ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಂತೋಷ ಬಂಡೆ ಅವರ ಮಕ್ಕಳಾದ ಅನುಶ್ರೀ-ಶ್ರೀನಿಧಿ ಅವರ 5ನೇ ವರ್ಷದ ಜನ್ಮದಿನದ ನಿಮಿತ್ತ 'ಮೂಲ'-ಕಥಾ ಸಂಕಲನದ ಲೋಕಾರ್ಪಣೆ, ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಜಯಂತಿ,ವಿಶ್ವ ಕೈತೊಳೆಯುವ ದಿನ ಹಾಗೂ ಒಂದು ನೂರು ಸಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
'ಮೂಲ' ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ನಾದ ಕೆ ಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚಿದಂಬರ ಬಂಡಗರ,ಒಳ್ಳೆಯ ಪುಸ್ತಕಗಳು ನಮ್ಮ ಮನೆಯ ಸಂಪತ್ತು ಎಂಬ ಭಾವನೆ ಬೆಳೆದು ನಾಡಿನಾದ್ಯಂತ ಪುಸ್ತಕ ಸಂಸ್ಕ್ರತಿ ವ್ಯಾಪಿಸಬೇಕು ಎಂದು ಹೇಳುತ್ತಾ, ಎಪಿಜೆ ಅಬ್ದುಲ್ ಕಲಾಂ ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ. ಅವರು ದೇಶದ ಯುವಕರಿಗೆ ಉತ್ತಮ ಪಾಠಗಳನ್ನು ನೀಡಿ ಆದರ್ಶಪ್ರಾಯರಾಗಿದ್ದಾರೆ
ಎಂದು ಹೇಳಿದರು.
ಕೃತಿ ಪರಿಚಯಿಸಿ ಮಾತನಾಡಿದ ಸಾಹಿತಿ ಸಂಗೀತಾ ಮಠಪತಿ, ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಪತ್ತನ್ನು ಉಳಿಸಿ, ಬೆಳೆಸುವ ಕಾಳಜಿ ಈ ಮೂಲ ಕಥಾ ಸಂಕಲನದಲ್ಲಿದೆ.
ಒಂದೊಂದು ಕಥೆಗಳು ಜೀವನಕ್ಕೆ ಹೊಸ ಕಾಯಕಲ್ಪ ನೀಡುತ್ತವೆ ಎಂದು ಹೇಳಿದರು.
ಹಿರಿಯರಾದ ಸುಭಾಷ ಬಂಡೆ ಅಧ್ಯಕ್ಷತೆ ವಹಿಸಿದ್ದರು. ರಾಯಚೂರಿನ ಅಂಚೆ ಸಹಾಯಕ ರಾಮಣ್ಣ ವಾಲ್ಮೀಕಿ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಮಾತನಾಡಿದರು.
ಶಿಕ್ಷಕ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಶಿಕ್ಷಕ ಸಂಗಮೇಶ ಬಂಡೆ ಸ್ವಾಗತಿಸಿ, ಪರಿಚಯಿಸಿದರು. ಶರಣು ಮಸಳಿ, ಇಂಡಿ ಪಟ್ಟಣದ ಸಮಾಜ ಸೇವಕ ಹಸನ ಮುಜಾವರ, ಬಂಡೆ ಕುಟುಂಬದ ಈರಣ್ಣ, ಶ್ರೀಧರ, ಭುವನೇಶ್ವರಿ, ಸವಿತಾ, ಸುರೇಖಾ, ಸುಹಾಸಿನಿ, ಗಾಯಿತ್ರಿ ಸೇರಿದಂತೆ ಗ್ರಾಮಸ್ಥರು,ಗೆಳೆಯರು ಭಾಗವಹಿಸಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.
No comments:
Post a Comment