ಈ ದಿವಸ ವಾರ್ತೆ
ವಿಜಯಪುರ: ಇತ್ತೀಚಿನ ದಿನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಚಟುವಟಿಕೆ ನಡೆಯುತ್ತಿದೆ. ಅದು ಪ್ರಿಂಟಿಂಗ್ ಕ್ಷೇತ್ರದಲ್ಲಿಯೂ ಚಾಲ್ತಿಯಲ್ಲಿದೆ. ಇದರ ನಿಮಿತ್ಯವಾಗಿ ನಾವೆಲ್ಲರೂ ಸೇರಿಕೊಂಡು ಮುದ್ರಣ ಕ್ಷೇತ್ರದಲ್ಲಿ ಹೊಸದೊಂದು ದಾಖಲೆಯತ್ತ ಓಡುವುದು ಅನಿವಾರ್ಯವಾಗಿದೆ ಎಂದು ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಿದಾನಂದ ವಾಲಿ ಹೇಳಿದರು.
ನಗರದ ಖಾಸಗಿ ಹೊಟೇಲ್‍ವೊಂದರಲ್ಲಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್ ಅಸೋಸಿಯೇಷನ್ ವಿಜಯಪುರ (ರಿ) ಹಾಗೂ ಎ.ಎಸ್. ಡಿಜಿಟಲ್ ಪ್ರಿಂಟಿಂಗ್ ಸಲ್ಯೂಸೆನ್ಸ್ ವತಿಯಿಂದ ಥಿಂಕ್ ಡಿಜಟಲ್ ಯೋಜನೆಯಡಿಯಲ್ಲಿ ಡಿಜಟಲ್ ಪ್ರಿಂಟ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದಲಾಗುತ್ತಿರುವ ಭೌತಿಕ ಬದುಕು. ಸಂಘರ್ಷಕ್ಕೊಳಗಾಗಿದ್ದು, ಇದರಿಂದ ಹೊರಬರಬೇಕಾದರೆ, ಡಿಜಟಲ್ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ನಾವು ಪಸ್ತುದ ದಿನಗಳಿಗೆ ಅಪಡೇಟ್ ಆಗಬೇಕಿದೆ ಎಂದರು.
ಈ ಸಂದರ್ಭ ಆನಂದ ಬಾಗಾದಿ ಮಾತನಾಡಿ, ಮುದ್ರಣ ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಉದ್ಯೋಗ ಮಾಡುತ್ತ, ಹೊಸಬರಿಗೆ ಅವಕಾಶಗಳನ್ನು ನೀಡಲು ಮುಂದಾಗಬೇಕೆಂದರು ಎಂದರು.
ಅಲ್ತಾಫ್ ಹುಸೇನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಇದೇ ಸಂದರ್ಭ ಎ.ಎಸ್. ಡಿಜಿಟಲ್ ಪ್ರಿಂಟಿಂಗ್ ಸೆಲ್ಯೂಷನ್ ಮಾಲೀಕರಾದ ಅಬ್ದುಲ್ ಲತಿಪ್, ಖಜಾಂಚಿ ಹನೀಫ್ ಮುಲ್ಲಾ, ನಿರ್ದೇಶಕರುಗಳಾದ ನಾಗರಾಜ ಬಿಸನಾಳ, ನಬಿ ಮಕಾಂದಾರ, ಉಮೇಶ ಶಿವಶರಣ, ಈರಣ್ಣ ರೇಶ್ಮಿ, ಶ್ರೀಮಂತ ಬೂದಿಹಾಳ, ಮಾನಿಂಗಪ್ಪ ಗುಬ್ಬಿ, ಕಿರಣ ಅಲಿಯಾಬಾದ, ರಾಜಶೇಖರ ಮುತ್ತಿನಪೆಂಡಿಮಠ, ಆನಂದ ಪಾರಜಣ್ಣವರ, ಮಲ್ಲು ಆಲಗೂರ, ವಿರೇಶ ಗಂಗಾವತಿ, ಮಾಂತಯ್ಯ ಹಿರೇಮಠ, ಬಸವರಾಜ ಗೊಳಸಂಗಿಮಠ, ಬಸವರಾಜ ಬಿಜ್ಜರಗಿ, ವೀರಣ್ಣ ಸಜ್ಜನ, ರಾಹುಲ ಟೋಣೆ, ರಾಘು ಕುಲಕರ್ಣಿ, ಅನ್ವರ ಆಲಮೇಲ, ಶಣ್ಣೀರ ಬೇಪಾರಿ, ಮಾಜೀದ ಕೂಡಗಿ, ಉಬೇದ ಜಾಹಗೀರದಾರ ಮುಂತಾದ ಪ್ರಿಂಟಿಂಗ್ ಪ್ರಸ್ ಮಾಲೀಕರು ಉಪಸ್ಥಿತರಿದ್ದರು.
ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.
No comments:
Post a Comment