ಅಪ್ಪಾಸಾಹೇಬ ಎಂ ಪಟ್ಟಣಶೆಟ್ಟಿ, ಮಾಜಿ ಸಚಿವರು |
ಈ ದಿವಸ ವಾರ್ತೆ
ವಿಜಯಪುರ: ಅಂತರ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು,ರಾಜ್ಯದ 5 ಗ್ರೂಪ್ ಮಾಡಲಾಗಿದ್ದು,ವಿಜಯಪುರ, ಯಾದಗಿರಿ, ಕಲಬುರ್ಗಿ,ಹಾಗೂ ಬೀದರ್ ಒಳಗೊಂಡಿರುತ್ತದೆ. ಕಾರಣ ವಿಜಯಪುರ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನದ ವಿಜಯಪುರ ಜಿಲ್ಲೆಯ ತಂಡಗಳು ಆಯ್ಕೆ ಮಾಡಲಾಗುತ್ತದೆ.
ಮಾ.13 ರಂದು ಎಸ್ ಎಸ್ ಹೈಸ್ಕೂಲ್ ಮೈದಾನದಲ್ಲಿ 14 ವರ್ಷದ ಒಳಗಿನ(ಅಂಡರ್ 14ಣh)ಬಾಲಕ, ಬಾಲಕಿಯರ ತಂಡಗಳು ಹಾಗೂ 19 ವರ್ಷದ ಒಳಗಿನ (ಅಂಡರ್ 19ಣh) ಬಾಲಕ ,ಬಾಲಕಿಯರು ತಂಡಗಳು ಹಾಗೂ ಪುರುಷ ಮತ್ತು ಮಹಿಳಾ ಮುಕ್ತ ತಂಡಗಳ ಆಯ್ಕೆ ಆಗಲಿವೆ.
ನಗರದ ಎಸ್ ಎಸ್ ಹೈಸ್ಕೂಲ್ ಮೈದಾನದಲ್ಲಿ ಬೆಳಿಗ್ಗೆ 9.00 ಗಂಟೆಗೆ ಆಯ್ಕೆ ಆರಂಭಿಸಲಾಗುವುದು.ಕಾರಣ ಆಸಕ್ತಿಯುಳ್ಳ ಆಟಗಾರರು ಭಾಗವಹಿಸಿ ಎಂದು ವಿಜಯಪುರ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಅಪ್ಪಾಸಾಹೇಬ ಎಂ ಪಟ್ಟಣಶೆಟ್ಟಿ(ಮಾಜಿ ಸಚಿವರು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment