ವಿಜಯಪುರ: ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಓದಿನತ್ತ ಒಲವು ತೋರಿದರೆ ಗುರಿ ಮುಟ್ಟಲು ಸುಲಭ- ಸಾಧ್ಯವೆಂದು ಮಕ್ಕಳ ಸಾಹಿತಿ ಎಸ್. ಎಸ್. ಸಾತಿಹಾಳ ಅಭಿಪ್ರಾಯ ಪಟ್ಟರು.
ಮುಳವಾಡದ ಸರಕಾರಿ ಕಿರಿಯ ಮಹಾ ವಿದ್ಯಾಲಯದಲ್ಲಿ ಸಿಂದಗಿಯ ವಿದ್ಯಾಚೇತನ ಪ್ರಕಾಶನ ಹಾಗೂ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆ ಹಮ್ಮಿಕೊಂಡ ಪುಸ್ತಕ ಸಂಸ್ಕೃತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ನಿತ್ಯ ಪಠ್ಯದ ಜೊತೆಗೆ ಪಠ್ಯೇತರ ಗ್ರಂಥಗಳನ್ನು ಓದುವುದರಿಂದ ಜ್ಞಾನ ಸಂಪತ್ತು ವೃದ್ಧಿಯಾಗುತ್ತದೆ. ದಾರ್ಶನಿಕರ ಜೀವನ ಮೌಲ್ಯ ತಿಳಿದುಕೊಂಡು ಮುನ್ನಡೆಯಬೇಕೆಂದು ಹೇಳಿದರು.
ಕುಮಾರಿ ಅಕ್ಷತಾ ಜೋಗಿ, ವೇದಾ ಪತ್ತಾರ ನಾನು ಮೆಚ್ಚಿದ ಕಥೆ-ಕವನ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಸ್. ಆರ್. ಪಾಟೀಲರು ಸಸಿಗೆ ನೀರೆರೆಯುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆ ಕೊಡಮಾಡುವ 2021 ನೆಯ ಸಾಲಿನ ಅಡ್ವೈಸರ್ ಸಾಹಿತ್ಯ ಪ್ರಶಸ್ತಿಯನ್ನು ಖ್ಯಾತ ಮಕ್ಕಳ ಸಾಹಿತಿ ಪ. ಗು. ಸಿದ್ದಾಪುರ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಾಚಾರ್ಯರಾದ ಜಿ. ಎಸ್. ಟಕ್ಕಳಕಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಚೇತನ ಪ್ರಕಾಶನದ ಅಧ್ಯಕ್ಷರಾದ ಹ. ಮ. ಪೂಜಾರವರು ಪ್ರಾಸ್ತಾವಿಕ ನುಡಿಯಾಡಿದರು. ಡಾ. ಜಿ. ಎಸ್. ಭೂಸಗೊಂಡ, ಶಂಕರ ಬೈಚಬಾಳ ಕೆ. ಕೃಷ್ಣಮೂರ್ತಿ, ಸಿದ್ದು ಭೂಸರೆಡ್ಡಿ ಶಿವಕುಮಾರ ಶಿವಶಿಂಪಿ ಎಂ. ಬಿ. ಕಟ್ಟಿಮನಿ, ಬಸವರಾಜ ಸಿದ್ದಾಪುರ ಅರವಿಂದ ಸಿದ್ದಾಪುರ, ಅಡಿವೆಪ್ಪ ಬೀಳಗಿ ಪ್ರೊ ಎಲ್. ಟಿ. ಹುನಸಿಕಟ್ಟಿ, ಸುನಿತಾ ವಳಸಂಗ, ಕವಿತಾ ಸಂಕನೂರ, ಮಣಿಹಾರ ಮುಂತಾದವರು ಉಪಸ್ಥಿತರಿದ್ದರು. ಪ್ರೊ ಎಸ್. ಎಲ್. ಬಾಡಗಿ ನಿರೂಪಿಸಿದರು. ಪ್ರಭಾವತಿ ಹೊಸಟ್ಟಿ ಪ್ರಾರ್ಥಿಸಿದರು. ಬಿ. ಎಸ್. ಚೌಧರಿ ವಂದಿಸಿದರು.
No comments:
Post a Comment