ ಒಂದು ವರ್ಷದಿಂದ ಜಾಹೀರಾತು ದರ ಪರಿಷ್ಕರಣೆ ಮಾಡಿಲ್ಲ. ಪ್ರಕಟಗೊಂಡ ಜಾಹೀರಾತುಗಳ ಮೊತ್ತವನ್ನು ಏಜೆನ್ಸಿಗಳಿಗೆ ಕೊಡದೇ ಸತಾಯಿಸುತ್ತಿವೆ. ಇದರಿಂದ ಪತ್ರಿಕೆಗಳನ್ನು ಮುನ್ನೆಡೆಸುವುದಕ್ಕೆ ಸಂಪಾದಕರಿಗೆ ತೀರ ಕಷ್ಟವಾಗಿದೆ. ಇಂತಹ ಕ್ಲೀಷ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಪತ್ರಿಕೆಗಳ ನೆರವಿಗೆ ಬಂದು ತಾರತಮ್ಯ ನೀತಿ ಅನುಸರಿಸದೇ ಜಾಹೀರಾತು ನೀತಿ ಪ್ರಕಾರ ಜಿಲ್ಲಾ ಪ್ರಾದೇಶಿಕ ಪತ್ರಿಕೆಗಳಿಗೆ ಎಲ್ಲಾ ಬಗ್ಗೆಯ ಜಾಹೀರಾತುಗಳನ್ನು ಬಿಡುಗಡೆ ಮಾಡಬೇಕು. ಬಾಕಿ ಇರುವ ಜಾಹೀರಾತು ಬಿಲ್ಲುಗಳನ್ನು ಪಾವತಿಸಬೇಕು. ಹಣ ಕೊಡದೇ ಸತಾಯಿಸುವ ಏಜೆನ್ಸಿಗಳ ಮೇಲೆ ಕಠಿಣ ಕ್ರಮ ಜರಗಿಸಬೇಕು. ಕಾಮಗಾರಿಗಳ ಮೌಲ್ಯಕ್ಕೆ ತಕ್ಕಂತೆ ಟೆಂಡರ್‌ಗಳನ್ನು ಜಿಲ್ಲಾ ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ದಿನ ಪತ್ರಿಕೆಗಳ ಸಂಪಾದಕರ ಸರ್ವಾನುಮತದ ನಿರ್ಣಯದಂತೆ ಗುಮ್ಮಟನಗರಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಮೊಹ್ಮದ್ ಇರ್ಪಾನ್ ಶೇಖ ಇವರನ್ನು ಅಧ್ಯಕ್ಷರನ್ನಾಗಿ ಮತ್ತು ಬಿಜಾಪುರ ವಾರ್ತಾ ಪತ್ರಿಕೆ ಸಂಪಾದಕರಾದ ಅವಿನಾಶ ಬಿದರಿ ಇವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಕೇಂದ್ರ ಸಂಘದ ಕಾರ್ಯಕಾರಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಕೆ.ಕೆ. ಕುಲಕರ್ಣಿ, ಮಾಧವರಾವ್ ಕುಲಕರ್ಣಿ, ರಾಜು ಕೊಂಡಗೂಳಿ ಇವರನ್ನು ನೇಮಕ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಚನ್ನಬಸವ, ಉಪಾಧ್ಯಕ್ಷರಾದ ಮಂಜುನಾಥಅಬ್ಬಿಗೇರಿ, ಕಾರ್ಯದರ್ಶಿ ರಶ್ಮೀ ಪಾಟೀಲ, ಸುಚೇಂದ್ರ ಲಂಬು, ಖಜಾಂಚಿ ಖಾನ್‌ಸಾಬ ಮೋಮೀನ, ಗದಗ ಜಿಲ್ಲಾಧ್ಯಕ್ಷ ನೂರಮಹ್ಮದ ಅ. ಮಕಾನದಾರ ಸೇರಿದಂತೆ ಜಿಲ್ಲಾ ಪತ್ರಿಕೆಗಳ ಸಂಪಾದಕರಾದ ವಿನೋದ ಸಾರವಾಡ, ಚಿದಂಬರ ಕುಲಕರ್ಣಿ, ಉಮೇಶ ಶಿವಶರಣ, ಕೌಶಲ್ಯ ಪನಾಳಕರ, ಲಕ್ಷ್ಮೀ ವಾಲೀಕಾರ, ಸೀತಾರಾಮ ಕುಲಕರ್ಣಿ, ಫಯಾಜ ಕಲಾದಗಿ, ರಜಾಕ ಬಾಗೇವಾಡಿ, ಪರಶುರಾಮ ಪವಾರ, ಶರತ ಅರ್ಜುಣಗಿ, ಯೂಸೂಪ್ ನೇವಾರ, ಮಲ್ಲಿಕಾರ್ಜಿನ ಮಠ, ಮಲಕು ಹೂಗಾರ, ಶ್ರೀನಿವಾಸ ಸೊರಗೊಂಡ ಮತ್ತಿತ್ತರು ಇದ್ದರು.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment