ಈ ದಿವಸ ವಾರ್ತೆ
ವಿಜಯಪುರ: ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಬೃಹತ್ ಪ್ರಮಾಣದ ಹೋರಾಟದ ಅಗತ್ಯ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕಾಂ. ಎಂ. ಬಿ. ನಾಡಗೌಡರು ಹೇಳಿದರು.
ಅವರು ನಗರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ರಿ) (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ 10 ನೇ ಜಿಲ್ಲಾ ಸಮ್ಮೇಳನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನೌಕರರು ಸಂಘಟಿತರಾಗಲು ಕರೆ ನಿಡಿದರು. ಹೋರಾಟದಿಂದ ವೇತನ ಹೆಚ್ಚಳ ಕಂಡಿದೆ. ಹೋರಾಟದಿಂದ ಅನೇಕರು ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಭೀಮಶಿ ಕಲಾದಗಿ ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನ ಉದ್ದೇಶಿಸಿ ಹಿರಿಯ ಹೋರಾಟಗಾರರಾದ ಭೀಮಶಿ ಕಲಾದಗಿ ಮಾತನಾಡಿ, ಹೋರಾಟ ಫಲದಿಂದ ವೇತನ, ಬಡ್ತಿ ಸೇರಿದಂತೆ ನೌಕರರಿಗೆ ಅನುಕೂಲವಾಗಿದೆ. ಈಗಾಗಲೇ ಸಂಘಟನೆಯಿAದ ಸಂಘ ಬಲಿಷ್ಠವಾಗಿದೆ. ಇನ್ನು ಹೆಚ್ಚು ಹೆಚ್ಚಾಗಿ ಸಂಘವು ಬಲಿಷ್ಠಗೊಳ್ಳಲು ಎಲ್ಲರೂ ಕೈ ಜೋಡಿಸಬೇಕು ಎಂದರು. ಸಂಘದ ಅವಿರತ 1988 ರಿಂದ ಮಾಡಿದ ಹೋರಾಟ ನೌಕರರು ವೇತನ ಸರಿಯಾಗಿ ಪಡೆಯುವಂತಾಗಿದೆ.ಕನಿಷ್ಠ ವೇತನ,ಅನುಮೋದನೆ ಪಡೆಯಲು ಸಾಧ್ಯವಾಯಿತು ,ನೌಕರರು ಸಂಘಟಿತರಾಗಲು ಕರೆ ನೀಡಿದರು.
ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲರಜಾಕ ಎಂ ತಮದಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಅಣ್ಣಾರಾಯ ಈಳಗೇರ ಅವರನ್ನು ಸನ್ಮಾನಿಸಲಾಯಿತು.
ಜಿ.ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಸಿಐಟಿಯು ಜಿಲ್ಲಾಧ್ಯಕ್ಷರಾದ ಕಾಂ ಅಣ್ಣಾರಾಯ ಇಳಗೇರ, ಪ್ರಧಾನ ಕಾರ್ದಯರ್ಶಿ ಲಕ್ಷಣ ಹಂದ್ರಾಳ, ವಿಠ್ಠಲ ಹೊನಮೋರೆ, ಅಯ್ಯನಗೌಡ ಬಾಗೇವಾಡಿ, ಜಿ.ಎಸ್.ಗಂಗಶೆಟ್ಟಿ, ಶಿವನಗೌಡ ಬಿರಾದಾರ, ಮಲ್ಲು ತಳೆವಾಡ, ಯಲ್ಲನಗೌಡ ಬಿರಾದಾರ, ಶ್ರೀಶೈಲಕವಿ, ತುಕಾರಾಮ ಮಾರನೂರ, ಮಲ್ಲಿಕಾರ್ಜುನ ಮಾದರ, ಎಂ.ಕೆ.ಕಳ್ಳಗಿ, ಲಾಲಾಹ್ಮದ ಶೇಖ,ಕೆ.ಐ. ಮಡಿವಾಳರ, ಮುದಿಗೌಡರ ಮುಗಳಿ, ಶ್ರೀಮತಿ ಕಾಳಮ್ಮ ಬಡಿಗೇರ, ಶ್ರೀಮತಿ ಭಾರತಿ ವಾಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಲಕ್ಷ್ಮಣ ಹಂದ್ರಾಳ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿವಾನಂದ ಬಿರಾದಾರ ಸ್ವಾಗತಿಸಿದರು. ಚಂದ್ರಶೇಖರ ವಾಲಿಕಾರ ನಿರೂಪಿಸಿದರು. ರಾಮಚಂದ್ರ ನಂದೂರ ವಂದಿಸಿದರು.
ಇದೇ ಸಂದರ್ಭ ದಲ್ಲಿ ಹೋರಾಟಗಾರ್ತಿ ಭಾರತಿ ವಾಲಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ದಲ್ಲಿ ಹೋರಾಟಗಾರ್ತಿ ಕಾಳಮ್ಮ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
No comments:
Post a Comment