Thursday, September 30, 2021
Monday, September 27, 2021
ವಿಜಯಪುರ ರಫ್ತು ನಗರ ಮಾಡುವ ಗುರಿ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ
ಈ ದಿವಸ ವಾರ್ತೆ ವಿಜಯಪುರ: ವಿಜಯಪುರ ವನ್ನು ರಫ್ತು ನಗರವನ್ನಾಗಿಸುವ ಗುರಿ ಹೊಂದಲಾಗಿದ್ದು, ಇಲ್ಲಿನ ಉದ್ದಿಮೆಗಳು ಕೂಡ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.
ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ, ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಆಶ್ರಯದಲ್ಲಿ ಆಝಾದಿ ಕಾ ಅಮೃತ ಮಹೋತ್ಸ ನಿಮಿತ್ತ ಸೋಮವಾರ ಹಮ್ಮಿಕೊಂಡ ವಾಣಿಜ್ಯ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪಕ್ಕದ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ ಸೇರಿದಂತೆ ಗಡಿ ಭಾಗದ ಸೊಲ್ಲಾಪುರ ಕೂಡ ರಫ್ತು ಮಾಡುವಲ್ಲಿ ವಿಜಯಪುರಕ್ಕಿಂತಲೂ ಮುಂದಿನ ಹೆಜ್ಜೆಯಲ್ಲಿವೆ. ಆದರೆ ನಮ್ಮ ಜಿಲ್ಲೆಯಿಂದ ಮಾತ್ರ ಈ ಕಾರ್ಯ ಸಾಧನೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದರು.
ಸದ್ಯ ಒಣ ದ್ರಾಕ್ಷಿ, ದಾಳಿಂಬೆ, ಲಿಂಬೆ ಸೇರಿದಂತೆ ವಾಣಿಜ್ಯ ಬೆಳೆಗಳು ಮಾತ್ರ ರಫ್ತು ಮಾಡಲಾಗುತ್ತಿದ್ದು, ಕೈಗಾರಿಕೆಯ ವಸ್ತುಗಳು ಕೂಡ ರಫ್ತು ಮಾಡುವ ನಿಟ್ಟಿನಲ್ಲಿ, ಕೈಗಾರಿಕೋದ್ಯಮಿಗಳು ತಮ್ಮ ವಸ್ತುಗಳನ್ನು ಉತ್ತಮ ಗುಣಮಟ್ಟದಲ್ಲಿ ಉತ್ಪಾದಿಸಲು ಮುಂದಾಗಬೇಕು. ಇದಕ್ಕೆ ಕೈಗಾರಿಕೋದ್ಯಮಿಗಳ ಶ್ರಮ ಹೆಚ್ಚಿದೆ ಎಂದರು.
ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇಂದು ವಿಪುಲ ಅವಕಾಶಗಳಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದರು.
ಇಲ್ಲಿ ಮುಳವಾಡ ಹಾಗೂ ಸಿಂದಗಿಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡೆಸಲಾಗುತ್ತಿದೆ. ಜಿಲ್ಲೆಯ ನವ ಉದ್ಯಮೆದಾರರಿಗೆ ಇಲ್ಲಿನ ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಭಾಗದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಗೊಂಡು, ಉದ್ಯೋಗ ಸೃಜನೆಗೊಂಡಲ್ಲಿ, ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲು ಸಾಧ್ಯೆ ಎಂದರು.
ಜಿಲ್ಲೆಯ ಕೃಷಿ ಉತ್ಪಾನ್ನ ಸೇರಿದಂತೆ ಕೈಗಾರಿಕಾ ವಸ್ತುಗಳ ರಫ್ತು ಮಾಡಲು, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಏರ್ ಬಸ್, ಕಾರ್ಗೋ ಹಾರಾಟದ ವ್ಯವಸ್ಥೆಗೆ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದರು.
ಅಮೃತ ಯೋಜನೆ ನಿಮಿತ್ತ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಇಲಾಖೆಗಳ ಆಶ್ರಯದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಕೈಗೊಳಗಳಲಾಗುತ್ತಿದೆ ಎಂದರು.
ಇಲ್ಲಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ಬಸವರಾಜ ಬಿರಾದಾರ ಕೈಗಾರಿಕೆಗಳ ನಿವೇಶನ ಹಂಚಿಕೆ ಹಾಗೂ ಕೈಗಾರಿಕೆ ಬೆಳವಣಿಗೆಯ ನಿಟ್ಟಿನಲ್ಲಿ ಪೂರಕವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ರಫ್ತು ಮಾಡುವ ಗುಣಮಟ್ಟದ ವಸ್ತುಗಳು ಹೆಚ್ಚಿದ್ದು, ಇನ್ನಷ್ಟು ಬೆಳವಣಿಗೆ ಆಗಬೇಕು ಎಂದರು.
ಅಲ್ಲದ ಕೈಗಾರಿಕೆ ಸ್ಥಾಪನೆಗಳಿಗೆ ಸರ್ಕಾರ ಸರಳಿಕೃತ ನೀತಿ ಜಾರಿಗೆ ತಂದಿದ್ದು, ಈ ಹಿಂದಿನ ಅಡೆ, ತಡೆಗಳನ್ನು ತಗೆದು ಹಾಕಿದೆ. ಹೀಗಾಗಿ ಇಂದು ಕೈಗಾರಿಕಾ ಸ್ಥಾಪನೆಗೆ ಉತ್ತಮ ಅವಕಾಶಗಳು ಇವೆ ಎಂದರು.
ಹಿರಿಯ ಉದ್ಯಮ, ಚೇಂಬರ್ ಆಫ್ ಕಾಮರ್ಸ್ ಇಂಡಿಸ್ಟ್ರೀ, ಅಗ್ರಿಕಲ್ಚರ್ ಅಧ್ಯಕ್ಷ ಡಿ.ಎಸ್. ಗುಡ್ಡೋಡಗಿ ಮಾತನಾಡಿದರು.
ಸಣ್ಣ ಉದ್ಯಮಿದಾರರ ಸಂಘದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್, ತಮಣ್ಣ ಈಳಗೇರ, ಟಿ.ಸಿ. ವಿಜಯಬಾಸ್ಕರ್ ಮತ್ತಿತರರು ಇದ್ದರು.
ಸಿಡಾಕ್ ಜಂಟಿ ನಿರ್ದೇಶಕಿ ಎಸ್.ಬಿ. ಬಳ್ಳಾರಿ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಸವರಾಜ ಬಿರಾದಾರ ವಂದಿಸಿದರು.
Saturday, September 25, 2021
Friday, September 24, 2021
Thursday, September 23, 2021
Wednesday, September 22, 2021
Tuesday, September 21, 2021
Sunday, September 19, 2021
Friday, September 17, 2021
Thursday, September 16, 2021
Wednesday, September 15, 2021
Tuesday, September 14, 2021
Monday, September 13, 2021
Sunday, September 12, 2021
Saturday, September 11, 2021
Thursday, September 9, 2021
Wednesday, September 8, 2021
Tuesday, September 7, 2021
Monday, September 6, 2021
Sunday, September 5, 2021
ಭೂಕಂಪದ ಹಿನ್ನೆಲೆ ಸಾರ್ವಜನಿಕರು ಆತಂಕ ಪಡದಿರಲು ಜಿಲ್ಲಾಧಿಕಾರಿಗಳಿಂದ ಮನವಿ
ಈ ದಿವಸ ವಾರ್ತೆ
ವಿಜಯಪುರ ಜಿಲ್ಲೆಯು ಭೂಕಂಪನ ವಲಯ-2 ರಲ್ಲಿ ಬರುತ್ತಿದ್ದು, ಇದು ಕಡಿಮೆ ಅಪಾಯ ಇರುವ ವಲಯವಾಗಿರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ ಹಾಗೂ ಸಾರ್ವಜನಿಕರು ಈ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡದಿರಲು ಮತ್ತು ಭಯಪಡದಿರಲು ಜಿಲ್ಲಾಧಿಕಾರಿ ಪಿ ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ನಿನ್ನೆ ದಿನಾಂಕ:4-9-2021 ರ ರಾತ್ರಿ ಸಮಯ 11.47 ರಿಂದ 11.49 ರ ಅವಧಿಯಲ್ಲಿ ಪ್ರಮುಖವಾಗಿ ವಿಜಯಪುರ ಜಿಲ್ಲೆಯ ವಿಜಯಪುರ, ಬಬಲೇಶ್ವರ, ತಿಕೋಟಾ, ಬ.ಬಾಗೇವಾಡಿ ತಾಲೂಕು, ವಿಜಯಪುರ ನಗರ ಹಾಗೂ ಜಿಲ್ಲೆಯ ಇತರೆ ಭಾಗಗಳಲ್ಲಿ ಭೂಕಂಪನದ ಅನುಭವವಾಗಿರುವ ಬಗ್ಗೆ ಸಾರ್ವಜನಿಕರಿಂದ/ಮಾಧ್ಯಮಗಳಿಂದ ಹಾಗೂ ತಿಳಿದು ಬಂದಿರುತ್ತದೆ.
ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಬೆಂಗಳೂರು ಇವರಿಂದ ಮಾಹಿತಿಯನ್ನು ಪಡೆಯಲಾಗಿ ಜಿಲ್ಲೆಯ ಆಲಮಟ್ಟಿಯಲ್ಲಿರುವ ಭೂಕಂಪನ ಮಾಪಕ ಕೇಂದ್ರದಲ್ಲಿ 3.9 ರಷ್ಟು ತೀವ್ರತೆ ದಾಖಲಾಗಿರುವ ಬಗ್ಗೆ ತಿಳಿಸಿದ್ದು, ಭೂಕಂಪನದ ಕೇಂದ್ರವು (Epicentre) ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಇರುವುದಾಗಿ ತಿಳಿಸಿರುತ್ತಾರೆ.
ನಿನ್ನೆ ರಾತ್ರಿ ಭೂಕಂಪನದ ಅನುಭವದ ಮಾಹಿತಿಯು ಸಾರ್ವಜನಿಕರಿಂದ/ಮಾಧ್ಯಮಗಳಿಂದ ತಿಳಿದು ಬಂದ ಕೂಡಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಮಧ್ಯರಾತ್ರಿ ಭೂಕಂಪನ ಅನುಭವವಾದ ಪ್ರದೇಶಗಳಿಗೆ ಭೇಟಿ ನೀಡಿದ್ದು ಇರುತ್ತದೆ. ಈವರೆಗೆ ಜಿಲ್ಲೆಯಲ್ಲಿ ಯಾವುದೇ ಮಾನವ/ಜಾನುವಾರು ಜೀವಹಾನಿ ಮತ್ತು ಆಸ್ತಿ-ಪಾಸ್ತಿಗಳ ಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Saturday, September 4, 2021
ಸೆ.4 ರಿಂದ ಗಣಪತರಾವ ಮಹಾರಾಜರ ಶಾಂತಿ ಕುಟೀರದಲ್ಲಿ ಸಪ್ತಾಹ
ಈ ದಿವಸ ವಾರ್ತೆ ವಿಜಯಪುರ: ತಾಲೂಕಿನ ಸುಕ್ಷೇತ್ರ ಕನ್ನೂರದಲ್ಲಿರುವ ಗಣಪತರಾವ ಮಹಾರಾಜರ ಶಾಂತಿ ಕುಟೀರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೆ.4 ರಿಂದ 10 ರವರೆಗೆ ಸಪ್ತಾಹ ನಡೆಯಲಿದೆ.
ಕೊವಿಡ್ ಹಿನ್ನೆಲೆಯಲ್ಲಿ ನಿಯಮಾವಳಿಗಳ ಪಾಲನೆಯೊಂದಿಗೆ ಈ ಬಾರಿ ಸಪ್ತಾಹವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಕಳೆದ 50 ವರ್ಷಗಳಿಂದಲೂ ಆಶ್ರಮದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಶ್ರಾವಣ ವದ್ಯ ತ್ರಯೋದಶಿಯಿಂದ ಭಾದ್ರಪದ ಶುದ್ಧ ಚತುರ್ಥಿಯವರೆಗೆ ಸಪ್ತಾಹ ಆಚರಿಸುವ ಸಂಪ್ರದಾಯ ನಡೆದುಬಂದಿದೆ. ಕೊರೋನಾ ಪ್ರಭಾವದಿಂದ ಕೊಂಚ ಭಿನ್ನ ಶೈಲಿಯಲ್ಲಿ ಅಂದರೆ ವರ್ಚುವಲ್ ಸಪ್ತಾಹವಾಗಿ ಜ್ಞಾನಯಜ್ಞ ರೂಪದಿಂದ ಆಚರಿಸಲಾಗುವುದು. ಈ ಸಪ್ತಾಹದಲ್ಲಿ ನಾಡಿನ ಹಾಗೂ ದೇಶದ ವಿವಿಧ ಪ್ರಾಂತಗಳಿAದ ಅನುಭಾವಿಗಳು ಸಂತರು ವಿದ್ವಾಂಸರು ಅನುಭಾವದ ರಸದೌತಣ ಉಣಬಡಿಸಲಿದ್ದಾರೆ. ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಚಿನ್ಮಯ ಮಿಷನ್ ಬೆಂಗಳೂರಿನ ಸ್ವಾಮಿ ಬ್ರಹ್ಮಾನಂದಜೀ, ವಿಜಯಪುರ ಷÀಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮಿಗಳು, ವಿದ್ವಾನ ಕೆ.ಎಸ್. ನಾರಾಯಣಾಚಾರ್, ಎಸ್. ಷಡಕ್ಷರಿ, ಡಾ. ಗುರುರಾಜ್ ಕರಜಗಿ, ಕನ್ನಡದ ಕಬೀರ ಪದ್ಮಶ್ರೀ ಇಬ್ರಾಹಿಂ ಸುತಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ, ಡಾ. ಆರತಿ ವ್ಹಿ.ಬಿ ಸೇರಿದಂತೆ ಇನ್ನೂ ಹಲವು ಸಂತ ಮಹಾಂತರು ಹಾಗೂ ಮರಾಠಿ ವಕ್ತಾರರು, ವಿದ್ವಾಂಸರಿAದ ಉಪನ್ಯಾಸ, ಪ್ರವಚನಗಳು ಮೂಡಿ ಬರಲಿವೆ.
ಗಣಪತರಾವ ಮಹಾರಾಜರು ದತ್ತಾವತಾರಿ ಎಂದೇ ಪ್ರಸಿದ್ಧರಾಗಿರುವರು. ಅವರ ಅಧ್ಯಾತ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿ ಇವತ್ತಿಗೂ ಪ್ರಸ್ತುತ. ಸಾದಾ ಜೀವನ ಉಚ್ಚ ವಿಚಾರವೇ ಅವರ ನಿಲುವು ಆಗಿತ್ತು. ತಾವು ಪಡೆದ ಆತ್ಮಾನಂದವನ್ನು ಎಲ್ಲರೂ ಪ್ರಾಪ್ತಮಾಡಿಕೊಳ್ಳಲಿ ಎಂಬುವುದೇ ಅವರ ಧ್ಯೇಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಚಿಂತನೆಗಳನ್ನು ಪ್ರಸ್ತುತಪಡಿಸಲು ಈ ಸಪ್ತಾಹ ಆಯೋಜಿಸಲಾಗುತ್ತಿದೆ ಎಂದು ಆಶ್ರಮದ ಅಧ್ಯಕ್ಷ ಗೋವಿಂದಲಾಲ ಬಾಹೇತಿ ಮಾಹಿತಿ ನೀಡಿದ್ದಾರೆ.
Friday, September 3, 2021
ರಾಜ್ಯಮಟ್ಟದ ಸಾಹಿತ್ಯ ಶ್ರೀ ಪ್ರಶಸ್ತಿಗೆ ಡಾ.ಪೂರ್ಣಿಮಾ ಧಾಮಣ್ಣವರ ಭಾಜನ
ಈ ದಿವಸ ವಾರ್ತೆ:
ವಿಜಯಪುರ: ರಾಜ್ಯ ಮಟ್ಟದ ಸಾಹಿತ್ಯ ಶ್ರೀ ಪ್ರಶಸ್ತಿಗೆ ಡಾ. ಪೂರ್ಣಿಮಾ ಧಾಮಣ್ಣವರ ಭಾಜನರಾಗಿದ್ದಾರೆ. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸನಾದಿ ಅಪ್ಪಣ್ಣ ಕಲಾಕಾರರ ಸಂಘ ರಾಜ್ಯ ಶಾಖೆ ಬೀಳಗಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವರ ಸಾಮ್ರಾಟ ಸನಾದಿ ಅಪ್ಪಣ್ಣ ಅವರ ೧೪೬ ನೇ ಜಯಂತಿ ಹಾಗೂ ೭೫ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವ ಸಂಘದ ಬೆಳ್ಳಿ ಹಬ್ಬ ಸಂಸ್ಕೃತಿಕ ಉತ್ಸವ ಸೆ.೯ ರಂದು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ / ರಾಷ್ಟç ಮಟ್ಟದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಡಾ. ಪೂರ್ಣಿಮಾ ಧಾಮಣ್ಣವರ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.