Monday, October 2, 2023

ಭಾರತಕ್ಕೆ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಕೊಡುಗೆ ಅವಿಸ್ಮರಣೀಯ

 ಈ ದಿವಸ ವಾರ್ತೆ

ವಿಜಯಪುರ: ಭಾರತ ದೇಶ ಸ್ವಾತಂತ್ರ್ಯಗೊಳ್ಳಲು ಗಾಂಧೀಜಿಯವರ ಹೋರಾಟ ಹಾಗೂ ಸ್ವಾತಂತ್ರ ನಂತರ ಭಾರತದ ಅಭಿವೃದ್ಧಿಗೆ ಶಾಸ್ತ್ರೀಯವರ ಕೊಡುಗೆಗಳು ಅವಿಸ್ಮರಣೀಯವಾಗಿವೆ. ಒಬ್ಬರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ,ಬ್ರಿಟಿಷರಿಂದ ನಮ್ಮ ದೇಶವನ್ನು ಬಿಡುಗಡೆಗೊಳಿಸಿದರೆ,ಇನ್ನೊಬ್ಬರು ಸ್ವತಂತ್ರ ಭಾರತದ ಏಳಿಗೆಗಾಗಿ ಹಗಲಿರಳು ದುಡಿದರು ಎಂದು ಪ್ರಾಂಶುಪಾಲ ಶ್ರೀ ಸಿ ಬಿ ನಾಟಿಕಾರ್ ಹೇಳಿದರು. ಮಹಾತ್ಮ ಗಾಂಧೀಜಿಯವರ ಸತ್ಯ, ತ್ಯಾಗ, ಅಹಿಂಸೆಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ನಾವು ಕೇವಲ ಜಯಂತಿಗಳನ್ನು ಆಚರಣೆ ಮಾಡಿದ ಮಾತ್ರಕ್ಕೆ ಅವರಿಗೆ ಗೌರವ ತೋರಿಸಿದಂತೆ ಅಲ್ಲ.ಅವರು ಹೇಳಿದ ತತ್ವಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು ಎಂದರು. ಇಂದು ನಡೆದ ಗಾಂಧೀಜಿಯವರ 154 ನೇ ಜಯಂತಿ ಹಾಗೂ ಶಾಸ್ತ್ರಿ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮವು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದರೊಂದಿಗೆ ಪ್ರಾರಂಭವಾಯಿತು. ನಂತರ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಕುರಿತು ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಎಸ್ ಬಿ ಸಾವಳಸಂಗ ವಚನಗಳನ್ನು ಓದಿದರು. ಬಿ ಎಸ್ ಬೇವಿನೂರು ವಚನಗಳ ಜೊತೆಗೆ ಬೈಬಲ್ ಮಂತ್ರಗಳನ್ನು ಪಠಿಸಿದರು.ಆರ್ ಎಂ ಜೋಶಿ ಭಗವದ್ಗೀತೆಯ ಮಂತ್ರವನ್ನು ಪಠಿಸಿದರು ಹಾಗೂ ಸಿ ಐ ದ್ಯಾಪುರ್ ಎಂ ವಿ ಸಿಂಗಾರೆ ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಿಕೊಟ್ಟರು.

ಈ ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕರಾದ ಶ್ರೀ ಎಸ್ ಬಿ ಸಾವಳಸಂಗ ನಡೆಸಿಕೊಟ್ಟರು. ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

No comments:

Post a Comment