ಈ ದಿವಸ ವಾರ್ತೆ
ವಿಜಯಪುರ: ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಸಿ ಬಿ ನಾಟಿಕಾರ್ರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಮೀನಾಕ್ಷಿ ಪಾಟೀಲ್ ಎನ್ಎಸ್ಎಸ್ ದಿನದ ಆಚರಣೆಯ ಉದ್ದೇಶ ಮತ್ತು ಆಶಯವನ್ನು ಹೇಳುತ್ತಾ, ಮಹಾತ್ಮ ಗಾಂಧೀಜಿಯವರ ಜನ್ಮ ಶತಾಬ್ದಿಯ ನೆನಪಿಗೋಸ್ಕರ ಕೇಂದ್ರ ಸರ್ಕಾರ ದಿನಾಂಕ 24.09 1969ರಲ್ಲಿ ಎನ್ಎಸ್ಎಸ್ ದಿನವೆಂದು ಆಚರಿಸಲು ನಿರ್ಧರಿಸಲಾಯಿತು. ಅಂದಿನ ಕೇಂದ್ರ ಶಿಕ್ಷಣ ಮಂತ್ರಿಗಳಾದ ಡಾಕ್ಟರ್ ವಿ.ಕೆ.ಆರ್ .ವಿ ರಾವ್ ಅವರಿಂದ ಉದ್ಘಾಟನೆಗೊಂಡಿತು. ಅಂದು ಕೇವಲ ದೇಶಾದ್ಯಂತ 37 ವಿಶ್ವವಿದ್ಯಾಲಯಗಳ 40,000 ವಿದ್ಯಾರ್ಥಿಗಳಿಂದ ಆರಂಭವಾದ ಈ ಘಟಕವು ಇಂದು 1 ಕೋಟಿ 48 ಲಕ್ಷ 999,400 ಸ್ವಯಂಸೇವಕರನ್ನು ಹೊಂದಿದ ಒಂದು ಬೃಹತ್ ಘಟಕವಾಗಿದೆ.
ವಿದ್ಯಾರ್ಥಿಗಳು ಪಠ್ಯದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆ ಅಂದರೆ ಏನ್ ಎಸ್ ಎಸ್ ದ ಮೂಲಕ ಸಮಾಜೋಪಯೋಗಿ ಕೆಲಸ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ಮತ್ತು ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ಸಮಾಜ ಮುಖಿಯಾಗಿ ಕೆಲಸ ಮಾಡಲು ಅವರಿಗೆ ಒಂದು ವೇದಿಕೆಯನ್ನು ಒದಗಿಸಿಕೊಡುವುದೇ ಈ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ದೇಶ. ಈ ಮೂಲಕ ಶ್ರಮದಾನಕ್ಕೆ ಹೆಚ್ಚು ಮಹತ್ವ ಕೊಟ್ಟು ಪರಿಸರದ ರಕ್ಷಣೆಗೆ ಮುಂದಾಗಬೇಕು. ತಮ್ಮ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ ಶ್ರಮದಾನವನ್ನು ಕೈಕೊಳ್ಳುವುದು ಇಲ್ಲಿ ಬಹು ಮುಖ್ಯವಾದದ್ದು. ಜೊತೆಗೆ ಈ ಮೂಲಕ ನೈತಿಕ ಶಿಕ್ಷಣವನ್ನು ಪಡೆಯುವದು, ಬೇರೆ ಬೇರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರವನ್ನ ಸ್ವಚ್ಚವಾಗಿಡುವಂತ ಕಾರ್ಯಕ್ಕೂ ಮುಂದಾಗಬೇಕು. ಇದರಿಂದ ಸಮಾಜದ ಜನರೊಂದಿಗೆ ಬೆರೆತು ಮುಂದೆ ನಾಯಕನಾಗುವ ಅವಕಾಶವನ್ನು ಪಡೆಯಬಹುದು ಇಂಥ ನಾಯಕತ್ವದ ಗುಣಗಳನ್ನು ಬೆಳೆಸುವುದು ಈ ಎನ್ಎಸ್ಎಸ್ ಘಟಕದ ವೇದಿಕೆಯ ಉದ್ದೇಶವೆಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಎನ್ಎಸ್ಎಸ್ ಘಟಕದ ಸ್ವಯಂಸೇವಕರಾಗಿರುವ ವಿದ್ಯಾರ್ಥಿನಿಯರು ಎನ್ಎಸ್ಎಸ್ ಗೀತೆಯೊಂದಿಗೆ ಪ್ರಾರ್ಥನ ಗೀತೆಯನ್ನು ಹೇಳಿದರು ಎನ್ ಎಸ್ ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾಕ್ಟರ್ ಮಹದೇವಿ ಸುಂಗಾರೆ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾನ್ಯ ಪ್ರಾಚಾರ್ಯರು ಹಾಗೂ ಹಿರಿಯ ಉಪನ್ಯಾಸಕರು ಅತಿಥಿ ಮಹೋದಯರು ಸಸಿಗೆ ನೀರು ಹನಿಸುವದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ವೇದಿಕೆಯ ಮೇಲೆ ಉಪಸ್ಥಿತರಿರುವ ಹಿರಿಯರಾದ ಶ್ರೀ ಎಸ್ ಬಿ ಸಾವಳಸಂಗ , ಶ್ರೀಮತಿ ಎಂಎಂ ದಖನಿ ಶ್ರೀಎಂ ಬಿ ರಜಪೂತ್, ಶ್ರೀ ತೋಳ್ನೂರ್ ಉಪನ್ಯಾಸಕರು, ಶ್ರೀಮತಿ ಶೈಲಜಾ ಕರಣಿ ಶ್ರೀ ಆರ್ ಸಿ ಹಿರೇಮಠ, ಮೇತ್ರಿ , ಡಾ. ಸವಿತಾ ಜಳಕಿ, ಮುಂತಾದವರು ಉಪಸ್ಥಿತರಿದ್ದರು. ಪ್ರಾಚಾರ್ಯರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ಹಿತನುಡಿಗಳನ್ನುಹೇಳಿದರು. ಶ್ರೀಮತಿ ಶೈಲಜಾ ಕರಣಿ ಮೇಡಮ್ ಅವರು ವಂದಿಸಿದರು.ವಿದ್ಯಾರ್ಥಿನಿ ಜೈ ರಾಬಿ ಕಾರ್ಯಕ್ರಮ ನಿರೂಪಣೆ ಮಾಡಿದರು..ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಉಪನ್ಯಾಸಕ ವೃಂದ ಹಾಜರಿದ್ದರು .
No comments:
Post a Comment