Tuesday, January 28, 2025

ಇಂದಿನಿಂದ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ

ಚಡಚಣ: ಶ್ರೀ ಸಂಗಮೇಶ್ವರ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ  ಹಾಗೂ ಪಟ್ಟಣ ಪಂಚಾಯತ ಚಡಚಣ ಇವರ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಅದ್ದೂರಿಯಾಗಿ ಜರುಗುತ್ತಿದ್ದು , ದಿನಾಂಕ: 29.01.2025 ರಂದು ಬುಧವಾರ ದಿವಸ ಮುಂಜಾನೆ  ಶ್ರೀ ಸಂಗಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಮತ್ತು ನಂದೀಶನಿಗೆ  ಎಣ್ಣೆಮಜಲು  ಪೂಜೆ ನಡೆಯುವುದು, ಮುಂಜಾನೆ 7-೦೦ ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿಧ್ವಜ, ವಾದ್ಯ-ವೈಭವಗಳೊಂದಿಗೆ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪುವುದು. ಮುಂಜಾನೆ 9-೦೦ ಗಂಟೆಗೆ "ದೇವರ ನುಡಿ" ಜರುಗುವುದು ಮುಂಜಾನೆ 10=00 ಗಂಟೆಗೆ "ಶಿವೋಹಂ" ಡಾನ್ಸ್ ಅಕಾಡಮಿ ವಿಜಯಪುರ ಇವರಿಂದ "ಭರತನಾಟ್ಯ" ಕಾರ್ಯಕ್ರಮ ಜರುಗುವುದು. ಅಂದು ರಾತ್ರಿ 9-೦೦ ಗಂಟೆಗೆ ದೇವಸ್ಥಾನ ಆವರಣದಲ್ಲಿ ರಂಗ ಸಂಗಮ ಶ್ರೀಮತಿ ರೇಶ್ಮಾ ಅಳವಂಡಿ ಇವರಿಂದ "ಮಲಮಗಳು" ಎಂಬ ಸಾಮಾಜಿಕ ನಾಟಕ ಜರುಗುವುದು.

ದಿನಾಂಕ: 30.01.2025 ಗುರುವಾರ ಸಾಯಂಕಾಲ 3.00 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ-ನಂದೀಧ್ವಜವು ಬಾಜಾ ಬಜಂತ್ರಿಯೊಂದಿಗೆ ಹೊರಟು ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಬರುವುದು. ರಾತ್ರಿ 9.00 ಗಂಟೆಗೆ ದೇವಸ್ಥಾನದ ಹತ್ತಿರವಿರುವ ಎತ್ತರದ ಸ್ಥಳದಲ್ಲಿ ಶ್ರೀ ದತ್ತ ಶುಗರ್ಸ್ ಹಾವಿನಾಳ ಅವರಿಂದ “ಚಿತ್ರ-ವಿಚಿತ್ರವಾದ ಮದ್ದು" ಸುಡಲಾಗುವುದು. ಅಂದು ರಾತ್ರಿ 10.00 ಗಂಟೆಗೆ ಶ್ರೀಮತಿ ಉಷಾರಾಣಿ ಬಾರಿಗಿಡದ ಇವರಿಂದ ನಲವಡಿ "ಹೇಮರಡ್ಡಿ ಮಲ್ಲಮ್ಮ" ಎಂಬ ಪೌರಾಣಿಕ ಭಕ್ತಿಮಯ ನಾಟಕ ಜರುಗುವುದು.

ದಿನಾಂಕ : 31.01.2025   ಶುಕ್ರವಾರ ಮಧ್ಯಾಹ್ನ: 2.30 ಗಂಟೆಗೆ "ಪ್ರಸಿದ್ಧ ಮಲ್ಲರ ಕುಸ್ತಿಗಳು" ಜರಗುವವು. ವಿಜೇತ ಪೈಲವಾನರಿಗೆ ಬಹುಮಾನ ಕೊಡಲಾಗುವುದು.ಅಂದು ರಾತ್ರಿ 10.00 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಹಾಸ್ಯ ಚತುರ ಸಿದ್ದು ನಾಲ್ವತವಾಡ ಇವರಿಂದ"ನೀನೂ ಸಾಹುಕಾರನಾಗು" ಎಂಬ ಹಾಸ್ಯಮಯ ನಾಟಕ ಜರುಗುವುದು. ದಿನಾಂಕ : 01.02.2025  ಶನಿವಾರ  ಮಧ್ಯಾಹ್ನ: 3-೦೦ ಗಂಟೆಗೆ  ಪಶು ವೈದ್ಯಾಧಿಕಾರಿಗಳು ಆಯ್ಕೆ ಮಾಡಿದ ಯೋಗ್ಯ ರಾಸುಗಳಿಗೆ ಜಾನುವಾರ ಪ್ರಶಸ್ತಿ ಸಮಾರಂಭ ಜರಗುವುದು. ದಿನಾಂಕ : 02.02.2025  ರವಿವಾರ ರಾತಿ 9-೦೦ ಗಂಟೆಗೆ ಸರಿಗಮ ಖ್ಯಾತಿಯ ಕುಮಾರಿ ದಿವ್ಯಾ ಹೆಗಡೆ, ಲಫಂಗ ರಾಜಾ, ಮ್ಯೂಜಿಕ ಮೈಲಾರಿ ಇವರುಗಳಿಂದ ಶ್ರೀ ಕಾಂತುಗೌಡ ಪಾಟೀಲ ಬಿಜೆಪಿ ಮಂಡಲ ಅಧ್ಯಕ್ಷರು ಇವರ ಪ್ರಾಯೋಜಿಕ ವತಿಯಿಂದ  ರಸಮಂಜರಿ ಕಾರ್ಯಕ್ರಮ ಜರುಗುವದು. ದಿನಾಂಕ : 04.02.2025  ಮಂಗಳವಾರ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ 7  ದಿವಸಕ್ಕೆ ಪಲ್ಲಕ್ಕಿ-ನಂದಿಧ್ವಜ ನಾನಾ ತರಹದ ವಾದ್ಯಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ಗುಡಿಗೆ ಹೋಗುವದು. ದಿನಾಂಕ: 29.01.2025  ರಂದು ಶ್ರೀ ರವಿ ಪಾವಲೆ ಇವರಿಂದ ಮತ್ತು  ಶ್ರೀ ವಿವೇಕಾನಂದ ಹಿಟ್ನಳ್ಳಿ, ಶ್ರೀ ಚೌಡೇಶ್ವರಿ ಡ್ರೆಸಿಸ್ ಚಡವಣ ಇವರಿಂದ ದಿನಾಂಕ 30.01.2025 ರಿಂದ 02.02.2025 ರ ವರೆಗೆ  "ಅನ್ನ ಪ್ರಸಾದ" ಸೇವೆ ಇರುತ್ತದೆ. 

ಆದ ಕಾರಣ ಹೆಚ್ಚು ಹೆಚ್ಚು ಸಂಖ್ಯೇಯಲ್ಲಿ ಭಕ್ತಾದಿಗಳು ಆಗಮಿಸಿ ಈ ಜಾತ್ರೆಗೆ ಹೆಚ್ಚು ಮೆರಗು ತರ ಬೇಕೆಂದು ಶ್ರೀ ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಯರಾದ ಜಿ,ಡಿ.ಪಾವಲೆ ಅವರು ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Saturday, January 25, 2025

ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿಯ ಅದ್ಧೂರಿ ಗಣರಾಜ್ಯೋತ್ಸವ

ವಿಜಯಪುರ: 

ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿಯ ವಿನಾಯಕ ವೃತದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಬಡಾವಣೆಯ ಎಲ್ಲ ನಿವಾಸಿಗಳು ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕರಾದ  ಮಮದಾಪುರ್ ಗುರುಗಳು ಧ್ವಜಾರೋಹಣ ನೆರವೇರಿಸಿದರು.

 ಈ ಕಾರ್ಯಕ್ರಮದಲ್ಲಿ ಎಂ ಆರ್ ಬಿರಾದಾರ್ , ಎಸ್ .ಡಿ. ಕೃಷ್ಣಮೂರ್ತಿ ಗಜಾನನೋತ್ಸವ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ವಿಜಯ ವಿಠ್ಠಲ್ ಪೂಜಾರಿ , ಸಮಾಜಸೇವಕರಾದ ಸಿದ್ದು ಇಜೇರಿ, 

ಕುಂಬಾರ್ ಗುರುಗಳು, ಪಂಡಿತ ರಾವ್ ಪಾಟೀಲ್ ಗುರುಗಳು, ಗೌರಾ ಬಾಯಿ ಕುಬಕಡ್ಡಿ, ಶೋಭಾ ಕಸನಕ್ಕೆ,  ಶಾಂತ ಬಿರಾದಾರ್, ದೇವಕಿ ನಾಯಕ್ ಸೇರಿದಂತೆ ಅನೇಕ ಹಿರಿಯರು ಇದರಲ್ಲಿ ಭಾಗವಹಿಸಿದ್ದರು.

ಭಾರತೀಯರ ಪಾಲಿಗೆ ಆತ್ಮಾವಲೋಕನ ಹಾಗೂ ಸಂಕಲ್ಪದ ಸುದಿನ:ಶಿವಾಜಿ ಗಾಯಕವಾಡ

ವಿಜಯಪುರ: ಇಂದಿನ ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ. ಭಾರತೀಯರ ಪಾಲಿಗೆ ಆತ್ಮಾವಲೋಕನ ಹಾಗೂ ಸಂಕಲ್ಪದ ಸುದಿನ ಎಂದು ವಿಜಯಪುರದ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆ ಹಾಗೂ ವೀರ ಶಿವಾಜಿ ಡಿಫೆನ್ಸ್ ಅಕಾಡೆಮಿ ಅಧ್ಯಕ್ಷ ಶಿವಾಜಿ ಗಾಯಕವಾಡ ಹೇಳಿದರು. ಅವರು ಇಂದು ನಗರದ ರವೀಂದ್ರನಾಥ ಠಾಗೋರ್ ಶಾಲಾ ಕಾಲೇಜಿನ ಆವರಣದಲ್ಲಿ 76 ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.  ಭಾರತೀಯ ಪಾಲಿಗೆ ಜನವರಿ 26 ಹೆಮ್ಮೆಯ ದಿನವಾಗಿದ್ದು, ಸ್ವಾತಂತ್ರ್ಯ ಸಿಕ್ಕ ದಿನವನ್ನು ಎಷ್ಟು ಸಂಭ್ರಮದಿಂದ ಆಚರಿಸುತ್ತೇವೋ ಅಷ್ಟೇ ಸಂಭ್ರಮದಿಂದ ಈ ದಿನವನ್ನು ಆಚರಿಸುತ್ತೇವೆ. ದೇಶದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವಾಗಿದ್ದು, ಜನವರಿ 26 ರಂದು ಈ ಐತಿಹಾಸಿಕ ಕ್ಷಣವನ್ನು ಆಚರಿಸುವ ಮೂಲಕ ನೆನಪಿಸಿಕೊಳ್ಳುತ್ತೇವೆ. ಈ ವರ್ಷ 75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದು, ಈ ದಿನದ ಮಹತ್ವ ಹಾಗೂ ಇತಿಹಾಸ ಎಲ್ಲರಿಗೂ ಗೊತ್ತಿರಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಇತ್ತಿಚೆಗೆ ಮೊಬೈಲ್ ಎಂಬ ಮಾಯಾಲೋಕದ ಜಾಲದಲ್ಲಿ ಬಿದ್ದು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಿರಿ. ಮೊಬೈಲ್ ಮಾಯೆ ಎಂಬ ಜಾಲದಿಂದ ಹೊರ ಬಂದು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಿ. ನಿಮ್ಮ ಕುಟುಂಬ, ದೇಶ ರಾಜ್ಯದ ಏಳಿಗೆಯಲ್ಲಿ ನಿಮ್ಮ ಪಾತ್ರ ಮಹತ್ವದ್ದು, ಆದ್ದರಿಂದ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಿ ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಸಂಸ್ಥೆಯ ಕಾರ್ಯದರ್ಶಿ ರೀತಾ ಗಾಯಕವಾಡ, ಪ್ರಿನ್ಸಿಪಲ್ ಶ್ರೀನಿವಾಸ ಪುಕಾಳೆ, ಹೆಡ್ ಮಾಸ್ಟರ್ ಶಿವರಾಮ ಜಮ್ಮನಕಟ್ಟಿ, ಪ್ರಲ್ಹಾದ ಹೂಗಾರ ವೇದಿಕೆ ಮೇಲಿದ್ದರು‌. ಧ್ವಜಾರೋಹಣ ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇದೇ ಪ್ರಥಮ ಬಾರಿಗೆ ರವೀಂದ್ರನಾಥ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ದೇಶಭಕ್ತಿಯ ಜಾಗೃತಿ ಮನರಂಜನಾ ಕಾರ್ಯಕ್ರಮಗಳು ಜರುಗಿದವು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಮುದ್ರಣ ಕಾರ್ಮಿಕ ಸಂಘದಿಂದ ಅದ್ದೂರಿ ಗಣರಾಜ್ಯೋತ್ಸವ ಆಚರಣೆ.

ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನ ಹತ್ತಿರ ಇರುವ ಮುದ್ರಣ ಕಾರ್ಮಿಕ ಸಂಘದ ವತಿಯಿಂದ ಗಣರಾಜ್ಯೋತ್ಸವದ ೭೬ನೇ ಧ್ವಜಾರೋಹಣ ಸಂಖನ ಮಹಾಲಕ್ಷ್ಮೀ ಮುದ್ರಣ ಮಾಲೀಕರಾದ ಪ್ರಕಾಶ ಬಸು ಪಟ್ಡಣದ ಇವರ ನೇತೃತ್ವದಲ್ಲಿ ದ್ವಜಾರೋಹಣ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚಿದಾನಂದ ವಾಲಿ, ಖಜಾಂಚಿ ಹನೀಪ ಮುಲ್ಲಾ, ನಿರ್ದೇಶಕರುಗಳಾದ ವೆಂಕಟೇಶ ಕಪಾಲಿ, ಜಗದೀಶ ಶಹಾಪುರ, ದೀಪಕ ಜಾಧವ, ಮೃತ್ಯುಂಜಯ ಶಾಸ್ತ್ರೀ, ಬಸವರಾಜ ಹಾವಿನಾಳ, ನಬಿ ಮಕಾಂದಾರ, ಸುರೇಶ ಗೊಳಸಂಗಿ, ಶ್ರೀಮಂತ ಬೂದಿಹಾಳ ಸದ್ಯರಾದ ರಾಜು ರೇಶ್ಮೀ, ಬಸವರಾಜ ಬಿಜ್ಜರಗಿ, ಸಿದ್ಧಲಿಂಗ ಶಿಂಪಗೇರ, ದಾವಲ ಪಡಗಾನವರ, ಶಶಿಕಲಾ ವಾಲಿ ಮುಂತಾದವರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

26-01-2025 EE DIVASA KANNADA DAILY NEWS PAPER

Friday, January 24, 2025

ಮೈಕ್ರೊ ಫೈನಾನ್ಸ್‍ಗಳಿಂದ ಮಹಿಳೆಯರಿಗೆ ರಕ್ಷಣೆ ನೀಡಿ: ಮಹಿಳಾ ಆಯೋಗದ ಅಧ್ಯಕ್ಷೆ ಚೌಧರಿ

ವಿಜಯಪುರ: ಮೈಕ್ರೊ ಫೈನಾನ್ಸ್ ಹಾಗೂ ಚಿಟ್ ಫಂಡ್ಸ್ ಹಾವಳಿಗಳಿಂದ ಮಹಿಳೆಯರು ಅನುಭವಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ನಗರದ ಜಿಪಂ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಮಹಿಳಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯಂತೆÉ ವಿಜಯಪುರ ಜಿಲ್ಲೆಯಲ್ಲಿಯೂ ಕೂಡ ಕೇಲವು ಫೈನಾನ್ಸ್ ಕಂಪನಿಗಳಿಂದ ತಡರಾತ್ರಿ ವರೆಗೂ ಮನೆಗೆ ಬಂದು ಕಂತು ತುಂಬಲು ಹಾಗೂ ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿರುವ ಕುರಿತು ಇಲ್ಲಿಯ ಮಹಿಳೆಯರು  ದೂರನ್ನು ನೀಡಿದ್ದು, ಈ ಕುರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಎಲ್ಲ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು.

ಕಳೆದ ಎರಡು ದಿನಗಳಿಂದ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ,  ಮಹಿಳೆಯರು ಮಲ, ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಕೆಲವು ಕಿಡಗೇಡಿಗಳು ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರುಗಳು ಬಂದಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.

ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಗ್ರೂಪ್-ಡಿ ಮಹಿಳಾ ಸಿಬ್ಬಂದಿಗಳಿಗೆ ನಿಗದಿ ಪಡಿಸಿದ ವೇತನಕ್ಕೆ ಬದಲಾಗಿ ಅರ್ಧ ಸಂಬಳ ನೀಡುತ್ತಿದ್ದಾರೆ ಎಂದು ದೂರು ಬಂದಿದ್ದು ಇಂತಹ ದೂರುಗಳು ಇರುವ  ಟೆಂಡರ್ ಪಡೆದಂತಹ ಏಜನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.

ನರೇಗಾ ಯೋಜನೆಯಡಿ ಮಹಿಳೆಯರಿಗೆ ಉದ್ಯೋಗ ದೊರೆತ್ತಿಲ್ಲ ಎಂದು ದೂರು ಬಂದಿವೆ. ಶೇ.50 ರಷ್ಟು ಮಹಿಳೆಯರಿಗೆ ನರೇಗಾ ಅಡಿ ಉದ್ಯೋಗ ನೀಡುವ ವ್ಯವಸ್ಥೆ ಆಗಬೇಕು ಮತ್ತು ವೇತನವನ್ನು ಕೂಡ ಸರಿಯಾಗಿ ನೀಡದೆ ಸತಾಯಿಸುತ್ತಾರೆಂಬ ದೂರು ಇರುವುದರಿಂದ, ಸಂಬಂಧಿಸಿದ್ದ ಗ್ರಾಮ ಪಂಚಾಯಿತಿ ಅಧಿಕಾರಿ ಅಲ್ಲಿನ ಮಹಿಳೆಯರ ಸಮಸ್ಯೆ ನಿವಾರಿಸುವಂತೆ  ಎಚ್ಚರಿಕೆ ನೀಡಿದರು.

ಗ್ರಾಮಗಳಲ್ಲಿನ ಕೆಲವು ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ಮಹಿಳೆಯರಿಂದ ದೂರುಗಳು ಬಂದಿವೆ. ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಸಾರಾಯಿ ದೊರೆಯುವುದರಿಂದ ಗಂಡಂದಿರು ಕುಡಿದು ಬಂದು ಮಹಿಳೆಯರಿಗೆ ತೊಂದರೆ ಕೊಡುತ್ತಾರೆ ಎಂದು ಸಾಕಷ್ಟು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಪ್ರಾಥಮಿಕ ಶಾಲೆಗಳಿರುವುದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ನಗರ ಪ್ರದೇಶಗಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸಲು ಹೆಚ್ಚಿನ ತಾಯಂದಿರು ಹಿಂದೇಟು ಹಾಕುತ್ತಿದ್ದಾರೆ. ಪ್ರೌಢ ಹಾಗೂ ಕಾಲೇಜು ಶಿಕ್ಷಣಗಳನ್ನು ಗ್ರಾಮಗಳಲ್ಲಿಯೇ ನೀಡಲು ವ್ಯವಸ್ಥೆ ಮಾಡಿದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿ ಬಾಲಕಿಯರಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಳ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ, ಜಿಲ್ಲಾ ಪಂಚಾಯಿತಿ ಯೋಜಾನಾ ನಿರ್ದೇಶಕ ಬಿ.ಎಸ್. ರಾಠೋಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸಿ.ಕೆ. ಚವ್ಹಾಣ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಮಹಿಳಾ ವಿವಿ: ಹಂಗಾಮಿ ಕುಲಪತಿಯಾಗಿ ಪ್ರೊ.ಶಾಂತಾದೇವಿ.ಟಿ. ನೇಮಕ

ವಿಜಯಪುರ: ಹಾಲಿ ಕುಲಪತಿ ಪ್ರೊ..ಬಿ.ಕೆ.ತುಳಸಿಮಾಲ ಅವರು ನಾಲ್ಕು ವರ್ಷಗಳ ಸೇವೆಯ ನಂತರ ಜನೆವರಿ 24ರಂದು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಶಾಂತಾದೇವಿ ಟಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ಥಾವರಚಂದ್ ಗೆಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ.  

ಅಧಿಕಾರ ಹಸ್ತಾಂತರ: ರಾಜ್ಯಪಾಲರ ಆದೇಶದಂತೆ ಪ್ರೊ.ಬಿ.ಕೆ.ತುಳಸಿಮಾಲ ಅವರು ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ.  ಅವರಿಗೆ ಇಂದು ಇಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಾಲ್ಕು ವರ್ಷಗಳ ಸೇವೆಯಿಂದ ನಿವೃತ್ತರಾದ ಪ್ರೊ.ಬಿ.ಕೆ.ತುಳಸಿಮಾಲ ಅವರನ್ನು ವಿಶ್ವವಿದ್ಯಾನಿಲಯದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರ್, ವಿವಿಧ ವಿಭಾಗಗಳ ಮುಖ್ಯಸ್ಥರು/ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Saturday, January 18, 2025

19-01-2025 EE DIVASA KANNADA DAILY NEWS PAPER

ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ: ಸಿ.ಎಂ.ಸಿದ್ದರಾಮಯ್ಯ

ತುಮಕೂರು : ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ. ಪತ್ರಿಕಾ ವೃತ್ತಿ ಉದ್ಯಮ ಆದ ಕೂಡಲೇ ಇದರ ಉದ್ದೇಶಗಳು ಬದಲಾಗುತ್ತವೆ.

ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ. ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ಸಿ.ಎಂ. ಸಿದ್ದರಾಮಯ್ಯ ಅವರು ಕರೆ ನೀಡಿದರು. 

 ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ   ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 

ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾ ವೃತ್ತಿಯ ಕರ್ತವ್ಯ. ಧ್ವನಿ ಇಲ್ಲದವರ ಪರವಾಗಿ ವೃತ್ತಿ ಇದ್ದಾಗ ಸಮಾಜಕ್ಕೆ ಅನುಕೂಲ. ಸಮಾಜದಲ್ಲಿರುವ ಮೇಲು, ಕೆಳ ಜಾತಿಗಳ ನಡುವಿನ ತಾರತಮ್ಯ ಮತ್ತು ಅಸಮಾನತೆ ಕೊನೆಯಾಗುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು. 

ನಿಮ್ಮ ವಿಶೇಷ ಸಂಚಿಕೆ ನೀವೂ ಓದಿ

ಈಗ ವೇದಿಕೆಯಲ್ಲಿ ಬಿಡುಗಡೆಯಾದ ನಿಮ್ಮದೇ ವಿಶೇಷ ಸಂಚಿಕೆ ನೀವೂ ಓದಿ. ಪತ್ರಕರ್ತರ ಕರ್ತವ್ಯ , ಸವಾಲುಗಳ ಪಟ್ಟಿ ಇದೆ. ಅದನ್ನು ಓದಿ, ಪಾಲಿಸಿ ಎಂದರು, 

ಜನ ಪತ್ರಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೌಡ್ಯದ ಸುದ್ದಿಗಳನ್ನು , ಚರ್ಚೆಗಳನ್ನು ನಡೆಸಿ ನೋಡುಗರ, ಓದುಗರ ದಾರಿ ತಪ್ಪಿಸಬೇಡಿ ಎಂದರು. 

ವಿಜ್ಞಾನ, ತಂತ್ರಜ್ಞಾನದ ವೇಗದಲ್ಲೇ ಪತ್ರಿಕೋದ್ಯಮ ಬೆಳೆಯುತ್ತಿದೆ. ಇದು ಅವಕಾಶ , ಸವಾಲು ಎರಡೂ ಆಗಿದೆ ಎಂದರು. 

ದೇಶದ ಪ್ರತಿಯೊಬ್ಬರೂ ಸಂವಿಧಾನ ಓದಬೇಕು. ಆಗ ಹಕ್ಕು-ಕರ್ತವ್ಯ ಎರಡೂ ಗೊತ್ತಾಗುತ್ತದೆ. ನಿಮ್ಮದು ಶಕ್ತಿಯುತ ಮಾಧ್ಯಮ. ಜನ ನಿಮ್ಮ ಕಡೆ ನೋಡ್ತಾ ಇದ್ದಾರೆ. ಈ ಎಚ್ಛರಿಕೆ ಸದಾ ಇರಲಿ ಎಂದರು. 

ಕೆಲವೇ ದಿನದಲ್ಲಿ ಬಸ್ ಪಾಸ್

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ, ಪತ್ರಕರ್ತರ ಕುಟುಂಬಕ್ಕೆ  ಆರೋಗ್ಯ ವಿಮೆ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಪತ್ರಕರ್ತರ ಮಾಸಾಶನವನ್ನೂ 3 ಸಾವಿರದಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು. 

ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್,  ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ರಾಜ್ಯ ಸರಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿ ಜಿಲ್ಲೆಯ ಶಾಸಕರುಗಳು ಹಾಗೂ ಹಲವು ಪ್ರಮುಖರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು. 

 ಮೊದಲಿಗೆ ಸಮ್ಮೇಳನದ ಆವರಣದಲ್ಲಿ ಆಯೋಜಿಸಿದ್ದ ಸ್ಟಾಲ್ ಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ಮಹಿಳಾ ಸ್ವ ಸಹಾಯ ಸಂಘಗಳು ಸಿದ್ದಪಡಿಸಿದ ತಿಂಡಿ ಸವಿದರು.

ಕೆ.ವಿ.ಪ್ರಭಾಕರ್ ಅವರಿಗೆ ಅಭಿನಂಧಿಸಿದ ಸಮ್ಮೇಳನ

ರಾಜ್ಯದ ಪತ್ರಕರ್ತ ಸಮುದಾಯದ ವೃತ್ತಿಪರ ಸಮಸ್ಯೆಗಳಿಗೆ ಅತ್ಯಂತ ಸಹೃದಯತೆಯಿಂದ ಸ್ಪಂದಿಸಿ, ಪರಿಹಾರ ಒದಗಿಸಿಕೊಡುತ್ತಿರುವುದರ ಜೊತೆಗೆ ಸಮ್ಮೇಳನದ ಯಶಸ್ಸಿಗೆ ಸಕಲ ರೀತಿಯಲ್ಲಿ ಸಂಪೂರ್ಣ ಸಹಕಾರ ನೀಡಿದ ಮುಖ್ಯಮಂತ್ರಿಗಳ  ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಸಮ್ಮೇಳನ ವಿಶೇಷ ಅಭಿನಂದನೆ ಸಲ್ಲಿಸಿತು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Friday, January 17, 2025

ಗೆಜೆಟೆಡ್ ಪ್ರೊಬ್ರೇಷನರ್ ಪರೀಕ್ಷೆ: ಅಚ್ಚುಕಟ್ಟಾಗಿ ನಡೆಸುವಂತೆ ಸೂಚನೆ

ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗ ವತಿಯಿಂದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ನಡೆಸಲಿರುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯವಸ್ಥಿತ ಹಾಗೂ ಅತ್ಯಂತ ಎಚ್ಚರಿಕೆ ಹಾಗೂ ಸೂಕ್ಷö್ಮವಾಗಿ, ಪಾರದರ್ಶಕತೆಯಿಂದ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ 2023-24ನೇ ಸಾಲಿನ ಗೆಜೆಟೆಡ್ ಪ್ರೊಬ್ರೇಷನರ್ ಗ್ರೂಪ್ ಬಿ ವೃಂದದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜ. 19 ರಂದು ನಡೆಯುವ 21 ಕೇಂದ್ರಗಳಲ್ಲಿ ಒಟ್ಟು 8599 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಯಿAದ 11.30 ಗಂಟೆಯ ವರೆಗೆ ಸಾಮಾನ್ಯ ಪರೀಕ್ಷೆ ಹಾಗೂ ಜ. 25 ರಂದು ನಡೆಯುವ 20 ಕೇಂದ್ರಗಳಲ್ಲಿ ಒಟ್ಟು 8011 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದು ಮಧ್ಯಾಹ್ನ 3 ರಿಂದ 5 ಗಂಟೆ ವರೆಗೆ ನಿರ್ದಿಷ್ಟ ಪಡಿಸಿದ್ದ ಪರೀಕ್ಷೆ ಜರುಗಲಿದೆ. ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಅಧಿವೇಶನದ ಪರೀಕ್ಷೆ ಪ್ರಾರಂಭವಾಗುವ 2 ಗಂಟೆ ಮೊದಲು ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತದೆ ಎಂದರು.

ಪರೀಕ್ಷಾ ಕೇಂದ್ರಗಳಿಗೆ ಉಪಕೇಂದ್ರಗಳ ಮೇಲ್ವಿಚಾರಣೆಗೆ ಓರ್ವ ಎ ಹಾಗೂ ಬಿ ದರ್ಜೆಯ ಅಧಿಕಾರಿಯನ್ನು ನೇಮಿಸಿವುದು ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಕೊಂಡೊಯ್ಯಲು ಮಾರ್ಗಾಧಿಕಾರಿಯನ್ನು ನೇಮಿಸಿ ಅವರಿಗೆ ಬೆಂಗಾವಲು ಕಾರ್ಯಕ್ಕಾಗಿ ಓರ್ವ ಸಶಸ್ತç ಪೊಲೀಸ್ ಸಿಬ್ಬಂದಿ, ಗ್ರೂಪ್-ಡಿ ಸಿಬ್ಬಂದಿ, ವಾಹನÀದ ವ್ಯವಸ್ಥೆಗೆ ಅವರು ಸೂಚನೆ ನೀಡಿದರು.

ಅಭ್ಯರ್ಥಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೊಳಪಡಿಸಬೇಕು. ಅಭ್ಯರ್ಥಿಗಳ ಯಾವುದೇ ಎಲೆಕ್ಟಾçನಿಕ್ ಡಿವೈಸ್, ಮೈಕ್ರೋಪೂನ್ ಇನ್ನಿತರ ಉಪಕರಣ ಬಳಸದಿರುವ ಬಗ್ಗೆ ತಪಾಸಣೆ ನಡೆಸಬೇಕು. ಪರೀಕ್ಷಾ ಹಿಂದಿನ ದಿನ ಸಿಸಿಟಿವಿ ಕ್ಯಾಮರಾ ಬಾಡಿ ಕ್ಯಾಮರಾ, ಪ್ರಿಸ್ಕಿಂಗ್, ಮುಖ ಚಹರೆ ಮತ್ತು ಜಾಮರ್ ಗಳನ್ನು ಉಪ ಪರೀಕ್ಷಾ ಕೇಂದ್ರದ ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸುವುದು, ಪರೀಕ್ಷಾ ದಿನದಂದು ಅವುಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಿಕೊಳ್ಳಬೇಕು ಎಂದರು.

ತಹಶೀಲ್ದಾರರು, ಡಿಡಿಪಿಐ (ಆಡಳಿತ) ಟಿ.ಎಸ್.ಕೋಲಾರ್, ಖಜಾನೆ ಇಲಾಖೆಯ ಉಪ ನಿರ್ದೇಶಕ ಹನುಮಂತ ಕಾಲತಿಪ್ಪಿ, ವೀಕ್ಷಕರು, ಪ್ರಶ್ನೇ ಪತ್ರಿಕೆ ವಿತರಣಾ ತಂಡ, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕ, ಮಾರ್ಗಾಧಿಕಾರಿ, ಸ್ಥಾನಿಕ ಜಾಗೃತ ದಳದವರು ಹಾಗೂ ಇತರ ಅಧಿಕಾರಿಗಳು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ- 2025

ವಿಜಯಪುರ: ಭಾರತ ಚುನಾವಣಾ ಆಯೋಗವು ಚುನಾವಣೆ ಕುರಿತ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಧ್ಯೇಯವಾಕ್ಯವನ್ನು ಜ.25 ರಂದು ತಮ್ಮ ತಮ್ಮ ಕಚೇರಿಯ ಪತ್ರ ವ್ಯವಹಾರಗಳಲ್ಲಿ ಬಳಕೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜ. 25 ರಂದು ನಡೆಯುವು 15 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಹಾಗೂ ಅಧೀನ ಕಚೇರಿಗಳಲ್ಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಮತದಾರರ ಪ್ರತಿಜ್ಞಾ ವಿಧಿ ಬೋಧನೆ ಬೋಧಿಸುವುದರ ಜೊತೆಗೆ ಛಾಯಾಚಿತ್ರ ತೆಗೆದು ಪ್ರಚಾರ ಪಡಿಸಬೇಕು. ಸಾಮಾಜಿಕ ಸೇವಾ ಸಂಸ್ಥೆಗಳು, ಯುವ ಸ್ವಯಂ ಸೇವಾ ಸಂಸ್ಥೆಗಳು, ಎನ್‍ಎಸ್‍ಎಸ್, ಎನ್‍ಸಿಸಿ ಸ್ಕೌಟ್ ಮತ್ತು ಗೈಡ್ಸ್. ನೆಹರು ಯುವಕ ಕೇಂದ್ರ ಸೇರಿದಂತೆ ರಾಷ್ಟ್ರೀಯ ಮತದಾರರ ದಿನಾಚರಣೆ 2025 ರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯಿತಿ ಸಭಾಂಗಣದ ವೇದಿಕೆ ಆಯೋಜಿಸಬೇಕು, ವೇದಿಕ ಕಾರ್ಯಕ್ರಮ ಮುಂಚೆ ಜಾಥಾ ಕಾರ್ಯಕ್ರಮ ಏರ್ಪಡಿಸುವುದು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಮತದಾನ ಕುರಿತು ಪ್ರಬಂಧ ಸ್ಪರ್ಧೇ ಏರ್ಪಡಿಸಬೇಕು, ಸ್ಪರ್ಧೇಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲು ಕ್ರಮ ವಹಿಸಬೇಕು ಎಂದರು.

ಪತ್ರಿಕೆ, ರೇಡಿಯೋ, ಟಿವಿ ಸಾಮಾಜಿಕ ಜಾಲತಾಣ ಹಾಗೂ ಪರಸ್ಪರ ಸಂವಹನ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವುದು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ವಿತರಿಸುವುದು ಅಂಚೆ ಮತಪತ್ರ, ಮತದಾರರಿಗೆ ಮತ್ತು ಮತಗಟ್ಟೆಗಳಲ್ಲಿ ಒದಗಿಸಿರುವ ಮೂಲಭೂತ ಸೌಲಭ್ಯಗಳು, ಇವಿಎಮ್, ವಿವಿ ಪ್ಯಾಟ್, ಓಟರ್ ಹೆಲ್ಪಲೈನ್ ನೈತಿಕ ಮತದಾನ ಇತ್ಯಾದಿಗಳ ಕುರಿತು ಜಾಗೃತಿ ಚಿತ್ರಗಳನ್ನು ಪ್ರದರ್ಶಿಸುವುದು ಇದರ ಜೊತೆಗೆ ಸ್ವೀಪ್ ಕಾರ್ಯಕ್ರಮಗಳು ಕೂಡ ಒಂದು ಭಾಗವಾಗಿವೆ ಎಂದರು.

ಜ.30 ರಂದು ಹುತಾತ್ಮ ದಿನಾಚರಣೆ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದ ಮಹಣೀಯರ ಸ್ಮರಣಾರ್ಥ ಜ. 30 ರಂದು ಜಿಲ್ಲಾಡಳಿತ ವತಿಯಿಂದ ಪರ್ವಾಹ್ನ 11.2 ಕ್ಕೆ ನಗರದ ಮೀನಾಕ್ಷೀ ವೃತ್ತದಲ್ಲಿ ಆಚರಿಸಲು ನಿರ್ಧರಿಸಲಾಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚರದಂತೆ ಆಹ್ವಾನ ನೀಡುವುದು, ಭಾರತದ ಸ್ವಾತಂತ್ರಕ್ಕಾಗಿ ಹೋರಾಟಗಾರರ ಪಾತ್ರವನ್ನು ತಿಳಿಸುವಂತಹ ಭಾಷಣ, ಚರ್ಚೆಗಳನ್ನು ಏರ್ಪಡಿಸುವುದು ಹಾಗೂ ಪ್ರಾರ್ಥನೆ ಸರ್ವಧರ್ಮ ಭಜನೆ ಕಾರ್ಯಕ್ರಮ ಆಯೋಜಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆ ಮುಖಂಡರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

18-01-2025 EE DIVASA KANNADA DAILY NEWS PAPER

17-01-2025 EE DIVASA KANNADA DAILY NEWS PAPER

Tuesday, January 14, 2025

ಫಲಪುಷ್ಪ ಪ್ರದರ್ಶನ

ವಿಜಯಪುರ : ತೋಟಗಾರಿಕೆ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ವಿಜಯಪುರ, ತೋಟಗಾರಿಕೆ ಇಲಾಖೆ,ವಿಜಯಪುರ ಕರ್ನಾಟಕ ರಾಜ್ಯಲಿಂಬೆ ಅಭಿವೃದ್ಧಿಮಂಡಳಿ, ಇಂಡಿ, ಜಿಲ್ಲಾಹಾಪ್ಕಾಮ್ಸ್, ವಿಜಯಪುರ ಹಾಗೂ ವಿಜಯಪುರ ಜಿಲ್ಲಾತೋಟಗಾರಿಕೆ ಸಂಘ (ರಿ) ಇವರ ಸಹಯೋಗದೊಂದಿಗೆ ನಗರದ ಬಸವವನದಲ್ಲಿ ಜನೇವರಿ 13, 14 ಹಾಗೂ 15 ರಂದು ಫಲ ಫುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ಫಲ ಪುಷ್ಪ ಪ್ರದರ್ಶನವನ್ನು ಕಾರ್ಯಕ್ರಮವನ್ನು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ (ಯತ್ನಾಳ) ಉದ್ಘಾಟಿಸಿದರು. ಫಲ ಪುಷ್ಪಪ್ರದರ್ಶನದಲ್ಲಿ ಹೂವಿನಲ್ಲಿ ಅರಳಿದ 14ಅಡಿ ನಂದಿ, ದ್ರಾಕ್ಷಿಹಣ್ಣಿನಲ್ಲಿ ನಿರ್ಮಾಣಗೊಂಡ ಗೋಳಗುಮ್ಮಟ, ವಿವಿಧಬಗೆಯ ಹೂಗಳಿಂದ ನಿರ್ಮಾಣವಾಗುವ ಕಲಾಕೃತಿಗಳು, ತರಕಾರಿಯಲ್ಲಿ ಮಹಾಪುರುಷರ ಆಕೃತಿ ಕೆತ್ತನೆಗಳನ್ನು ಪ್ರದರ್ಶಿಸಲಾಗುತ್ತದೆ. ಶಾಲಾಮಕ್ಕಳಿಗೆ ತೋಟಗಾರಿಕೆ ವಿಷಯಗಳ ಕುರಿತ ಹೆಚ್ಚಿನ ಅಧ್ಯಯನ ಪಡೆಯಲು ಜಿಲ್ಲೆಯ ರೈತರುಬೆಳೆದಂತಹ ಎಲ್ಲ ಬಗೆಯ ಹಣ್ಣುಗಳು, ತರಕಾರಿಗಳು, ಪುಷ್ಪಗಳಪ್ರದರ್ಶನ, ಹೈಡ್ರೋಫೋನಿಕ್ಸ್ನಲ್ಲಿ ಬೆಳೆದತದಹ ತರಕಾರಿಗಳ ಪ್ರದರ್ಶಿನ, ಶಾಲಾ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನೀಯರಿಗೆ ಸಾರ್ವಜನಿಕರಿಗೆ ಕುಬ್ಜ ಗಿಡಗಳಬೇಸಾಯ, ಅಣಬೆ ಬೇಸಾಯ, ಕೈತೋಟ ತಾರಸಿತೋಟ, ಜಲಕೃಷಿ ಬೇಸಾಯ, ಸಾವಯವ ಕೃಷಿ ಕುರಿತು ರೈತರಿಗೆ ಮಾಹಿತಿ ಹಾಗೂ ತೋಟಗಾರಿಕೆ ಸೇವಾಕೇಂದ್ರ, ವಿವಿಧಯೊಂತ್ರೋಪಕರಣ, ಹನಿ ನೀರಾವರಿ ಉಪಕರಣಗಳು ಹಾಗೂ ಇತರ ಪರಿಕರಗಳ ಮಳಮಳಿಗೆಗಳನ್ನು ಸ್ಥಾಪಿಸಿದೆ. ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ಸೀಬೆ ಮತ್ತು ಸೀತಾಫಲ ಹಾಗೂ ಲಿಂಬೆ ಬೆಳೆಗಳ ಕುರಿತು ವಿಚಾರ ಸಂಕೀರ್ಣ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ಹಣ್ಣು ಹಂಪಲಗಳನ್ನು ರೈತರಿಂದ ನೇರವಾಗಿ ಒದಗಿಸಲು ವ್ಯವಸ್ಥೆಕಲ್ಪಿಸಲಾಗಿದೆ. ಪ್ರತಿ ದಿನಸಾಯಂಕಾಲ ವಿವಿಧ ಕಲಾತಂಡ, ಶಾಲಾಕಾಲೇಜಿನವಿದ್ಯಾರ್ಥಿ/ ವಿದ್ಯಾರ್ಥಿನೀಯರಿಂದ ಮನೋರಂಜನೆ ಕಾರ್ಯಕ್ರಮ ಜರುಗಲಿವೆ.

ಉದ್ಘಾಟಣಾ ಕಾರ್ಯಕ್ರಮದಲ್ಲಿ ನಾಗಠಾಣ ಮತ ಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೋಂಡ, ಮಹಾನಗರ ಪಾಲಿಕೆ ಮಹಾಪೌರಾದ ಶ್ರೀಮತಿ ಮಹೇಜಬೀನ್ ಅಬ್ದುಲ ರಜಾಕ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ, ಎನ್.ಎಚ್.ಬಿ ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಎಮ್ ಕೋಕರೆ, ಹಾಫ್ ಕಾಮ್ಸ ಅಧ್ಯಕ್ಷರಾದ ಸುಭಾಸ ಗೌಡ ಪಾಟೀಲ, ದ್ರಾಕ್ಷಿ ಬೆಳೆಗಾರರ ಅಧ್ಯಕ್ಷರಾದ ಡಾ. ಕೆ.ಎಚ್. ಮುಂಬಾರೆಡ್ಡಿ, ತೋಟಗಾರಿಕೆ ಉಪ ನಿರ್ದೇಶಕರಾದ ರಾಹುಲ ಬಾವಿದೊಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಬಾಲಮಂದಿರದ ಮಕ್ಕಳೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದ ಜಿಲ್ಲಾಧಿಕಾರಿ ಟಿ. ಭೂಬಾಲನ್

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಫ್ಜಲಪೂರ ಟಕ್ಕೆಯಲ್ಲಿರುವ ಬಾಲಕರ ಬಾಲ ಮಂದಿರದ ಮಕ್ಕಳೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ ಗಮನ ಸೆಳೆದು ಮಕ್ಕಳಿಗೆ ಹಬ್ಬದ ಶುಭ ಕೋರಿದರು. 

ಹಬ್ಬದ ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಬೆರೆತು ಹಬ್ಬದ ಶುಭ ಕೋರಿದರು. ಎಲ್ಲ ಮಕ್ಕಳಿಗೂ ಹೊಸ ಬಟ್ಟೆಯ ಉಡುಗೊರೆ ನೀಡಿ, ಸಂಕ್ರಾತಿ ಹಬ್ಬದ ಸಾಂಪ್ರದಾಯಿಕ ಸಿಹಿ ತಿನಿಸುಗಳಾದ ಕಬ್ಬು, ಕುಸರೆಳ್ಳು ಮೊದಲಾದವುಗಳನ್ನು ಸಂತೋಷದಿಂದ ವಿತರಿಸಿ ಹಬ್ಬದ ಶುಭಕೋರಿದ್ದು ವಿಶೇಷವಾಗಿತ್ತು. 

ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನವದೆಹಲಿಯ ಲಾಡಲಿ ಫೌಂಡೇಷನ್ ಪ್ರತಿಷ್ಠಾನದ ಸಹಯೋಗದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿತ್ತು.

ಬಾಲಮಂದಿರದ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು,ಓದುವ ವಯಸ್ಸಿನಲ್ಲಿ ಕಷ್ಟಪಟ್ಟು ಓದಿದರೆ ಭವಿಷ್ಯದ ದಾರಿ ಸುಗಮವಾಗುತ್ತದೆ, ನಮ್ಮ ಅಭಿವೃದ್ಧಿಗೆ ನಾವೇ ಶಿಲ್ಪಿಗಳು, ಹಿರಿಯರು ಕೇವಲ ಮಾರ್ಗ ತೋರಬಹುದು, ಆದರೆ ಮಾರ್ಗದಲ್ಲಿ ಸಾಗಬೇಕಾದವರು ನೀವೇ, ಹೀಗಾಗಿ ಚೆನ್ನಾಗಿ ಓದಿ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. 

ಸಾಧನೆ ಮಾಡಲು ಮನಸ್ಸು ಮಾಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ, ಧೃಡಮನಸ್ಸು ಮಾಡಿ ಸಾಧನೆಯ ಪಥದಲ್ಲಿ ಮುನ್ನಡೆಯಿರಿ ಎಂದು ಕರೆ ನೀಡಿದರು.

ಬಾಲಮಂದಿರದ ಪ್ರಗತಿಗೆ ಸರ್ವವಿಧದಲ್ಲಿಯೂ ಪ್ರಯತ್ನಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರ ಮುತವರ್ಜಿಯಿಂದ ಸಿಎಸ್‌ಆರ್ ಅನುದಾನದ ಅಡಿಯಲ್ಲಿ ೧೦ ಕಡೆ ಓಪನ್ ಜಿಮ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಒಂದು ಓಪನ್ ಜಿಮ್‌ನ್ನು ವಿಜಯಪುರ ಬಾಲಕರ ಬಾಲ ಮಂದಿರದಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಸಂತೋಷದ ವಿಷಯವನ್ನು ಸಂಕ್ರಾಂತಿ ಸಂದರ್ಭದಲ್ಲಿ ಮಕ್ಕಳಿಗೆ ತಿಳಿಸಿದರು.

ಇನ್ನೊಂದು ಖುಷಿಯ ಸಂಗತಿಯನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಟಿ. ಭೂಬಾಲನ್, ಅತ್ಯಾಧುನಿಕ ಸೌಕರ್ಯವುಳ್ಳ ನೂತನ ಬಾಲ ಮಂದಿರ ನಿರ್ಮಾಣಗೊಳ್ಳಲಿದ್ದು, ಅದರ ಜೊತೆಗೆ ಬಾಲಕಿಯರ ಬಾಲ ಮಂದಿರ ಸರ್ವತೋಮುಖ ಪ್ರಗತಿಗೆ ೩೦ ಲಕ್ಷ ರೂ. ಅನುದಾನ ಮೀಸಲಿರಿಸಿ ಅಭಿವೃದ್ಧಿಗೊಳಿಸಲಾಗುವುದು ಎಂದರು.

ಎಐ ತಂತ್ರಜ್ಞಾನಾಧಾರಿತ ಶೌಚಾಲಯ ನಿರ್ಮಾಣ, ಸ್ವಚ್ಚತೆ ಜಾಗೃತಿಯಲ್ಲಿ ಸಕ್ರೀಯವಾಗಿ ತೊಡಗಸಿಕೊಂಡಿರುವ ಲಾಡಲಿ ಫೌಂಡೇಷನ್ ವಿಜಯಪುರ ಜಿಲ್ಲೆಯನ್ನು ಸೇವಾ ದತ್ತು ಜಿಲ್ಲೆಯಾಗಿ ಸ್ವೀಕರಿಸಿ ಅನೇಕ ಕಾರ್ಯ ಮಾಡುತ್ತಿದೆ, ಬ್ಯಾಗ್, ಲೇಖನ ಸಾಮಗ್ರಿಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಾಡಲಿ ಫೌಂಡೇಷನ್ ರಾಷ್ಟಿಯ ಸಲಹೆಗಾರ ಡಾ.ಜಾವೀದ ಜಮಾದಾರ ಮಾತನಾಡಿ, ಬಾಲ ಮಂದಿರ ಮಕ್ಕಳ ಹಿತರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕ ಹಾಗೂ ಸಮಾಜ ಸೇವಾ ಸಂಸ್ಥೆಗಳ ಆದ್ಯ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಬಾಲಮಂದಿರ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪಣವನ್ನು ಸ್ವೀಕರಿಸೋಣ ಎಂದರು.

 ಬಡ, ನಿರ್ಗತಿಕ ಮಕ್ಕಳ ಕಲ್ಯಾಣಕ್ಕಾಗಿ ಪ್ರತಿಯೊಬ್ಬರು ಸಹಾಯಹಸ್ತ ಚಾಚುವ ಮನೋಭಾವ ರೂಢಿಸಿಕೊಳ್ಳಬೇಕಿದೆ ಎಂದರು. 

ಮಕ್ಕಳು ಸಹ ಸ್ಪಷ್ಟವಾದ ಗುರಿಯನ್ನು ಹೊಂದಿ ಆ ಗುರಿ ಕ್ರಮಿಸಲು ಗುರುವಿನ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು, ಸಾಧನೆಯಿಂದ ತಮ್ಮನ್ನು ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸ್ವತ: ಮಕ್ಕಳ ಜೊತೆ ಹಬ್ಬದ ಸಂಭ್ರಮದಲ್ಲಿ ತೊಡಗಿರುವುದು ಮಕ್ಕಳಿಗೂ ಖುಷಿ ತರಿಸಿದೆ, ಜಿಲ್ಲಾಧಿಕಾರಿಗಳ ನಡೆ ಮಾದರಿಯಾಗಿದೆ ಎಂದರು. 

ಇದೇ ಸಂದರ್ಭದಲ್ಲಿ ಲಾಡಲಿ ಫೌಂಡೇಷನ್ ವತಿಯಿಂದ ಬ್ಯಾಗ್, ಲೇಖನ ಸಾಮಗ್ರಿ ಹಾಗೂ ನೈರ್ಮಲ್ಯ ಕೈಪಿಡಿಗಳನ್ನು ವಿತರಿಸಲಾಯಿತು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಬಾಲಮಂದಿರದ ಅಧೀಕ್ಷಕಿ ಜಯಶ್ರೀ ಪವಾರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸುಮಾ ಚೌಧರಿ, ಕಲಾವತಿ ಉಪಸ್ಥಿತರಿದ್ದರು.

ಮೌನೇಶ ಪೋತದಾರ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Saturday, January 11, 2025

12-01-2025 EE DIVASA KANNADA DAILY NEWS PAPER

ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ

ವಿಜಯಪುರ : ಗ್ರಾಮಗಳ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ ಹೇಳಿದರು.

ನಗರದ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕೃಷಿ ಸಂಬAಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಹಾರ ಮತ್ತು ಪೌಷ್ಠಿಕ ಭದ್ರತೆಗಾಗಿ ಸುಸ್ಥಿರ ಕೃಷಿ ಎಂಬ ಶಿರ್ಷಿಕೆಯೊಂದಿಗೆ ಕೃಷಿ ಮೇಳ 2024-25 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಮಾರು 14 ಸಾವಿರ ಕೋಟಿ ರೂಗಳನ್ನು ವ್ಯಯಿಸಿ ಜಿಲ್ಲೆಯ ಬಹುತೇಕ ಭೂಮಿಯನ್ನು ನೀರಾವರಿಗೆ ಒಳಪಡಿಸಿದ್ದೇವೆ. ಜಿಲ್ಲೆಯಲ್ಲಿರುವ ಕರೆಗಳನ್ನು ತುಂಬಿಸಿ ಭೂಮಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿ ಬೋರವೆಲ್ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಕಾಣಹುದಾಗಿದೆ. ಇದರಿಂದ ಜಿಲ್ಲೆಯಲ್ಲಿ 10 ಕಾರ್ಖಾನೆಗಳು ನಡೆಯುವಷ್ಟು ಕಬ್ಬನ್ನು ಜಿಲ್ಲೆಯ ರೈತರು ಬೆಳೆಯುತ್ತಿದ್ದಾರೆ. ಜಿಲ್ಲೆಯು ನೀರಾವರಿಗೆ ಒಳ ಪಟ್ಟನಂತರ ಕೃಷಿ ಕಾರ್ಮಿಕರು ಗುಳೆ ಹೋಗುವುದು ಕೂಡ ಕಡಿಮೆಯಾಗಿದೆ. ಪ್ರತಿ ವರ್ಷ ಒಂದು ಬೆಳೆಯನ್ನು ಬೆಳೆಯುತ್ತಿದ್ದ ರೈತರು ಇಂದು ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಿದ್ದಾರೆ ಇದರಿಂದ ರೈತರ ಆದಾಯವೂ ಕೂಡ ವೃದ್ಧಿಯಾಗಿದೆ. ಜಿಲ್ಲೆ ನೀರಾವರಿ ಹೊಂದಿದ ಮೇಲೆ ಸಾಕಷ್ಟು ಬದಲಾವಣೆಗಳಾಗಿವೆ ಈ ಕೃಷಿ ಮೇಳ ಹೊಸ ಹೊಸ ಆವಿಷ್ಕಾರ, ಪ್ರಯೋಗಗಳು, ನೂತನ ತಂತ್ರಜ್ಞಾನದಿAದ ಕೂಡಿದೆ ರೈತರು ಸಮಗ್ರವಾದ ಮಾಹಿತಿ ಪಡೆದುಕೊಂಡು ಲಾಭದಾಯಕ ಬೆಳೆಗಳನ್ನು ಬೆಳೆಯುವಂತೆ ಅವರು ಕರೆ ನೀಡಿದರು. 

ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ್ ಕೃಷಿ ಮೇಳದಲ್ಲಿ ರೈತರ ಮಾಹತಿಗಾಗಿ ಕೃಷಿ ಉತ್ಪನ್ನ ಹಾಗೂ ಮಾರಾಟಗಳ ಮಳಿಯನ್ನು ಉದ್ಘಾಟಿಸಿ ಚಾಲನೆ ನೀಡಿದರು.

ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತ ಅಧ್ಯಕ್ಷರಾದ ಅಪ್ಪಾಜಿ ಸಿ.ಎಸ್. ನಾಡಗೌಡ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದು ಜಗತ್ತಿನಲ್ಲಿ ಹಲವೆಡೆ ಹವಾಮಾನ ವೈಪರಿತ್ಯಗಳಿಂದ ಕೃಷಿ ಚಟುವಟಿಕೆಗಳಲ್ಲಿ ತುಂಬಾ ತೊಂದರೆ ಹಾಗೂ ಕಷ್ಟಗಳನ್ನು ಅನುಭವಿಸುವಂತಾಗಿದೆ ರೈತರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಇದರಿಂದ ರೈತರ ರಕ್ಷಣೆಗೆೆ ಸಂಶೋಧನೆಗಳು ಅತ್ಯವಶ್ಯಕವಾಗಿವೆ ಕೃಷಿ ಮೇಳಗಳಲ್ಲಿ ನುರಿತ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ,ಆವಿಷ್ಕಾರಗಳು ಹಾಗೂ ಪರಿಣಿತರಿಂದ ರೈತರಿಗೆ ಸಲಹೆಳಗನ್ನು ನೀಡುವುದರೊಂದಿಗೆ ರೈತರಿಗೆ ಬಹಳ ಅನುಕೂಲವಾಗಲಿದೆ. ಕೃಷಿ ಮೇಳಗಳು ಜಿಲ್ಲೆಗೆ ಮಾತ್ರ ಸೀಮಿತವಾಗದೆ ಹೆಚ್ಚು ಕೃಷಿ ಪ್ರಧಾನವಾದ ಪ್ರದೇಶಗಳಲ್ಲಿ ಇಂತಹ ಮೇಳಗಳನ್ನು ಆಯೋಜಿಸಿದರೆ ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ. ರೈತರು ಮಿಶ್ರ ಬೆಳೆಗಳನ್ನು ಹೆಚ್ಚು ಹೆಚ್ಚು ಬೆಳೆಯಬೇಕು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಶು ಸಂಗಪನಾ ಇಲಾಖೆ ಸಹಯೋಗದೊಂದಿಗ ಕರ್ತವ್ಯ ನಿರ್ವಹಿಸಿದಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ(ಯತ್ನಾಳ)ಕೃಷಿ ಪ್ರಕಟಣೆಗಳ ಬಿಡುಗೆಡಗೊಳಿಸಿ ಮಾತನಾಡಿ ಪುರಾತನ ಕಾಲದಿಂದ ಬಂದ ಕೃಷಿ ಪದ್ಧತಿಗಳನ್ನು ನಾವು ಮರೆಯಬಾರದು ಪ್ರತಿಯೊಬ್ಬ ರೈತರು ಗೋವುಗಳನ್ನು ಸಾಕಣೆ ಮಾಡಬೇಕು ಗೋವು ರೈತರ ವರದಾನವಾಗಿದೆ ಹೊಸ ಹೊಸ ಸಂಶೋದನೆ ಕೈಗೊಳ್ಳುಲು ಸರ್ಕಾರ ಹಾಗೂ ನಾವು ನೀವೆಲ್ಲರೂ ಬೆಂಬಲಿಸಬೇಕು ಎಂದು ಅವರು ಹೇಳಿದರು. 

ನಾಗಠಾಣ ಮತಕ್ಷೇತದ ಶಾಸಕರಾದ ವಿಠ್ಠಲ ಧೋಂಡಿಬಾ ಕಟಕಧೋಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಡಚಣ ಬಾಗದ ರೈತರ ಅನುಕೂಲಕ್ಕಾಗಿ 45 ಕೋಟಿ ರೂ ವೆಚ್ಚದಲ್ಲಿ ಸ್ಕಾಡಾ ಗೇಟ ಅಳವಸುವುದರಿಂದ ಈ ಬಾಗದ 26 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದೆ ಆದಷ್ಟು ಶೀಘ್ರವಾಗಿ ಈ ಕುರಿತು ಕ್ರಮ ವಹಿಸಲಾಗುವುದು ಮತ್ತು ಈ ಬಾಗದ ಎಲ್ಲ ಜನಪ್ರತಿನಿಧಿಗಳು ನೀರಾವರಿಗೋಸ್ಕರ ಹೋರಾಟ ಮಾಡೋಣ ರೈತರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಅವರು ಹೇಳಿದರು. 

ಕೃಷಿ ಮೇಳದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಜಿಲ್ಲೆಯ 7 ಜನ ಕೃಷಿಕರನ್ನು ಕೃಷಿ ಪಂಡಿತ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೃಷಿ ಪ್ರಕಟಣೆಗಳ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾºಕÀ ಅಧಿಕಾರಿ ರಿಷಿ ಆನಂದ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀನಿವಾಸ ಕೋಟ್ಯಾನ, ಶ್ರೀಮತಿ ಪಾರ್ವತಿ ಕುರ್ಲೇ, ಬಸವರಾಜ ಶಾಂತಯ್ಯ ಕುಂದಗೋಳಮಠ, ರವಿಕುಮಾರ ಮಳಿಗೆರೆ, ಡಾ.ಅಶೋಕ ಸಜ್ಜನ, ಡಾ.ಆರ್ ಬಸವರಾಜಪ್ಪ, ಡಾ.ಬಿ.ಡಿ. ಬಿರಾದಾರ, ಡಾ.ಆರ್.ಬಿ. ಬೆಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪ್.ಎಲ್, ಶಿಕ್ಷಕರು ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Wednesday, January 8, 2025

09-01-2025 EE DIVASA KANNADA DAILY NEWS PAPER

ಚಿತ್ರನಟಿ ತಾರಾ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ವಿಜಯಪುರ: ಖ್ಯಾತ ಚಿತ್ರನಟಿ, ಸಮಾಜಸೇವಕಿ ತಾರಾ ಅನುರಾಧ, ಲೇಖಕಿ, ಹೋರಾಟಗಾರ್ತಿ ಡಾ. ಮೀನಾಕ್ಷಿ ಬಾಳಿ ಹಾಗೂ ಉದ್ಯಾನ ಮೇಲ್ವಿಚಾರಕಿ ವೇದರಾಣಿ ದಾಸನೂರ ಸೇರಿದಂತೆ ಮೂವರು ಸಾಧಕರಿಗೆ ಇಲ್ಲಿನ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.

ಜ.9 ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಿದ್ದಾರೆ.

ಖ್ಯಾತ ಚಿತ್ರನಟಿ ತಾರಾ:

ಚಿತ್ರರಂಗ, ಸಾಮಾಜಿಕ ಸೇವೆ, ರಾಜಕೀಯ ಹೀಗೆ ಹಲವು ರಂಗಗಳಲ್ಲಿ ತಾರಾ ಅನುರಾಧ ಪ್ರಸಿದ್ಧ ಹೆಸರು. ನಟನೆ ಜೊತೆಗೆ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿರುವ ತಾರಾ ಅವರು 12 ವರ್ಷದೊಳಗಿನ ಮಕ್ಕಳಿಗಾಗಿ ಅನಾಥಾಶ್ರಮವನ್ನು ಆರಂಭಿಸಿದ್ದಾರೆ. ವಿಧಾನ ಪರಿಷತ್ ಸದಸ್ಯೆಯಾಗಿಯೂ ನಾಮನಿರ್ದೇಶನಗೊಂಡಿದ್ದರು.

1984ರಲ್ಲಿ ತಮಿಳು ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಅವರು 1986ರ ತುಳಸಿದಳ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿAದ ಅವರು ಅನೇಕ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕ್ರಮ (1991), ಮುಂಜಾನೆಯ ಮಂಜು (1993), ಕಾನೂರು ಹೆಗ್ಗಡತಿ (1999), ಮುನ್ನುಡಿ (2000), ಮತದಾನ (2001), ಹಸೀನಾ (2005), ಸೈನೈಡ್ (2006), ಈ ಬಂಧನ (2007) ಮತ್ತು ಉಳಿದವರು ಕಂಡAತೆ (2014) ಅವರ ಗಮನಾರ್ಹ ಅಭಿನಯಕ್ಕಾಗಿ ಹಲವಾರು ಫಿಲ್ಮಫೇರ್ ಮತ್ತು ರಾಜ್ಯ ಪ್ರಶಸ್ತಿಗಳು ಒಲಿದು ಬಂದಿವೆ.

ಲೇಖಕಿ, ಹೋರಾಟಗಾರ್ತಿ ಡಾ.ಮೀನಾಕ್ಷಿ ಬಾಳಿ:

ಸಾಹಿತ್ಯ, ಹೋರಾಟವನ್ನು ಬದುಕಾಗಿಸಿಕೊಂಡಿರುವ ಡಾ.ಮೀನಾಕ್ಷಿ ಬಾಳಿ ಅಪರೂಪದ ಲೇಖಕಿ, ಚಿಂತಕಿ. 1962 ಜೂನ್ 22ರಂದು ಕಲಬುರಗಿಯ ದೇವಲ ಗಾಣಗಾಪುರದಲ್ಲಿ ಜನಿಸಿದ ಡಾ. ಮೀನಾಕ್ಷಿ ಬಾಳಿ ಅವರು ಐದನೆಯ ತರಗತಿ ಓದುವ ಹಂತದಲ್ಲಿದ್ದಾಗಲೇ ಕಡಕೋಳ ಮಡಿವಾಳಪ್ಪನವರ ತತ್ವಚಿಂತನೆಯ ಕಡೆಗೆ ಆಕರ್ಷಿತರಾದರು.

ಕಲಬುರಗಿ ವಿಶ್ವವಿದ್ಯಾಲಯದ ಎಂ.ಎ ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಪ್ರೊ.ಲಠ್ಠೆ ಅವರ ಮಾರ್ಗದರ್ಶನದಲ್ಲಿ ಕಡಕೋಳ ಮಡಿವಾಳ್ಳಪ್ಪನವರ ತತ್ವಪದಗಳ ಕುರಿತು ಸಂಶೋಧನ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದುಕೊಂಡರು.

ಇವರು ತಮ್ಮ ಕ್ರಿಯಾಶೀಲ ವ್ಯಕ್ತಿತ್ವವನ್ನು ಈ ನೆಲದ ಹೆಣ್ಣುಮಕ್ಕಳ ಹಕ್ಕುಗಳ ಹೋರಾಟಕ್ಕೆ ಮೀಸಲಾಗಿರಿಸುವುದರ ಜೊತೆಗೆ ಅದಕ್ಕೆ ಅಗತ್ಯವಾದ ತಾತ್ವಿಕತೆಯನ್ನು ವಚನ, ತತ್ವಪದಗಳು ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆಗಳಿAದ ಒದಗಿಸಿಕೊಂಡರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಮ್ಮ ಬದುಕಿನ ಆದರ್ಶವನ್ನಾಗಿಸಿಕೊಂಡಿರುವ ಅವರದ್ದು ಸತ್ಯನಿಷ್ಠ ಮತ್ತು ನಿಷ್ಠುರ ನಿಲುವು. ಅವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ದೊರಕಿದೆ.

ಉದ್ಯಾನ ವೇಲ್ವಿಚಾರಕಿ ವೇದರಾಣಿ ದಾಸನೂರ:

ಹಾವೇರಿಯ ಪ್ರಸಿದ್ಧ ಉತ್ಸವ ರಾಕ್ ಗಾರ್ಡನ್ ಸಂರಕ್ಷಿಸಿ, ಅಭಿವೃದ್ಧಿಪಡಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವವರು ವೇದರಾಣಿ ದಾಸನೂರ.

ಕಲ್ಲುಗಳಿಗೂ ಜೀವಸೆಲೆ ತುಂಬುವ ಮೇರು ಪ್ರತಿಭೆ ಡಾ.ಬಿ.ಟಿ. ಸೊಲಬಕ್ಕನವರ ಅವರ ಪುತ್ರಿಯಾಗಿರುವ ವೇದರಾಣಿ ಈ ಬಾರಿ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಪ್ರಕಾಶ ದಾಸನೂರ ಅವರ ಪತ್ನಿಯಾಗಿರುವ ವೇದರಾಣಿ 2009ರಲ್ಲಿ ಪ್ರಾರಂಭವಾದ ಉತ್ಸವ್ ರಾಕ್ ಗಾರ್ಡನ್ ಅನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ.

ಪ್ರತಿ ವರ್ಷ ಅವರು ಉದ್ಯಾನದಲ್ಲಿ ಸಾಮಾಜಿಕ-ಸಾಂಸ್ಕçತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅವರ ಹುರುಪಿನ ಮತ್ತು ದೃಢವಾದ ಪ್ರಯತ್ನಗಳಿಂದಾಗಿ ಉದ್ಯಾನವು ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಖ್ಯಾತಿಯನ್ನು ಗಳಿಸಿದೆ. ನಿರುದ್ಯೋಗಿಗಳು ಮತ್ತು ಉದಯೋನ್ಮುಖ ಮತ್ತು ಯುವ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದ್ದಾರೆ. ಅವರ ಸಮರ್ಥ ನಾಯಕತ್ವದಲ್ಲಿ ಉತ್ಸವ್ ರಾಕ್ ಗಾರ್ಡನ್ ಎಂಟು ವಿಶ್ವದಾಖಲೆಗಳನ್ನು ಮತ್ತು 2021 ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Tuesday, January 7, 2025

ಸವದತ್ತಿ, ಬನಶಂಕರಿ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸವದತ್ತಿ ಹಾಗೂ ಬನಶಂಕರಿ ಜಾತ್ರೆ ನಿಮಿತ್ತ ಜ. 12 ರಿಂದ 17ರ ವರೆಗೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲಮ್ಮದೇವಿ ಜಾತ್ರೆ ಹಾಗೂ ಜ.13 ರಿಂದ 18ರ ವರೆಗೆ ಬಾಗಲಕೋಟೆ ಜಿಲ್ಲೆಯ ಬದಾಮಿಯ ಬನಶಂಕರಿ ದೇವಿ ಜಾತ್ರೆ ನಿಮಿತ್ತ ಜಾತ್ರೆಗೆ ತೆರಳುವ ಭಕ್ತಾದಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಬಸ್ ನಿಲ್ದಾಣ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟ, ಬಸವನಬಾಗೇವಾಡಿ ಹಾಗೂ ನಿಡಗುಂದಿ ಬಸ್ ನಿಲ್ದಾಣದಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆಸಿಕೊಳ್ಳುವಂತೆ ವಿನಂತಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ವಿಜಯಪುರ 1ನೇ ಘಟಕದ ವ್ಯವಸ್ಥಾಪಕರ (ಮೊ. 7760992263), 2ನೇ ಘಟಕದ (ಮೊ.7760992264), ಇಂಡಿ (ಮೊ.7760992265), ಸಿಂದಗಿ (ಮೊ.7760992266), ಮುದ್ದೇಬಿಹಾಳ (ಮೊ.7760992267), ತಾಳಿಕೋಟ (ಮೊ.7760992268), ಬಸವನಬಾಗೇವಾಡಿ (ಮೊ.7760992269), ವಿಜಯಪುರ ಕೇಂದ್ರ ಬಸ್ ನಿಲ್ದಾಣಾಧಿಕಾರಿ (ಮೊ. 7760992258) ಮತ್ತು ವಿಜಯಪುರದ ಕೇಂದ್ರ ಬಸ್ ನಿಲ್ದಾಣದ ಸ್ಥಿರ (ದೂರವಾಣಿ ಸಂಖ್ಯೆ: 08352-251344)ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಜ.9 ರಂದು ಮಹಿಳಾ ವಿವಿ 16 ನೇ ಘಟಿಕೋತ್ಸವ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 16 ನೇ ವಾರ್ಷಿಕ ಘಟಿಕೋತ್ಸವವು ಜ. 9 ಮಧ್ಯಾಹ್ನ 12.30ಕ್ಕೆ ವಿಶ್ವವಿದ್ಯಾನಿಲಯದ ಆವರಣದ ಜ್ಞಾನಶಕ್ತಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಘಟಿಕೋತ್ಸವದ ಅಧ್ಯಕ್ಷತೆ ರಾಜ್ಯಪಾಲರು ಹಾಗೂ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ.

ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅತಿಥಿಗಳಾಗಿ ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿ ಪ್ರೊ.ಶಶಿಕಲಾ ವಂಜಾರಿ, ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

08-01-2025 EE DIVASA KANNADA DAILY NEWS PAPER

Sunday, January 5, 2025

ಮುನಿಶ್ವರ ಕಾಲೋನಿ ಬಳಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಭೀತಿ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ: ನಗರದ ಯೋಗಾಪುರಕ್ಕೆ ಹೋಗೋ ರಸ್ತೆ ಮಧ್ಯೆದ ಮುನಿಶ್ವರ ಕಾಲೋನಿ ಬಳಿ ಚಿರತೆ ಪ್ರತ್ಯಕ್ಷವಾಗಿರುವುದು ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡುವಂತಾಗಿದೆ.

ಇಲ್ಲಿನ ಬಡಾವಣೆಯಲ್ಲಿ ಏಕಾಏಕಿ ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ಸುತ್ತಲಿನ ಬಡಾವಣೆಗಳಲ್ಲಿ ಸಂಚಲನ ಮೂಡಿಸಿದ್ದು, ತೀವ್ರ ಆತಂಕಕ್ಕೆ ಎಡೆಯಾಗಿದೆ.

ಕೂಡಲೇ ಅರಣ್ಯ‌ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

06-01-2025 EE DIVASA KANNADA DAILY NEWS PAPER

05-01-2025 EE DIVASA KANNADA DAILY NEWS PAPER

ಅನಿಲ ಬರೆದ ಕತೆಗಳು ವಿವಿಗಳಿಗೆ ಪಠ್ಯವಾಗಿವೆ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ

 ಈ ದಿವಸ ವಾರ್ತೆ

ಬೆಂಗಳೂರು:  ಅನಿಲ್ ಗುನ್ನಾಪೂರ ಅವರು ಬರೆದ 'ಸರ್ವೇ ನಂಬರ್-97' ಎಂಬ ಕಥಾಸಂಕಲನವನ್ನು ಹೊoಗಿರಣ ಪ್ರಕಾಶನ, ಬುಕ್ ಬ್ರಹ್ಮ ಹಾಗೂ ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ, ಬಾಗಲಕೋಟೆ ಇವರ ಸಹಯೋಗದಲ್ಲಿ ಭಾನುವಾರ ಸಾಹಿತ್ಯ ಪರಿಷತ್ ನ  ಶ್ರೀಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.

'ಸರ್ವೆ ನಂಬರ್-97' ಕಥಾಸoಕಲನವನ್ನು ಹಿರಿಯ ಕವಿ ಹಾಗೂ ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ರಘುನಾಥ ಚ.ಹ ಹಾಗೂ ಬಿಬಿಎಂಪಿ ವಲಯ ಆಯುಕ್ತರು ಮತ್ತು ಯಲಹಂಕ ವಲಯದ ಕರೀಗೌಡ (ಐಎಎಸ್), ಕವಯಿತ್ರಿ ಜ.ನಾ.ವೇಜಶ್ರೀ ಮತ್ತಿತರರು ಗಣ್ಯರು ಬಿಡುಗಡೆಗೊಳಿಸಿದರು.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿದ ಅವರು ನಮ್ಮ ಭೂಮಾಪನ ಇಲಾಖೆಯ ಇತಿಹಾಸವು ಕನ್ನಡ ಸಾಹಿತ್ಯದಲ್ಲಿ ಹೆಚ್ಚೆಚ್ಚು ಬರಲೆಂದು ಆಶಿಸುತ್ತ, ಅನಿಲ ಅವರು ಬರೆದ ಕತೆಗಳು ಹಲವು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ ಹಾಗೂ ಪ್ರತಿಷ್ಠಿತ ಬಹುಮಾನವನ್ನು ಪಡೆದಿರುವ ಅನಿಲ ಗುನ್ನಾಪೂರ ಅವರಂತಹ ಲೇಖಕರನ್ನು ಮತ್ತು ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಇದೇ ಸಂದರ್ಭದಲ್ಲಿ ರಘುನಾಥ ಚ.ಹ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂಡಿ ತಾಲೂಕಿನ ಲೇಖಕರು, ಪ್ರಸ್ತುತ ಬಾಗಲಕೋಟೆಯಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನಿಲ್ ಗುನ್ನಾಪೂರ ಅವರ ಎರಡನೇ ಪುಸ್ತಕದಲ್ಲಿ ತಮ್ಮ ಅನುಭವಕ್ಕೆ ನಿಲುಕಿದ ಜೊತೆಯ ಜೀವಗಳ ಜೀವನವನ್ನು ಬೇರೆ ಜೀವಗಳಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿರುವುದು ಇದೊಂದು  ವಿಶಿಷ್ಟವಾದದ್ದು, ಹಾಗೆ ಇನ್ನುಳಿದ ಕಥೆಗಳಲ್ಲೂ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಹಿಡಿದಿರುವರು ವಿಶೇಷವಾಗಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಶೋಭಾ ಗುನ್ನಾಪುರ, ಹೈಕೋರ್ಟ್ ನ್ಯಾಯವಾದಿ ಸುನಿಲ್ ಗುನ್ನಾಪುರ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಾಹಿತ್ಯ ಆಸಕ್ತರು, ಮತ್ತಿತರು ಭಾಗವಹಿಸಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Thursday, January 2, 2025

03-01-2025 EE DIVASA KANNADA DAILY NEWS PAPER

ಚೇರ್ ಮೇಲೆ ಕುಳಿತಲ್ಲೇ ಹೃದಯಾಘಾತದಿಂದ ವ್ಯಕ್ತಿ ಸಾವು

ಈ ದಿವಸ ವಾರ್ತೆ

 ವಿಜಯಪುರ: ಚೇರ್ ಮೇಲೆ ಕುಳಿತಲ್ಲೇ ವ್ಯಕ್ತಿಯೊಬ್ಬ  ಹೃದಯಾಘಾತದಿಂದ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಇಲ್ಲಿನ ಸಾಹೇಬಗೌಡ ಹೆರಾಣವರ (72) ಕುಳಿತಲ್ಲೆ ಪ್ರಾಣ ಬಿಟ್ಟ ದುರ್ದೈವಿ.

ಸಾಹೇಬಗೌಡ ಹೆರಾಣವರ ಈತ, ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಚಿಕ್ಕ ಅಂಗಡಿ ಹಾಕಿಕೊಂಡು, ತಹಶೀಲ್ದಾರ್ ಕಚೇರಿಗೆ ಬರುವವರ ಅರ್ಜಿ ಫಾರ್ಮ್ ತುಂಬವ ಕೆಲಸ ಮಾಡುತ್ತಿದ್ದ.

ಇಂದು ಬೆಳಗಿನ ಜಾವ ಬಂದು ಅಂಗಡಿ ತಗೆದು ಕುರ್ಚಿ ಮೇಲೆ ಕುಳಿತು ಕೆಲಸಬಆರಂಭಿಸುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಕೃಷ್ಣ-ವಾದಿರಾಜ ಮಠದಲ್ಲಿ ವಿಜೃಂಭಣೆಯ ರಥೋತ್ಸವ

ವಿಜಯಪುರ: ಪ್ರಾತಃ ಸ್ಮರಣೀಯ ಶ್ರೀ ಶ್ರೀ 1008 ಯತಿಕುಲಚಕ್ರವರ್ತಿ ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪಂಚಮ ಮಹಾಸಮಾರಾಧನಾ ಪೇಜಾವರಮಠ ಇವರ ಆರಾಧನೋತ್ಸವ ಅಂಗವಾಗಿ ಇಂದು ನಗರದ ಕೃಷ್ಣ - ವಾದಿರಾಜ ಮಠದಲ್ಲಿ ವಿಜೃಂಭಣೆಯ ರಥೋತ್ಸವ ಜರುಗಿತು. 

ಪಂಡಿತ ವಾಸುದೇವಚಾರ್ಯ ಮತ್ತು ಶ್ರೀಮಠದ ಗೌರವಧ್ಯಕ್ಷ ಗೋಪಾಲ ನಾಯಕ ಮಂಗಳಾರತಿ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಪಂಡಿತ ಭಾರತೀಯ ರಮಾಣಾಚಾರ್ಯ ಅವರು ಶ್ರೀಗಳ ಕುರಿತು ಪ್ರವಚನ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಮಠದ ಅಧ್ಯಕ್ಷರು ಹಾಗೂ ವೈದ್ಯರಾದ ಕಿರಣ್ ಚುಳಕಿ, ಸಮೀರ ಆಚಾರ್ಯ, ಶ್ರೀ ಮಠದ ಕಾರ್ಯದರ್ಶಿಗಳಾದ ಪ್ರಕಾಶ ಅಕ್ಕಲಕೋಟ, ಸದಸ್ಯರಾದ ವಿಕಾಸ ಪದಕಿ, ಗೋವಿಂದ ಜೋಶಿ, ವಿಜಯ ಜೋಶಿ, ರಾಕೇಶ್ ಕುಲಕರ್ಣಿ, ಪವನ ಜೋಶಿ, ಅಶೋಕ ರಾವ್, ಕೃಷ್ಣ ಪಾಡಗಾನೂರ, ಅಶೋಕ್ ಪದಕಿ, ವಿ.ಸಿ.ಕುಲಕರ್ಣಿ, ಉಮೇಶ ಕಾರಜೋಳ, ಹರೀಶಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ಮಹಾನಗರ ಪಾಲಿಕೆಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಪಾಟೀಲ, ಮಹೇಂದ್ರ ನಾಯಕ, ವಿಷ್ಣು ಜಾಧವ, ಬಿ.ಆರ್.ಕುಲಕರ್ಣಿ, ವಿ.ಬಿ.ಕುಲಕರ್ಣಿ, ವೆಂಕಟೇಶ ಗುಡಿ, ಗೋವಿಂದರಾವ ದೇಶಪಾಂಡೆ ಸೇರಿದಂತೆ ಹಲವಾರು ಭಕ್ತಾದಿಗಳು ಭಾಗವಹಿಸಿದ್ದರು. 

ಇದೇ ಸಂದರ್ಭದಲ್ಲಿ ಆಗಮಿಸಿ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ತೊಗರಿ ದರ ಹೆಚ್ಚಿಸಲು ಆಗ್ರಹಿಸಿ ತೊಗರಿ ನೆಲಕ್ಕೆ ಹಾಕಿ ರೈತರ ಪ್ರತಿಭಟನೆ

ವಿಜಯಪುರ : ಕಳೆದ ಐದಾರು ತಿಂಗಳ ಹಿಂದೆ ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ಇದ್ದ ದರವನ್ನು ಕೇಂದ್ರ ಸರ್ಕಾರ ದಿಢೀರನೆ ದರ ಕಡಿಮೆ ಮಾಡಿ ಪ್ರತಿ ಕ್ವಿಂಟಲ್‌ಗೆ 7550 ರೂಪಾಯಿ ನಿಗದಿ ಮಾಡುವ ಮೂಲಕ ರೈತರನ್ನು ಬೀದಿಗೆ ತಳ್ಳುವ ಕೆಲಸ ಕೇಂದ್ರ ಸರ್ಕಾರ ಮಾಡಲು ಹೊರಟಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರದಂದು ಹೂವಿನ ಹಿಪ್ಪರಗಿಯ ಉಪ ತಹಶೀಲ್ದಾರ ನಾಡ ಕಛೇರಿಯ ಆವರಣದಲ್ಲಿ ತೊಗರಿಯನ್ನು ತೆಗೆದುಕೊಂಡು ನೂರಾರು ರೈತರೊಂದಿಗೆ ನಾಡ ಕಚೇರಿಯ ಆವರಣದಲ್ಲಿ ಚೆಲ್ಲಿ ಸಾಂಕೇತಿಕ ಧರಣಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಉಪ ತಹಶೀಲ್ದಾರರು ನಾಡ ಕಚೇರಿ ಹೂವಿನ ಹಿಪ್ಪರಗಿ ಅವರ ಮುಖಾಂತರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಯಾವುದೇ ಬೆಳೆಯ ಫಸಲನ್ನು ಕೇಂದ್ರ ಸರ್ಕಾರ ಖರೀದಿಸಲು ಮುಂದಾದ ಸಂದರ್ಭದಲ್ಲಿ ಬೆಲೆ ನಿಗದಿಪಡಿಸುವಾಗ ರೈತರೊಂದಿಗೆ ಚರ್ಚಿಸಿ ರೈತರಿಂದ ಸಲಹೆ ಪಡೆದುಕೊಂಡು ದರ ನಿಗದಿಪಡಿಸಬೇಕು. ಬಿತ್ತನೆಯ ಹಂಗಾಮದಲ್ಲಿ ಮೊದಲು ರೈತರು ಭೂಮಿ ಹದಗೊಳಿಸುತ್ತಾರೆ. ಅಲ್ಲಿಂದ ಪ್ರಾರಂಭವಾದ ಕೃಷಿ ಚಟುವಟಿಕೆಗಳ ಖರ್ಚು, ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರ ಸಂಬಳ ಸೇರಿದಂತೆ ಬೆಳೆ ಕಟಾವು ಮಾಡುವ ಖರ್ಚು ನಂತರ ಮಾರುಕಟ್ಟೆಗೆ ಸಾಗಿಸುವ ಸಾಗಣೆ ವೆಚ್ಚ ಎಲ್ಲವನ್ನು ಸೇರಿಸಿ ಸರ್ಕಾರ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸಬೇಕು. ಇದಾವುದನ್ನು ಗಣನೆಗೆ ತಗೆದುಕೊಳ್ಳದೆ ರೈತರಿಂದ ಮಾಹಿತಿ ಪಡೆಯದೆ ತಮಗೆ ತಿಳಿದಂತೆ ದರ ನಿಗದಿಪಡಿಸುವದು. ಅವೈಜ್ಞಾನಿಕ, ಕೃಷಿಗೆ ತಗಲುವ ಒಟ್ಟು ಖರ್ಚುವೆಚ್ಚಗಳ ಕುರಿತು ರೈತರಿಗೆ ಮಾತ್ರ ಗೊತ್ತಾಗುತ್ತದೆ. ಏಕೆಂದರೆ ಕೃಷಿ ಮಾಡುವವರೆ ರೈತರು ಆದ್ದರಿಂದ ರೈತರೊಂದಿಗೆ ಸಭೆ ನಡೆಸಿ ರೈತರ ಬೇಡಿಕೆಯಂತೆ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸಬೇಕು. ಈ ಮೊದಲು ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ರೂಗಳವರೆಗೆ ದರ ಇತ್ತು. ರೈತರು ರಾಶಿ ಮಾಡಲು ಪ್ರಾರಂಭಿಸದಾಗ ಉದ್ದೇಶಪೂರ್ವಕವಾಗಿ ವಿದೇಶದಿಂದ ತೊಗರಿ ಆಮದು ಮಾಡಿಕೊಂಡು ನಮ್ಮ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಮೊದಲಿದ್ದ 12 ಸಾವಿರ ದರವನ್ನು 7550 ಕ್ಕೆ ಇಳಿಸಿ ರೈತರನ್ನು ಬೀದಿ ಪಾಲು ಮಾಡಲು ಹೊರಟಿದೆ. ರೈತರ ಬಳಿ ತೊಗರಿ ಇಲ್ಲದ ಸಂದರ್ಭದಲ್ಲಿ ದರ ಹೆಚ್ಚಿಸಿದರೆ ರೈತರಿಗಾಗುವ ಪ್ರಯೋಜನವೇನು. ಇದು ರೈತರನ್ನು ವಂಚಿಸುವ ತಂತ್ರಗಾರಿಕೆ ಕೇಂದ್ರ ಸರ್ಕಾರ ಅನುಸರಿಸುತ್ತಿದೆ.

 3-4 ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೆ ಬರಗಾಲದ ದವಡೆಯಲ್ಲಿ ಸಿಲುಕಿದ ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ತೀರ್ವ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಬದಲು ದೇಶದ ಉದ್ದಿಮೆದಾರರಿಗೆ ಮಣೆ ಹಾಕಲಾಗುತ್ತಿದೆ. ಈ ದೇಶಕ್ಕೆ ಅನ್ನ ಬೆಳೆದುಕೊಡುವ ಅನ್ನದಾತರೆ ಈ ದೇಶಕ್ಕೆ ಮುಖ್ಯ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೆ ತೊಗರಿ ದರವನ್ನು ಮೊದಲಿನ 12 ಸಾವಿರ ರೂಗಳವರೆಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಠ್ಠಲ ಬಿರಾದಾರ, ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಚನ್ನಬಸಪ್ಪ ಸಿಂಧೂರ, ಹಣಮಂತರಾಯ ಗುಣಕಿ, ಮಲ್ಲನಗೌಡ ನಾಡಗೌಡ, ಗುರುಸಂಗಪ್ಪ ಶಿವಯೋಗಿ, ಮಹೇಶ ಯಡಳ್ಳಿ, ಭಾಗಪ್ಪ ನಾಟಿಕಾರ, ದಾವೂಲಸಾಬ ನಧಾಫ್, ಹಣಮಂತ ಮುರಾಳ, ಗಿರಿಮಲ್ಲಪ್ಪ ದೊಡಮನಿ, ಬಸವರಾಜ ಚೌಧರಿ, ಭೀಮನಗೌಡ ಪಾಟೀಲ, ಲಂಕೇಶ ತಳವಾರ, ಬಂಗೆಪ್ಪ ಸಾಸನೂರ, ನಿಂಗಣ್ಣ ನಾಡಗೌಡ, ಸಿದ್ದು ಮೇಟಿ, ರ‍್ಯಾಬಪ್ಪಗೌಡ ಪುಲೇಶಿ, ರಾಜೇಸಾಬ ವಾಲಿಕಾರ, ಬಂದಗಿಸಾ ಹಳ್ಳೂರ, ಸಿದ್ದಪ್ಪ ಹಳ್ಳೂರ, ಹಣಮಂತ ಸಾಸನೂರ, ಸಾಯಬಣ್ಣ ತಾಳಿಕೋಟಿ, ಗುರುಪಾದಪ್ಪ ಗುಂಡಣ್ಣನವರ, ಸಿದ್ದಪ್ಪ ಗುಂಡಣ್ಣನವರ, ಶಿವಪ್ಪ ಹುನಗುಂದ, ರುದ್ರಪ್ಪ ಕುಂಬಾರ, ಗುರಸಂಗಪ್ಪ ಶಿವಯೋಗಿ, ಲಕ್ಷö್ಮಣ ಚೌಧರಿ, ಶ್ರೀಶೈಲ ಮಾಳೂರ, ಈರಯ್ಯ ಹಿರೇಮಠ, ಶರಣಬಸಪ್ಪ ಹಾದಿಮನಿ, ಗುರಲಿಂಗಪ್ಪ ಪಡಸಲಗಿ, ಈರಣ್ಣ ಬ್ಯಾಕೋಡ, ಪ್ರಕಾಶ ಶಂಕ್ರೆಪ್ಪಗೋಳ, ವೀರಭದ್ರಯ್ಯ ಜಂಗಿನಗಡ್ಡಿ, ಎಸ್.ಎಸ್.ಬೂದಿಹಾಳ, ಅರವಿಂದ ಬ್ಯಾಕೋಡ, ಬಂದಗಿಸಾಬ ಹಳ್ಳೂರ,ರಾಚಪ್ಪ ಕೋರಿ, ಮಹಾಂತೇಶ ಕೋರಿ, ರುದ್ರಪ್ಪ ಹುನಗುಂದ, ಮಲ್ಲಪ್ಪ ಮಾದರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಜೀವನದಲ್ಲಿ ತಾಯಿ-ಗುರು ಋಣ ತೀರಿಸಲು ಸಾಧ್ಯವಿಲ್ಲ-ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ

 ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಹಾಗೂ ನಾಡಿನ ಪೂಜ್ಯರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು 

ವಿಜಯಪುರ : ಜೀವನದಲ್ಲಿ ನಾವು ಎಲ್ಲರ ಋಣ ತೀರಿಸಲು ಸಾಧ್ಯವಿದೆ. ಆದರೆ ಗುರುವಿನ ಋಣ ಹಾಗೂ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಎನ್ನುವುದನ್ನೇ ಶ್ರೀ ಸಿದ್ಧೇಶ್ವರ ಅಪ್ಪಗಳು ತಮ್ಮ ಜ್ಞಾನ ದಿವಿಟಿಗೆಯನ್ನು ಹಿಡಿದು ನಾಡಿನಾದ್ಯಂತ ತಿರುಗಾಡಿ ನಡೆನುಡಿ ಆಚಾರಗಳಿಂದ ನಮ್ಮಲ್ಲಿ ಬದಲಾವಣೆ ತಂದಿರುವ ಅಪರೂಪದ ಸಂತ ಎಂದು ಮಾನ್ಯ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನಲ್ಲಿರುವ ಜ್ಞಾನವನ್ನು ಧಾರೆ ಎರೆದು ತಾನು ಮಾಡುವ ಕೆಲಸವನ್ನು ಶಿಷ್ಯನಿಂದ ಮಾಡಿಸುವಾತ ಗುರು. ತಾಯಿ ನಮಗೆ ಜನ್ಮ ನೀಡಿದ್ದಾಳೆ ಅವಳು ಜನ್ಮಕೊಟ್ಟ ಮಗನಿಗೆ ಗುರುವಾಗಿ ನಿಲ್ಲುತ್ತಾಳೆ. ಆದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಕೇವಲ ಗುರುವಿನ ಸ್ಥಾನವನ್ನು ತುಂಬಿಲ್ಲ. ಅವರು ತಾಯಿ ಹಾಗೂ ಗುರುವಿನ ಸ್ಥಾನ ಎರಡನ್ನೂ ತುಂಬಿದ್ದಾರೆ. ಕಲ್ಕತ್ತಾ ಸ್ವಾಮಿ ವಿವೇಕಾನಂದರ ಕರ್ಮ ಭೂಮಿ. ಹಾಗೇ ವಿಜಯಪುರ ಶ್ರೀ ಸಿದ್ಧೇಶ್ವರ ಶ್ರೀಗಳ ಕರ್ಮ ಭೂಮಿಯಾಗಿದೆ. ಈ  ಭರತ ಭೂಮಿಯಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ರೂಪದಲ್ಲಿ ಸ್ವಾಮಿ ವಿವೇಕಾನಂದರನ್ನು ನಾವು ಮತ್ತೇ ಕಂಡಿದ್ದೇವೆ ಎಂದರು.

ಸನಾತನ ಧರ್ಮ, ನಾಡಿನ ಸಂಸ್ಕೃತಿ ಹಾಗೂ ವಚನ ಸಾಹಿತ್ಯದ ರಾಯಬಾರಿಯಾಗಿ ನಾವು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ನೋಡಿದ್ದೇವೆ. ಯಾವುದೇ ಬದಲಾವಣೆ ಪ್ರಾರಂಭವಾಗಬೇಕಾದರೆ ಅದು ನನ್ನಿಂದಲೇ ಆಗಲಿ ಎಂದು ಸರ್ವ ಸಂತರಿಗೂ ಮಾದರಿಯಾಗಿ ನಿಂತವರು ಪೂಜ್ಯರು.  
ಯಾವುದನ್ನು ಸಮಾಜ ಒಪ್ಪಲ್ಲವೋ, ಅದನ್ನು ಆ ಭಗವಂತ ಕೂಡ ಒಪ್ಪಲು ಸಾಧ್ಯವಿಲ್ಲ. ಅದನ್ನೇ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಗಳು ನಮಗೆಲ್ಲ ತಿಳಿಸಿದ್ದಾರೆ.

ಶರಣರಿಗೆ ಮರಣವೇ ಮಹಾನವಮಿ. ಶ್ರೀ ಸಿದ್ಧೇಶ್ವರ ಶ್ರೀಗಳು ಎಲ್ಲರ ಬದುಕಿನಲ್ಲಿ ಆನಂದವನ್ನು ಕಂಡವರು. ಬದುಕಿನ ಅವಧಿಯನ್ನೇ ಸ್ವರ್ಗವನ್ನಾಗಿ ಮಾಡಿಕೊಂಡವರು. ಕುಳಿತುಕೋಳ್ಳುವ ಜಾಗ ಮುಖ್ಯವಲ್ಲ. ನಾವು ಏನು ಮಾಡುತ್ತೇವೆ. ನಾವು ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.  
 
ಭಾರತ ಸಂತರು-ಶರಣರು ಬದುಕಿದ ನಾಡು, ಜಗತ್ತನಲ್ಲಿ ಎಲ್ಲಿಯಾದರೂ ತಪೋ ಭೂಮಿ ಇದ್ದರೆ, ಅದು ಭರತ ಭೂಮಿ. ಮನುಷ್ಯನಿಗೆ ಜೀವಿಸಲು ಪ್ರಾಣವಾಯು ಸಿಗುವುದು ವನಗಳಿಂದ. ಶ್ರೀ ಸಿದ್ಧೇಶ್ವರ ಶ್ರೀಗಳು ಹೇಳಿರುವ ಗೀಡ ನೆಡುವ ಕಾರ್ಯವನ್ನು ನಾವು ಮುಂದುವರೆಸೋಣ ಎಂದು ಹೇಳಿದರು.

ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ೧೨ ನೇ ಶತಮಾನದ ಅಣ್ಣ ಬಸವಣ್ಣನವರ ತದ್ರೂಪಿಯಾಗಿ ನಾವು ಶ್ರೀ ಸಿದ್ಧೇಶ್ವರ ಅಪ್ಪಾವರನ್ನು ನೋಡಿದ್ದೇವೆ. ಅವಿಭಜಿತ ವಿಜಯಪುರ ಜಿಲ್ಲೆಯ ಬಗ್ಗೆ ಅಪ್ಪಗಳ ಕನಸು ಬಹಳ ದೊಡ್ಡದು. ಎಲ್ಲ ಪಾಟೀಲರು ಸುದ್ದ ಆದರೆ ವಿಜಯಪುರ ಸುದ್ದ ಆಗ್ತದ ಎಂದು ಅಪ್ಪಗಳು ಹೇಳಿದ್ದರು. ಅವರು ಪ್ರಾಂಜಲ ಮನಸ್ಸಿನಿಂದ ನುಡಿದ ಮಾತುಗಳು ನಮ್ಮ ಹೃದಯದಲ್ಲಿ ಉಳಿದಿವೆ. ಅವರು ನಮ್ಮ ಮನಸ್ಸಿನಲ್ಲಿಯೇ ವಾಸವಾಗಿದ್ದಾರೆ. ಅವರು ಸೂಚಿಸಿರುವ ಕೆಲಸಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಬಸವಲಿAಗ ಸ್ವಾಮೀಜಿಗಳು ಶ್ರೀ ಸಿದ್ಧೇಶ್ವರ ಅಪ್ಪಗಳ ನಡೆಸಿಕೊಟ್ಟಂತ ಮಾರ್ಗದಲ್ಲಿ ಆಶ್ರಮ ಪರಂಪರೆಯನ್ನು ಮುಂದುವರೆಸಿಕೊAಡು ಹೋಗುತ್ತಿದ್ದಾರೆ. ಅವರಿಗೆ ನಾಡಿನ ಅನೇಕ ಪೂಜ್ಯರು ಹೆಗಲು ಕೊಟ್ಟಿದ್ದಾರೆ. ಶ್ರೀ ಸಿದ್ಧೇಶ್ವರ ಅಪ್ಪಗಳನ್ನು ಕಂಡಿರುವ ವಿಜಯಪುರ-ಬಾಗಲಕೋಟ ಜನ ನಾವು ಬಹಳ ಪುಣ್ಯವಂತರು. ಪೂಜ್ಯರು ಈ ಶತಮಾನದ ಶ್ರೇಷ್ಠ ಸಂತರು. ಸೂರ್ಯ-ಚಂದ್ರ ಇರುವವರೆಗೂ ಅವರ ಹೆಸರು ಈ ಭೂಮಿಯ ಮೇಲೆ ಶಾಶ್ವತವಾಗಿ ಇರಲಿದೆ ಎಂದರು.

ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಳಾದ ಪೂಜ್ಯ ಬಸವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಎ.ಎಸ್.ಪಾಶ್ಚಾಪುರೆ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ನಾಡಿನ ಮಠಾಧೀಶರು, ಸ್ವಾಮೀಜಿಗಳು ಹಾಗೂ ಜ್ಞಾನಯೋಗಾಶ್ರಮದ ಭಕ್ತರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Wednesday, January 1, 2025

ನಿರಂತರ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ: ಸೋಮನಾಥ ಶಿವಾಚಾರ್ಯ ಸ್ವಾಮಿಗಳು

ಈ ದಿವಸ ಕನ್ನಡ ದಿನ ಪತ್ರಿಕ ವಾರ್ತೆ

  ಕನ್ನೂರ: ವಿದ್ಯಾರ್ಥಿಗಳು ನಿರಂತರ ಓದುವ ಪ್ರಯತ್ನ ಮಾಡಿದರೆ ತಾವು ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ, ಪರೀಕ್ಷೆ ಬಂದಾಗ ಮಾತ್ರ ಓದುವುದಕ್ಕಿಂತ  ನಿರಂತರ ಅಭ್ಯಾಸವಿದ್ದರೆ  ಉತ್ತಮ ಅಂಕಗಳನ್ನು ಪಡೆದು  ತಂದೆ ತಾಯಿಗಳಿಗೆ ಹಾಗೂ ಶಿಕ್ಷಕರಿಗೆ ಉತ್ತಮ ಹೆಸರನ್ನು ತರಲು ಸಾದ್ಯ' ಎಂದು ಕನ್ನೂರು ಗುರುಮಠದ ಪರಮಪೂಜ್ಯ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

       ಅವರು ಕನ್ನೂರು ಸಮುದಾಯ ಭವನದಲ್ಲಿ ಶ್ರೀ  ಸಮರ್ಥ ಸದ್ಗುರು ಗಣಪತರಾವ ಮಹಾರಾಜರು ಶಾಂತಿಕುಟೀರ ಇವರಿಂದ ಸ್ಥಾಪಿಸಲ್ಪಟ್ಟ ಭಾರತೀಯ ಸುರಾಜ್ಯ ಸಂಸ್ಥೆಯ ಅಡಿಯಲ್ಲಿ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರದ ದಿವ್ಯಸಾನಿಧ್ಯ ವಹಿಸಿ, ಉದ್ಘಾಟಿಸಿ, ಆಶೀರ್ವಚನ ನೀಡುತ್ತಾ  ಮಾತಾಡಿದರು ಶ್ರೀಗಳು ಭಾರತೀಯ ಸುರಾಜ್ಯ ಸಂಸ್ಥೆಯು  ಸಾಮಾಜಿಕ ಕಳಕಳಿಯನ್ನು ಹೊಂದಿ  ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು  ಶ್ಲಾಘನೀಯ, ದೇಶ ಸುಭದ್ರವಾಗಬೇಕಾದರೆ ನಾವೆಲ್ಲರೂ ಶಿಕ್ಷಣವಂತರಾಗಬೇಕು,  ಈ ನಿಟ್ಟಿನಲ್ಲಿ  ಗ್ರಾಮೀಣ ಭಾಗದ  ವಿದ್ಯಾರ್ಥಿಗಳಿಗೆ  ಅವರ ಕಲಿಕೆಗೆ  ಅನುಕೂಲವಾಗುವಂತೆ  ಹಾಗೂ ಅವರ ಭವಿಷ್ಯದಲ್ಲಿ  ಉನ್ನತ ಸ್ಥಾನ ಪಡೆಯಲಿ ಎನ್ನುವ  ಉದ್ದೇಶವನ್ನು ಇಟ್ಟುಕೊಂಡು ಈ ಪುಣ್ಯದ ಕೆಲಸವನ್ನು  ಮಾಡುತ್ತಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ತಾವೆಲ್ಲಾ  ಇದರ ಸದುಪಯೋಗ ಪಡೆದುಕೊಂಡು  ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಲಿ  ಎಂದು ಶುಭ ಹಾರೈಸಿದರು. 

       ಕಾರ್ಯಕ್ರಮದಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರ , ಸಂಡೂರು ಆಡಳಿತಾಧಿಕಾರಿಯಾದ ಕುಮಾರ್ ಎಸ್ . ನಾನಾವಟೆ ಅವರು ಪ್ರಸ್ತಾವಿಕ ನುಡಿಯಲ್ಲಿ ಭಾರತೀಯ ಸುರಾಜ್ಯ ಸಂಸ್ಥೆ ಮೂಲ ಉದ್ದೇಶ ಈ ಭಾಗದ ಗ್ರಾಮೀಣ ಮಕ್ಕಳು ಕೂಡ ಉತ್ತಮ ಶಿಕ್ಷಣವನ್ನು ಪಡೆದು,ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಶ್ರೀ ಸ.ಸ. ಗಣಪತರಾವ ಮಹಾರಾಜರು ಈ ಭಾಗದ ಕೆಲವು ಸರ್ಕಾರಿ ಶಾಲೆಗಳನ್ನೂ ದತ್ತು ಪಡೆದುಕೊಂಡಿದ್ದರು. ಅವರ ಹಾದಿಯಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಗಾರ, ಆನ್ಲೈನ್ ತರಗತಿಯ ಮೂಲಕ ನಿರಂತರ ಸಂಪರ್ಕದಲ್ಲಿರುವುದು, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಬೋಧನೆ, ಉತ್ತಮ ಅಂಕ ಪಡೆಯಲು ಪಾಸಿಂಗ್ ಪ್ಯಾಕೇಜ್ ಮತ್ತು ಸ್ಕೋರಿಂಗ್ ಪ್ಯಾಕೇಜ್‌ಗಳನ್ನು ಆರು ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಹ ಉಚಿತವಾಗಿ ನೀಡಲಾಗುವುದು ಆದ್ದರಿಂದ ವಿದ್ಯಾರ್ಥಿಗಳಾದ ನೀವೆಲ್ಲರೂ ಈ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಫಲಿತಾಂಶವನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಪ್ರಕಾಶ್ ಪತ್ತಾರ ಅವರು ಮಾತನಾಡಿ  ನಿಮ್ಮ ಜೀವನದಲ್ಲಿ ತಂದೆ,ತಾಯಿ ಮತ್ತು ಗುರುಗಳನ್ನು ಗೌರವಿಸಿ,ಖಂಡಿತ ಜಯಶಾಲಿಗಳಾಗುತ್ತೀರಿ   ಎಂದು ತಿಳಿಸಿದರು. ಹಾಗೂ ಭಾರತೀಯ ಸುರಾಜ್ಯ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀನಿವಾಸ್ ಕುಲಕರ್ಣಿ ಅವರು  ಮಕ್ಕಳನ್ನು ಕುರಿತು ಮಾತನಾಡಿದರು.

    ಸಂಪನ್ಮೂಲ ವ್ಯಕ್ತಿಗಳಾಗಿದ್ದ  ಪ್ರತಿಭಾ ಪಾಟೀಲ್ ಅವರು  ಪರೀಕ್ಷೆಯಲ್ಲಿ  ನಕಲು ಮಾಡಬಾರದು ನಿರಂತರ  ಅಭ್ಯಾಸ ಇದ್ದರೆ  ನಕಲು ಮಾಡುವ ಪ್ರಶ್ನೆಯೇ ಬರುವುದಿಲ್ಲ  ತಾವೆಲ್ಲರೂ  ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆಯಿರಿ  ಎಂದು ತಿಳಿಸಿದರು.

     ಶಾಂತಿಕುಟೀರದಲ್ಲಿ ನಡೆಯುವ ಉಚಿತ ಬೇಸಿಗೆ ಶಿಬಿರದಲ್ಲಿ  ಭಾಗವಹಿಸುತ್ತಿದ್ದ  ವಿದ್ಯಾರ್ಥಿನಿಯು  ಎಂ.ಬಿ.ಬಿ.ಎಸ್. ಮುಗಿಸಿಕೊಂಡು ಈಗ ಮುಂಬೈನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಕಾಲೇಜಿನಲ್ಲಿ ಪಿಡಿಯಾಟ್ರಿಷನ್ ಅಭ್ಯಾಸ ಮಾಡುತ್ತಿದ್ದ  ಅಮೃತಾ ಬಿ. ಜಿ .ಅವರು- 'ನಾನು ವಿದ್ಯಾರ್ಥಿಯಾಗಿದ್ದಾಗ  ಪ್ರಥಮ ಸ್ಥಾನ ಪಡೆಯಬೇಕು ಎನ್ನುವ ಆಸೆ ನನ್ನದಾಗಿತ್ತು, ಅದರಂತೆ ಪೂರ್ವ ತಯಾರಿ ಮಾಡಿಕೊಂಡು  ಅಭ್ಯಾಸ ಮಾಡುತ್ತಿದೆ, ತಾವೆಲ್ಲರೂ ನಿರಂತರವಾಗಿ ಅಭ್ಯಾಸ ಮಾಡಿ  ಪೂರ್ವ ತಯಾರಿಯನ್ನು ಮಾಡಿಕೊಂಡು  ಪರೀಕ್ಷೆಯನ್ನು ಬರೆಯಿರಿ. ಪ್ರತಿಯೊಬ್ಬರು ಒಂದು ಗುರಿಯನ್ನು ಇಟ್ಟುಕೊಳ್ಳಿ ಅದಕ್ಕೆ ತಮ್ಮ ತಯಾರಿ ಇರಲಿ  ಎಂದು ತಿಳಿಸಿದರು.

      ಗಣಿತ ಮತ್ತು ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ  ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನವನ್ನು  ನೀಡಲಾಯಿತು. ಕಾರ್ಯಗಾರದಲ್ಲಿ ಭಾಗವಹಿಸಿದ್ದ  ಕನ್ನೂರಿನ ವಿರಕ್ತೆಶ್ವರ ಪ್ರೌಢ ಶಾಲೆಯ ಬಾಲಕರು ಹಾಗೂ ಸರಕಾರಿ ಹೆಣ್ಣು ಮಕ್ಕಳ  ಪ್ರೌಢ ಶಾಲೆಯ ವಿದ್ಯಾರ್ಥಿನಿಯರು, ತಿಡಗುಂದಿ  ಬಂಜಾರಾ ಪ್ರೌಢಶಾಲೆಯ ವಿದ್ಯಾರ್ಥಿಗಳು, ಬೊಮ್ಮನಹಳ್ಳಿ ಎಸ್.ಬಿ. ವಿ ರಾಜಗುರು ಪ್ರೌಢಶಾಲೆಯ ಸುಮಾರು ೨೫೦ ವಿದ್ಯಾರ್ಥಿಗಳು  ಭಾಗವಹಿಸಿದ್ದರು .ಎಲ್ಲಾ ವಿದ್ಯಾರ್ಥಿಗಳಿಗೆ  ಪಾಸಿಂಗ್ ಪ್ಯಾಕೇಜ್ ಉಚಿತವಾಗಿ ವಿತರಿಸಲಾಯಿತು.

      ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು  ಮತ್ತು ಪೋಷಕರು ಉಪಸ್ಥಿತರಿದ್ದರು. ಬಂದವರಿಗೆಲ್ಲ ಸಂಸ್ಥೆ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ  ವಿದ್ಯಾರ್ಥಿಗಳಿಗೂ ಪಾಸಿಂಗ್ ಪ್ಯಾಕೇಜ್ ಅನ್ನು ಸುರಕ್ಷಿತವಾಗಿ ಇಟ್ಟುಕೊಂಡು ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವಂತೆ, ಹಾಗೂ ಯಾವುದಾದರೂ ವಿಷಯದಲ್ಲಿ ಡೌಟ್ ಬಂದರೆ ಕಾಲ್ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ಸೂಚನೆ ಸಹ ನೀಡಿ, ಮುಂದಿನ ದಿನಗಳಲ್ಲಿ ಪ್ರೊಜೆಕ್ಟರ್ ಮೂಲಕ ಪಾಠ ಬೋಧನೆ ಮಾಡುವುದು, ಆನ್ ಲೈನ್ ಕ್ಲಾಸ್ ಮೂಲಕ ನಿರಂತರ ವಿದ್ಯಾರ್ಥಿಗಳ ಸಂಪರ್ಕದಲ್ಲಿರುವದು,ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಶಿಕ್ಷಕರನ್ನು ಪೂರೈಸುವುದು ಮತ್ತು ಈ ರೀತಿಯ ಕಾರ್ಯಾಗಾರಗಳು ಪ್ರತಿ ತಿಂಗಳಿಗೆ ಒಂದು ಆಯೋಜಿಸಲು ಭಾರತೀಯ ಸುರಾಜ್ಯ ಸಂಸ್ಥೆ ನಿರ್ಧರಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

02-01-2025 EE DIVASA KANNADA DAILY NEWS PAPER

ಶ್ರೀ ಸಿದ್ಧೇಶ್ವರ ಶ್ರಿಗಳು ಒರ್ವ ವ್ಯಕ್ತಿ ಅಲ್ಲ, ಅವರೊಬ್ಬ ದಾರ್ಶನಿಕ ಶಕ್ತಿ: ಗೊ.ರು.ಚನ್ನಬಸಪ್ಪ

 ವಿಜಯಪುರ : ಶ್ರೀ ಸಿದ್ಧೇಶ್ವರ ಶ್ರಿಗಳು ಒರ್ವ ವ್ಯಕ್ತಿ ಅಲ್ಲ, ಅವರೊಬ್ಬ ದಾರ್ಶನಿಕ ಶಕ್ತಿ. ಅವರೊಬ್ಬ ದೈವಿರೂಪವಾಗಿದ್ದರು ಎಂದು ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ "ಗುರುದೇವರ ಬದುಕು" ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾವು ತಾಯಿ ಗರ್ಭದಲ್ಲಿ ಇದ್ದಾಗಲೇ ಹುಟ್ಟು ಸಾವಿನ ಬಗ್ಗೆ ಚರ್ಚೆ ನಡೆಯುತ್ತದೆ. ಹಣ ಆಸ್ತಿಗಳು, ಸಂಪತ್ತು ನಮ್ಮ ಜೀವನದಲ್ಲಿ ಬಹು ಮುಖ್ಯ ಎಂದು ಭಾವಿಸುತ್ತೇವೆ. ಹಾಗೆ ಭಾವಿಸಿದರೆ ನಾವು ಸಂತೋಷವನ್ನು ಕಾಣಲು ಸಾಧ್ಯವಿಲ್ಲ. ನಾವು ಸಾವನ್ನು ಗಂಭಿರವಾಗಿ ಪರಿಗಣಿಸಿದರೆ ಬದುಕನ್ನು ಕೂಡ ಗಂಭಿರವಾಗಿ ಪರಿಗಣಿಸುತ್ತೇವೆ ಸಿದ್ಧೇಶ್ವರ ಶ್ರೀಗಳ ವಿಚಾರಧಾರೆಗಳು ಅತ್ಯಂತ ವಿಶಾಲವಾಗಿದ್ದವು. ಅವರು ಸಾವಿನೊಂದಿಗೆ ಸಂವಾದ ನಡೆಸಿದವರು, ಸಾವನ್ನು ಸ್ವಾಗತಿಸಿದವರು. ಈ ಬಗೆಯ ಚಿಂತನೆ ನಮ್ಮ ಬದುಕನ್ನು ಅರ್ಥಪುರ್ಣವಾಗಿಸುತ್ತದೆ ಎಂದರು.
 
ಬದುಕಿನ ಅಂತಿಮ ಅವಧಿಯಲ್ಲಿ ವ್ಯಕ್ತಿ ಸಾವಿನ ಆಚೆಗೆ ನೋಡಲು ಪ್ರಯತ್ನಿಸುತ್ತಾನೆ. ಆಚಾರ-ವಿಚಾರಗಳ ಬಗ್ಗೆ ಯೋಚಿಸುತ್ತಾನೆ. ಸಾವು ಅದು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿರುವ ಎಳೆಯಾಗಿದೆ. ಆ ಭಯವನ್ನೇ ಆತ್ಮಶಕ್ತಿಯನ್ನಾಗಿ ಬಳಸಿಕೊಳ್ಳಬೇಕು ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ. ಅದರಂತೆ ಸಾವು ನಮ್ಮೊಡನೆ ಹೆಜ್ಜೆ ಹಾಕುತ್ತದೆ. ನಮಗೆ ಗೊತ್ತಾಗುವುದಿಲ್ಲ. ಬಾಲ್ಯ ಕಳೆದು ಹೋಗುತ್ತದೆ ಅದು ಬಾಲ್ಯದ ಸಾವು. ಯವೌನ ಬರುತ್ತದೆ ಅದು ಮುಗಿಯುತ್ತಿದ್ದಂತೆ ಅದು ಅಂತ್ಯವಾಗಿ ಸಾಯುತ್ತದೆ. ವೃದ್ಧಾಪ್ಯ ಬರುತ್ತದೆ ಅದು ಕೂಡಾ ಅಂತ್ಯವಾಗುತ್ತದೆ. ಹೀಗೆ ಸಾವು ನಿರಂತರ ಪ್ರಕ್ರಿಯೇ. ಅದು ನಿರಂತರವಾಗಿ ನಡೆಯುವುದರಿಂದ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ. ನಮ್ಮ ಜೋತೆಯಲ್ಲಿಯೇ ಇರುವ ಸಾವಿಗೆ ಹೆದುರುವ ಅವಶ್ಯಕತೆ ಇಲ್ಲ. ನಾವು ಬದುಕಿನ ಕೆಟ್ಟ ಘಟನೆಗಳನ್ನು ಎದುರಿಸಿದರೆ ಸಾವು ಗೆದ್ದಂತೆ ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಾನಾಲಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಶ್ರೀ ಸಿದ್ಧೇಶ್ವರ ಶ್ರೀಗಳ ನಡೆ ನುಡಿ ಇಡೀ ಜಗತ್ತೇ ಮೆಚ್ಚುವಂತದ್ದು. ನಮ್ಮ ಜೀವನದಲ್ಲಿ ಒಬ್ಬ ನಿಜವಾದ ಸಂತನನ್ನ ನಾವು ನೋಡಿದ್ದೇವೆ ಎಂತಾದರೆ ಅವರು ಶ್ರೀ ಸಿದ್ಧೇಶ್ವರ ಶ್ರೀಗಳು ಎಂದರು.
                                 
ಇAದು ಅವರ ಅಗಲಿಕೆಯಿಂದ ಸಮಾಜ ಬಳಷ್ಟನ್ನು ಕಳೆದುಕೊಂಡಿದೆ ಆದರೆ ಅವರು ಕಟ್ಟಿಕೊಟ್ಟ ಜೀವನದ ಸಾರ, ಅವರು ತಿಳಿಸಿದ ಬದುಕಿನ ಅರ್ಥ ಇವೆಲ್ಲವು ನಮ್ಮ ಜೊತೆಗೆ ಇವೆ. ಅವರ ಚಿಂತನೆಗಳಿಗೆ ಸಾವಿಲ್ಲ. ಅವರು ನಮ್ಮೊಳಗೆ ಸದಾ ಅಮರರಾಗಿ ಉಳಿದಂತಹ ಮಹಾನ್ ಚೇತನ ಶ್ರೀಗಳು ಎಂದು ಹೇಳಿದರು.

ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಪೂಜ್ಯ ಶ್ರೀ ನಿರ್ಭಯಾನಂದ ಮಹಸ್ವಾಮಿಗಳು ಆಶೀರ್ವಚನ ನೀಡಿ, ಕೆಲವು ವ್ಯಕ್ತಿಗಳ ಬಗ್ಗೆ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಅಂತಹ ವ್ಯಕ್ತಿಗಳ ಬಗ್ಗೆ ಮಾತನಾಡುವಷ್ಟು ಪದಗಳಿಗೆ ಶಕ್ತಿ ಇಲ್ಲ. ಅಂತಹ ವ್ಯಕ್ತಿತ್ವ ನಮ್ಮ ಶ್ರೀ ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.
ದೈವಿಗುಣ, ತಪಸ್ಸು, ಇವೆಲ್ಲವೂ ಸೇರಿ ಮೂರ್ತಿಗೊಂಡಾಗ ಆಗುವ ರೂಪವೇ ಶ್ರೀಗಳು. ಅವರ ಹತ್ತಿರ ಯಾರೆ ಬರಲಿ, ಯಾರೆ ಇರಲಿ ಅವರ ಜಾತಿ ಯಾವುದು, ಅರ‍್ಯಾರು, ಅವರ ಹೆಸರು ಏನು, ಏನು ಮಾಡುತ್ತಾರೆ ಇವೆಲ್ಲವನ್ನು ಯಾರಲ್ಲಿಯೂ ಅವರು ಗಮನಿಸಲೆ ಇಲ್ಲ ಬದಲಿಗೆ ಅವರು ಒಬ್ಬ ಮನುಷ್ಯನನ್ನು ಕೇವಲ ಮನುಷ್ಯನಾಗಿಯೇ ನೋಡಿದಂತವರು ಶ್ರೀಗಳು. ಅಂತಹ ಮಹಾನ್ ಪುರುಷ ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗೋಣ ಜೀವನ ಸಾರ್ಥಕತೆಯನ್ನು ಪಡೆಯೋಣ ಎಂದರು.
ಇದೇ ಸಂದರ್ಭದಲ್ಲಿ ಚಿತ್ತರಗಿ-ಇಳಕಲ್ಲ ವಿಜಯಮಹಾಂತೇಶ್ವರ ಮಠದ ಮ.ನಿ.ಪ್ರ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀಸಿದ್ಧೇಶ್ವರ ಅಪ್ಪಗಳು ನಿತ್ಯ ಸತ್ಯವನ್ನೇ ನುಡಿದರು. ಅವರು ಬದುಕಿ ಬಾಳಿದ ಕಾಲದಲ್ಲಿ ನಾವು ಇದ್ದೇವೆ ಎನ್ನುವುದೇ ಧನ್ಯ. ಪರಮ ಪೂಜ್ಯ ಶ್ರೀಗಳು ಅಹಿಂಸಾ ತತ್ವವನ್ನು ತಮ್ಮ ಜೀವನದೂದ್ದಕ್ಕೂ ಅಳವಡಿಸಿಕೊಂಡು ಬಂದAತವರು. ಎಂದಿಗೂ ಯಾರ ಮನಸ್ಸಿಗೂ ಗಾಯವಾಗದಂತೆ ತಮ್ಮ ಜೀವನದೂದ್ದಕ್ಕೂ ಬದುಕಿದರು. ಅವರೊಂದಿಗೆ ಯಾರಾದರೂ ಮಾತನಾಡುತ್ತಿದ್ದರೆ ಅವರಿಗೆ ಶ್ರೀ ಸಾಕ್ಷಾತ ಪರಮಾತ್ಮನ ಜೊತೆ ಮಾತನಾಡಿದಂತೆ ಭಾಸವಾಗುತ್ತಿತ್ತು. ಗುರುಗಳು ಪ್ರತಿಕ್ಷಣವೂ ಜನತೆಯ ಉದ್ಧಾರಕ್ಕಾಗಿ ಬದುಕಿದವರು. ಅವರ ಬದುಕು ಎಂತೆAದರೆ ಅದು ಅರಿವಿನ ಬದುಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ಧೇಶ್ವರ ಶ್ರೀಗಳು ಜ್ಞಾನಯೋಗಿಯಾಗಿ ಇಡೀ ಜಗತ್ತಿಗೆ ಸತತ ೬೫ ವರ್ಷಗಳ ಕಾಲ ಜ್ಞಾನದಾಸೋಹ ಮಾಡಿದರು. ಅವರ ಬದುಕೆ ಮಾದರಿ. ಇಡೀ ಬದುಕಿನೂದ್ದಕ್ಕೂ ಅತ್ಯಂತ ಸರಳತೆಯಿಂದ ಬದುಕಿ ಬಯಲಲಲ್ಲಿ ಬಯಲಾಗಿ ಹೋದಂತವರು. ಈ ಗದ್ದಲಿನ ಜಗತ್ತಿನಲ್ಲಿ ಸದ್ದಿಲ್ಲದೆ ಸಾಗಿ ಎಲ್ಲರಿಗೂ ಬೆಳಕಾಗಿ ಯಾರಿಗೂ ನೂವು ಮಾಡದಂತ ಬದುಕಿ ನಮ್ಮ ಬದುಕಿಗೆ ಚೇತನವಾದಂತವರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನದ ಸಾರಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.