ಈ ದಿವಸ ವಾರ್ತೆ
ವಿಜಯಪುರ: ಫ.ಗು.ಹಳಕಟ್ಟಿ ವ್ಯಕ್ತಿತ್ವ ಅಗಾಧವಾದ್ದು, ಅವರ ಕೊಡುಗೆ ಅನನ್ಯವಾಗಿದೆ ಎಂದು ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶ ಎಸ್. ಬಗಲಿ ಹೇಳಿದರು.
ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಡಾ.ಫ.ಗು ಹಳಕಟ್ಟೀಯವರ 143 ನೇ ಜನ್ಮದಿನದ ಅಂಗವಾಗಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ ಅವರು ಹಮ್ಮಿಕೊಂಡಿದ್ದ ಮುದ್ರಣ ಸಾಧಕರಿಗೆ ಮುದ್ರೋಧ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮವನ್ನು ಮಾಡಿದ ಅಸೋಸಿಯೇಶನ್‌ದವರು ಇತಿಹಾಸ ಸೃಷ್ಟಿಸಿದ್ದಾರೆ. ಫ.ಗು.ಹಳಕಟ್ಟಿಯವರ ಪುಣ್ಯದಿಂದಲೆ ಸಿದ್ಧೇಶ್ವರ ಬ್ಯಾಂಕ್ ಬೆಳೆಯಲು ಕಾರಣವಾಗಿದೆ. ಫ.ಗು.ಹಳಕಟ್ಟಿಯವರು ಸೈಕನಲ್ಲಿ ತಿರುಗಾಡಿ ಶಿಕ್ಷಣ ಸಂಸ್ಥೆಯಾದ ಬಿ.ಎಲ್.ಡಿ.ಸೇರಿದಂತೆ ಅನೇಕ ಸಂಸ್ಥೆಗಳನ್ನು ಅಭಿವೃದ್ಧಿಯ ಹೊಸ ಶೆಖೆ ಪ್ರಾರಂಭಿಸಲು ಫ.ಗು. ಹಳಕಟ್ಟಿಯವರ ಅಪಾರವಾಗಿ ಶ್ರಮಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂಗಮೇಶ ಚೂರಿ ಮಾತನಾಡಿ, ವಚನ ಪಿತಾಮಹ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಿರುವಿರಿ. ಅವರು ಇಡೀ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ. ಡಿಜಿಟಲ್ ಮಾಧ್ಯಮ ಬಂದಿದೆ ಈಗ ಎಲ್ಲರಿಗೂ ಸರಳವಾಗಿದೆ. ನಿಮ್ಮನ್ನು ಬಳಸಿಕೊಳ್ಳದ ಯಾರೂ ಇಲ್ಲ. ಪ್ರಿಟಿಂಗ್ ಪ್ರೆಸ್ ಕೆಲಸ ಶ್ರೇಷ್ಠ ಕಾಯಕವಾಗಿದೆ. ಕಾಯಕಮಾಡಿದವರಿಗೆ ಮುದ್ರೋದ್ಯಮ ಪ್ರಶಸ್ತಿ ನೀಡಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ನಾವು ಹಿಂದಿನ ಕಾಲದಲ್ಲಿ ಹೇಳುತ್ತಿದ್ದೆವು ಇಂದು ಚಿಕ್ಕ ಮಕ್ಕಳು ಕೈಗೆ ಮೊಬೈಲ್ ಕೊಡದಿದ್ದರೆ ಮಕ್ಕಳು ಊಟ ಮಾಡುವುದಿಲ್ಲ ಇಂದು ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ ಮುಂದೊಂದು ದಿನ ಇದು ದೊಡ್ಡ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಇಂದು ಜನ ದೃಶ್ಯ ಮಾಧ್ಯಮದಿಂದ ಕಲಿಯುತ್ತಿದ್ದಾರೆ ಮುದ್ರಣ ಮಾಧ್ಯಮದಿಂದ ದೂರ ಸರಿಯುತ್ತಿದ್ದಾರೆ ಮುದ್ರಣ ಮಾಧ್ಯಮ ಸಂಕಷ್ಟ ಎದುರಿಸುತ್ತಿರುವುದರಿಂದ ಸರ್ಕಾರ ಮುದ್ರಕರಿಗೆ ವಿಶೇಷ ಯೋಜನೆ ರೂಪಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮುಂದಾಗಬೇಕು ಎಂದರು. ಈ ಸಂಘಟನೆ ತಾಲೂಕು ಮಟ್ಟದಲ್ಲಿ ವಿಸ್ತರಿಸಿ ಗ್ರಾಮೀಣ ಭಾಗದ ಮುದ್ರಕರ ಸಮಸ್ಯೆಗಳ ಡಾಟಾ ಸಂಗ್ರಹಿಸುವ ಕಾರ್ಯ ಮಾಡಬೇಕು ಜೊತೆಗೆ ಇದು ಸರ್ಕಾರಕ್ಕೆ ತಲುಪಿಸಿದರೆ ಸರಕಾರ ತಮ್ಮ ಪರಿಹಾರ ಒದಗಿಸಬಹುದೆಂದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಕಲಬುರ್ಗಿ ವಿಭಾಗ ಸಂಚಾಲಕರಾದ ಕಲಬುರ್ಗಿ ವಿಭಾಗ ಸಂಚಾಲಕರಾದ ರವಿ ಮುಕ್ಕಾ ಮಾತನಾಡಿ, ಒಳ್ಳೆಯ ಮನುಷ್ಯರಾದರೆ ಏನೆಲ್ಲ ಸಾಧಸಬಹುದಾಗಿದೆ. ವಿಜಯಪುರ ಜಿಲ್ಲೆ ಭೂಮಿ ಪುಣ್ಯಭೂಮಿಯಾಗಿದೆ.
ಇದೇ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಸಾಹಿತಿ ಕಲ್ಲಪ್ಪ ಶಿವಶರಣ ಅವರ ಸಂಪಾದಕತ್ವದ ಅಚ್ಚುಮೆಚ್ಚು ಪುಸ್ತಕದ ಮುಖಪುಟವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ (ರಿ) ಸಂಘದ ಅಧ್ಯಕ್ಷ ಚಿದಾನಂದ ವಾಲಿ, ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವಕರ‍್ಸ್ ಅಸೋಸಿಯೇಶನ್ (ರಿ) ಗೌರವಾದ್ಯಕ್ಷರಾದ ಚಂದ್ರಶೇಖರ ಸಿ.ಬುರಾಣಪೂರ ಮಾತನಾಡಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಉಮೇಶ ವಂದಾಲ, ಪ್ರಭು ಮಲ್ಲಿಕಾರ್ಜುನಮಠ, ಹೆಚ್.ಎಂ.ಬಾಗವಾನ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಟ್ರೆಡಲ್ ಮಶೀನ್ ನಲ್ಲಿ 30 ರಿಂದ 40 ವರ್ಷ ಮುದ್ರಕ, ಮಾಲಿಕರಾಗಿ ಸೇವೆ ಸಲ್ಲಿಸಿದ ಮಹನೀಯರಾದ ಶ್ರೀಮಹಾಂತೇಶ ಪ್ರಭು, ಬಸವರಾಜ ಅಶೋಕ ಹೆಬ್ಬಳ್ಳಿ, ಮುದ್ದೇಬಿಹಾಳದ ಅಂಬಿಕಾ ಆಫಸೆಟ್, ಬಾಗೇವಾಡಿಯ ಚನ್ನಬಸವೇಶ್ವರ ಆಫ್ ಸೆಟ್ ಪ್ರಿಂರ‍್ಸ, ಪ್ರಿಂಟರ್ ರಾಹುಲ ಠೋಣೆ ಸೇರಿದಂತೆ ಇನ್ನಿತರ ಮುದ್ರಕ, ಮಾಲಿಕ ಸಾಧಕರಿಗೆ ಮದ್ರೋದ್ಯಮಿ ಪ್ರಶಸ್ತಿಯನ್ನು ನೀಡಿ ಸಾಲು, ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಐಶ್ವರ್ಯ ಗಾಯಕವಾಡ ಭರತನಾಟ್ಯ ಹಾಗೂ ನಿಜಗುಣಿ ಶಿವಶರಣ ಬಾನಿನಲ್ಲಿ ಮೂಡಿಬಂದ ಚೆಂದಾಮಾಮಾ ನೃತ್ಯ ಎಲ್ಲರನ್ನು ಮನ ಸೂರೆಗೊಳಿಸಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ವೆಂಕಟೇಶ ಕಪಾಳೆ, ನಿರ್ದೇಶಕರುಗಳಾದ ಮಹ್ಮದ ಹನೀಫ ಮುಲ್ಲಾ, ಮೃತ್ಯುಂಜಯ ನಿ.ಶಾಸ್ತಿç, ಜಗದೀಶ ಶಹಾಪುರ, ನಾಗರಾಜ ಬಿಸನಾಳ, ಬಸವರಾಜ ಹಾವಿನಾಳ, ದೀಪಕ ಜಾಧವ, ಉಮೇಶ ಶಿವಶರಣ, ನಬಿಲಾಲ ಮಕಾನದಾರ, ಮಂಜುನಾಥ ರೂಗಿ, ಸುರೇಶ ಗೊಳಸಂಗಿ, ಶ್ರೀಮಂತ ಬೂದಿಹಾಳ, ತೇಜಶ್ವಿನಿ ಕುಲಕರ್ಣಿ ಹಾಗೂ ಲಾಯಪ್ಪ ಇಂಗಳೆ, ಕು.ಕೃತಿಕಾ ವಾಲಿ, ಶಶಿಕಲಾ ವಾಲಿ, ಅಂಬಿಕಾ ಜಾಧವ, ನಾಗರಾಜ ಬಿದರಿ, ದೀಪಿಕಾ ಬಿದರಿ, ಸಂತೋಷ ಹುಣಶ್ಯಾಳ ಸೇರಿದಂತೆ ಮುದ್ರಣ ಮಾಲೀಕರು ಹಾಗೂ ಮುದ್ರಣ ಕಾರ್ಮಿಕರು-ಬಂಧುಬಳಗದವರು ಅಪಾರ ಜನರು ಉಪಸ್ಥಿತರಿದ್ದರು.
ಶ್ರೀಮಂತ ಬೂದಿಹಾಳ ನಿರೂಪಿಸಿದರು. ಉಮೇಶ ಕುಲಕರ್ಣಿ ವಂದಿಸಿದರು.
ವಿಶೇಷ ಸೂಚನೆ : ಶಾಲಾ ಕಾಲೇಜಿನ, ಹೋರಾಟ , ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತಿಗಾಗಿ ಪ್ರಕಟಿಸಲು ಸಂಪರ್ಕಿಸಿರಿ.
ವ್ಯವಸ್ಥಾಪಕ ಸಂಪಾದಕ ಕಲ್ಲಪ್ಪ ಶಿವಶರಣ
ಮೊ: 720427 9187/9900 37 8892
eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.
No comments:
Post a Comment