Saturday, January 8, 2022

110 ಕೆವ್ಹಿ ಮಮದಾಪೂರ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಈ ದಿವಸ ವಾರ್ತೆ

ವಿಜಯಪುರ : ಜಿಲ್ಲೆಯ 110 ಕೆವ್ಹಿ ಮಮದಾಪುರ ಹಾಗೂ ಅದರ ಕೆಳಗೆ ಬರುವ ವಿದ್ಯುತ್ ಉಪ ಕೇಂದ್ರಗಳ ಮೇಲೆ ಕೆ.ಪಿ.ಟಿ.ಸಿ.ಎಲ್ ವಿಜಯಪುರ ವಿಭಾಗದ ವತಿಯಿಂದ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಪ್ರಯುಕ್ತ ಜನವರಿ 10 ರಂದು ಈ ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವಿಜಯಪುರ ಹೆಸ್ಕಾಂ, ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಅದರಂತೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಉಪಕೇಂದ್ರಗಳು ಈ ಕೆಳಗಿನಂತಿವೆ. 110 ಕೆವಿ ಮಮದಾಪೂರ, 110 ಕೆವಿ ಶಿರಬೂರ, 110 ಕೆವಿ ಬಬಲೇಶ್ವರ, 110 ಕೆವಿ ಕಂಬಾಗಿ ಮತ್ತು 33 ಕೆವಿ ಲಿಂಗದಳ್ಳಿ ಎಲ್‍ಐಎಸ್ ಹಾಗೂ 33 ಕೆ ವಿ ದೇವರ ಗೆಣ್ಣೂರ ಆಗಿರುತ್ತವೆ. ಆದ್ದರಿಂದ ವಿದ್ಯುತ್ ಗ್ರಾಹಕರು ಹೆಸ್ಕಾಂ ಜೊತೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment