ವೈರಿ ಒಂದೆಡೆಗೆ, ವೈರಾನು ಒಂದುಕಡೆಗೆ.
ಬಿರುಬಿಸಿಲು, ಬಿರುಗಾಳಿಗಳು ಒಂದೊಂದು ಕಡೆಗೆ.
ಯಾರ ಮೇಲೆ ಯಾರ ಕೋಪವಿದು??
ದಿನಬೆಳಗಾದರೆ ಶಂಕೆಯೊಂದೇ ! ಸಂಖ್ಯೆಯಷ್ಟು?
ಶಂಕಿತರು? , ಸೋಂಕಿತರು? , ಸತ್ತವರು???
ವಿಶ್ವಕ್ಕೆ ಏನಾಯಿತು? ರಾಜ್ಯಕ್ಕೆಷ್ಟು?, ದೇಶಕ್ಕೆಷ್ಟು?,
ಜಿಲ್ಲೆಗೆನಾದರೂ...,
ಜೈಲಿಗೆನಾದರೂ..??
ಚಿತ್ರವಿಚಿತ್ರವಾಗಿ, ಹೆಣಗಳರುಳುತ್ತಿದ್ದರು.
ಬೇಕು ಚಿತ್ರಗಳು!.ಜೊತೆಗಷ್ಟು ಹೊಗಳುಭಟ್ಟರು.
ರೋಗ ನಿಯಂತ್ರಿಸಿದೇಷ್ಟೋ, ಗೊತ್ತಿಲ್ಲ!
ಚಿತ್ರ- ವಿಚಿತ್ರಗಳ, ಚಿತ್ತಾರವಾಯಿತು.
ತೋರಿಕೆಯೇ? ತಿಳಿಯುತ್ತಿಲ್ಲ!
ವೆಂಗ್ಯದಮಾತಲ್ಲ!, ಪತ್ರಗಳು, ಚಿತ್ರಗಳು, ಬೇಕಿಲ್ಲ.
ಕಾದಿದೆ ಬಾಗಿಲಿಗೆ ಅಪಾಯ!
ಮಾಸ್ಕ, ಕಿಟ್ಟು, ಸ್ಯಾನಿಟೈಸರ್....
ಸಾಕು ತೋರಿಕೆಗಳೆಲ್ಲ.
ಬೇಕು ನಮಗೆಲ್ಲ ನೈಜ ಉಪಾಯ!
ಅಂಬರೀಷ ಎಸ್. ಪೂಜಾರಿ.
No comments:
Post a Comment