ಈ ದಿವಸ ವಾರ್ತೆ
ವಿಜಯಪುರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಫೆ.21 ರಂದು ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ ವಿಜಯಪುರ ಕಛೇರಿಯ ಅಧೀನದಲ್ಲಿರುವ ಮುದ್ರಣಾಲಯಕ್ಕೆ ಭೇಟಿ ನೀಡಿ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿದರು. ನಗದು ಪುಸ್ತಕ, ಸ್ಟಾಕ್ ರಜಿಸ್ಟರ್, ಡೆಡ್‍ಸ್ಟಾಕ್ ರಜಿಸ್ಟರ !ಹಾಗೂ ಇತರೆ ಕಡತವನ್ನು ಪರಿಶೀಲಿಸಿದರು.
ಮುದ್ರಣಾಲಯದಲ್ಲಿ ನಡೆಯುತ್ತಿರುವ ವಿವಿಧ ಪ್ರಿಂಟಿಂಗ್ ಕೆಲಸಗಳನ್ನು ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿದ್ದಲ್ಲದೆ, ಜಿಲ್ಲೆಯ ವಿವಿಧ ಕಛೇರಿಗಳಿಂದ ಬೇಕಾಗುವ ನಮೂನೆಗಳು, ಕರಪತ್ರಗಳು ಮತ್ತು ಇತರೆ ಅವಶ್ಯಕ ಪ್ರಿಂಟಿಂಗ್ ಕೆಲಸಗಳನ್ನು ಪಡೆದು ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಉಪನಿರ್ದೇಶಕ ಸಿದರಾಯ ಎಂ.ಬಳೂರಗಿ ಅವರು ಮುದ್ರಣಾಲಯದಲ್ಲಿ ನಡೆಯುವ ಪ್ರಿಟಿಂಗ್ ಕೆಲಸಗಳ ಬಗ್ಗೆ ಸಿಇಓ ಅವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಮುದ್ರಣಾಲಯದ ಸಿಬ್ಬಂದಿಗಳಾದ ಸಿ.ಎಸ್.ಬುರಾಣಪೂರ, ಮಹಾದೇವಿ ಅ. ಬಜಂತ್ರಿ ಮತ್ತು ವಿಜಯಪುರ ತಾಲೂಕ ಕೈಗಾರಿಕಾ ವಿಸ್ತರಣಾಧಿಕಾರಿಗಳಾದ ಎಸ್.ಎಂ. ಪಾಟೀಲ ಉಪಸ್ಥಿತರಿದ್ದರು.
No comments:
Post a Comment