ಈ ದಿವಸ ವಾರ್ತೆ
ವಿಜಯಪುರ: ವಿಜಯಪುರದ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ತಂಜೀಮ್ ಬಾಗೇವಾಡಿ ಸತತವಾಗಿ ಎರಡನೆ ಬಾರಿಗೆ ಪ್ರಸ್ತಕ್ತ ಸಾಲಿನಲ್ಲಿ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ರವಿವಾರ ನಗರದ ಉಕ್ಕಲಿ ರಸ್ತೆಯ ಶಿವಗಿರಿ ಹತ್ತಿರವಿರುವ ಶಾಲೆಯಲ್ಲಿ ಜರುಗಿದ ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿರ್ಲಿಂಗ್‍ಗಳ ಜಾತ್ರಾ ಮಹೋತ್ಸವ ಹಾಗೂ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುತ್ತಗಿ ಹಿರೇಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಇವರು ಕುಮಾರಿ ತಂಜೀಮ್ ಬಾಗೇವಾಡಿಗೆ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಿದರು. ಗುಂಡಕನಾಳದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿಯೂ ಸಹ ಕುಮಾರಿ ತಂಜೀಮ್ ಬಾಗೇವಾಡಿ ಆದರ್ಶ ವಿದ್ಯಾರ್ಥಿನಿಗೆ ಪ್ರಶಸ್ತಿಗೆ ಪಾತ್ರಳಾಗಿದ್ದು, ಈ ವರ್ಷವೂ ಸಹ ಎರಡನೇ ಬಾರಿಗೆ ಪ್ರಶಸ್ತಿಗೆ ಪಾತ್ರರಾಗಿರುವುದರಿಂದ ಮುಖ್ಯ ಗುರುಗಳಾದ ಕೆ.ಎಚ್. ಪವಾರ, ಶಿಕ್ಷಕಿ, ಶ್ರೀಮತಿ ಲಿಲಾವತಿ ಶೆಟ್ಟಿ, ಜೆ.ಎಸ್.ಹಳ್ಳಿ, ಶ್ರೀಮತಿ ಬಸಮ್ಮ ಇಂಡಿ, ಶ್ರೀಮತಿ ಅನ್ನಪೂರ್ಣೇಶ್ವರಿ ಹೂಗಾರ, ಶ್ರೀಮತಿ ಶೋಭಾ ಹಂಜಗಿ, ರಾಹುಲ್ ಹಜೇರಿ ವೇದವ್ಯಾಸ ಶೆಟ್ಟಿ ಸೇರಿದಂತೆ ಇತರ ಶಿಕ್ಷಕರು ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ.
No comments:
Post a Comment