ದಾರೆಯಾಗುತ್ತಿದೆ ಧರೆಯೊಳಗೆ.
ಮುಗಿಲೆಲ್ಲ ಕಪ್ಪಾಗಿ, ಕಪ್ಪೆಲ್ಲ
ಕರಗಿರೆ,
ತಂಪಾಗಿ, ಸೊಂಪಾಗಿ, ಸುರಿಯುತಿದೆ ಹನಿಯಾಗಿ.
ಕಾದು, ಕಾಯ್ದುಕುಳಿತ ಧರೆಗೆ.
ಬಾನಿನ ಹನಿ -ಹನಿಮಾತು ಇಂಪಾಗಿ,
ಮುಗಿಲ ಹನಿಗಳ ಮಾತಿಗೆ.
ಸ್ವರದಿ, ನುಡಿಯುತಿಹಳು 'ಅವನಿ'
ರಾಗವಾಗಿ.
ಇಳೆಯ ಕಂಗಳು ಮಳೆಗೆ,
ಮುತ್ತಾಗಿ, ಹೊಳೆಯುತಿದೆ.
ಹೊಳೆವ ಹನಿ ನೀರಾಗೆ,
ಇಳೆ ನಾಚಿ, ನೀರಾಗುತಿದೆ.
ಆಗಸದ ಆಸೆಯಹನಿ, ಇಳೆಮೆತ್ತಿ.
ಇಳೆ ಹೆಣ್ಣಾಗಿ, ಮಳೆ ಮುತ್ತಿ.
ಇಳೆ-ಮಳೆಗಳೊಂದಾಗಿ ಸುತ್ತಿ.
ಹರಿಯುತ್ತಿರೆ ಜಗನಗುತಿದೆ, ಮುಖಎತ್ತಿ.
ಅಂಬರೀಷ ಎಸ್. ಪೂಜಾರಿ.
No comments:
Post a Comment