ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಬಯೋ ಇನ್ಫಮ್ರ್ಯಾಟಿಕ್ಸ್‍ನಲ್ಲಿ ಪಿಎಚ್‍ಡಿ ಗಳಿಸಿದ ಡಾ. ನಿವೇದಿತಾ ಎಸ್. ಪೂಜಾರಿ ನ್ಯೂಯಾರ್ಕ್‍ನ ಬ್ರಾಂಕ್ಸ್‍ನ ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್‍ನಲ್ಲಿ ಪೆÇೀಸ್ಟ್ ಡಾಕ್ಟರಲ್ ರಿಸರ್ಚ್ ಫೆಲೋ ಆಗಿ ಆಯ್ಕೆಯಾಗಿದ್ದಾರೆ.
ಡಾ.ನಿವೇದಿತಾ ಅವರು ಡಾಕ್ಟರೇಟ್ ಸಂಶೋಧನೆಯನ್ನು ಡಾ. ಜಾಯ್ ಎಚ್. ಹೊಸಕೇರಿ ಅವರ ಮಾರ್ಗದರ್ಶನದಲ್ಲಿ ಕೈಕೊಂಡಿದ್ದು, ಮೈನರ್ ಮಿಲೆಟ್‍ಗಳ ಆಂಟಿ-ಹೈಪರ್ಲಿಪಿಡೆಮಿಕ್ ಪರಿಣಾಮಗಳನ್ನು ಮತ್ತು ಅವುಗಳ ಮಾಲ್ಟ್ ಪೆÇ್ರೀಟೀನ್‍ಗಳನ್ನು ಪ್ರತಿಲೇಖನ ವಿಶ್ಲೇಷಣೆಯ ಮೂಲಕ ಸಂಶೋಧನೆ ಕೈಕೊಂಡಿದ್ದರು.
ಈಗ, ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್‍ನಲ್ಲಿ, ಡಾ. ನಿವೇದಿತಾ ಅವರು ನ್ಯೂರೋಟ್ರೋಪಿಕ್ ಹರ್ಪಿಸ್ ವೈರಸ್ ಅಸೆಂಬ್ಲಿ ಮತ್ತು ಟ್ರಾಫಿಕಿಂಗ್‍ನ ಮೈಕ್ರೋಸ್ಕೋಪಿಕ್ ಇಮೇಜಿಂಗ್ ವಿಶ್ಲೇಷಣೆ ಕುರಿತು ಸಂಶೋಧನೆ ನಡೆಸಲಿದ್ದು, ಪ್ರಾಯೋಜಕ ಸಂಸ್ಥೆಯಾದ ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್ ಡಾ.ನಿವೇದಿತಾ ಅವರಿಗೆ $58,179 ಡಾಲರ್ ಫೆಲೋಶಿಪ್ ನೀಡಿದೆ.
ಡಾ. ನಿವೇದಿತಾ ಅವರು ವೈಜ್ಞಾನಿಕ ಜ್ಞಾನವನ್ನು ಮುಂದುವರೆಸಲು ಅವರ ಸಮರ್ಪಣೆ, ಅವರ ಅಲ್ಮಾ ಮೇಟರ್ ಮತ್ತು ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್‍ನ ಬೆಂಬಲದೊಂದಿಗೆ, ಬಯೋಇನ್‍ಫಮ್ರ್ಯಾಟಿಕ್ಸ್ ಮತ್ತು ನ್ಯೂರೋಟ್ರೋಪಿಕ್ ವೈರಸ್ ಸಂಶೋಧನೆಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುವ ಭರವಸೆ ಇದೆ ಎಂದು ಡಾ.ಜಾಯ್ ಹೊಸಕೇರಿ ಆಶಯ ವ್ಯಕ್ತಪಡಿಸಿದ್ದಾರೆ.
ಡಾ.ನಿವೇದಿತಾ ಅವರ ಸಾಧನೆಗೆ ವಿವಿಯ ಕುಲಪತಿ ಡಾ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ ಅವರು ಅಭಿನಂದಿಸಿದ್ದಾರೆ.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.
ವಿಶಿಷ್ಟ, ಅರ್ಥಪೂರ್ಣ ವರದಿಗಳನ್ನು ಮತ್ತು ಉಪಯುಕ್ತ ಮಾಹಿತಿಗಳನ್ನು ತಿಳಿಸುವ ಪತ್ರಿಕೆ.
ReplyDelete