Thursday, August 11, 2022

ಲೋಕಾಯುಕ್ತರಿಗೆ ಪಿತೃವಿಯೋಗ

 


ಮುದ್ದೇಬಿಹಾಳ: ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಪಡೇಕನೂರ ಅವರ ತಂದೆ ಸಂಗನಗೌಡ ಭೀಮನಗೌಡ ಪಾಟೀಲ (98) ಅವರು   ಬುಧವಾರ  ನಿಧನರಾದರು. 

ಮೃತರಿಗೆ ಪತ್ನಿ ಚನ್ನಮ್ಮಗೌಡತಿ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬಿ.ಎಸ್.ಪಾಟೀಲರು ಏಕೈಕ ಪುತ್ರರಾಗಿದ್ದಾರೆ. ಸಂಗನಗೌಡರು ಮುದ್ದೇಬಿಹಾಳ ತಾಲೂಕು ಪಡೇಕನೂರ ಗ್ರಾಮದ ಪ್ರಗತಿಪರ ರೈತರಾಗಿದ್ದರು.  ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಪಡೇಕನೂರದಲ್ಲಿ ಗುರುವಾರ ಸಂಜೆ ನೆರವೇರಿತು. ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ.ಎಸ್.ನಾಡಗೌಡ, ವಿಜಯಪುರ ಅನುಗೃಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ| ಪ್ರಭುಗೌಡ ಬಿ.ಎಲ್. ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

No comments:

Post a Comment