Friday, June 30, 2023
Monday, June 26, 2023
Friday, June 23, 2023
Thursday, June 22, 2023
Wednesday, June 21, 2023
Tuesday, June 20, 2023
Saturday, June 17, 2023
Friday, June 16, 2023
Thursday, June 15, 2023
Tuesday, June 13, 2023
Monday, June 12, 2023
Sunday, June 11, 2023
ಜು.29 ರಿಂದ ಎರಡು ದಿನಕಾಲ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ಡಾ.ಗೊಳಸಂಗಿ
ಈ ದಿವಸ ವಾರ್ತೆ
ವಿಜಯಪುರ: ದಲಿತ ಪ್ರಜ್ಞೆಯೊಂದಿಗೆ, ಅಹಿಂದ ಪರಂಪರೆಯಲ್ಲಿ ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಗದುಗಿನ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಬೆಳ್ಳಿ ಸಂಭ್ರಮ ನಿಮಿತ್ತ ನಗರದಲ್ಲಿ ಜು.29, 30 ರಂದು ಎರಡು ದಿನಗಳ ಕಾಲ 10 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಕಂದಗಲ್ ಹನುಮಂತರಾಯ ರಂಗಮAದಿರದಲ್ಲಿ ಅಂದು ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ, ಪ್ರಬುದ್ಧ ಭಾರತ ನಿರ್ಮಾಣ ಹಾಗೂ ನಮ್ಮ ಸವಿಂಧಾನ ನಮ್ಮ ರಕ್ಷಣೆಯ ಆಶಯದೊಂದಿಗೆ ಸಮ್ಮೇಳನ ಜರುಗಲಿದೆ ಎಂದರು.
ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ, ವಿವಿಧ ಗೋಷ್ಠಿಗಳು, ಸಂವಾದ, ಬುದ್ಧವಂದನೆ, ಸಮತಾ ಹಾಡುಗಳು, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪುಸ್ತಕ ಮಗಳಗಿ, ಚಿತ್ರಕಲೆ ಪ್ರದರ್ಶ ಕೂಡ ಇರಲಿದ್ದು, ರಾಜ್ಯದ 30 ಜಿಲ್ಲೆಗಳಿಂದ ಚಿಂತಕರು, ದಲಿತ ಲೇಖಕರು, ಪ್ರಗತಿಪರ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮ್ಮೇಳನಕ್ಕಾಗಿ ಸುಮಾರು 2 ಸಾವಿರ ಜನರ ಆಗಮನದ ನಿರೀಕ್ಷೆಯನ್ನು ಮಾಡಲಾಗಿದ್ದು, ನೋಂದಣಿಗೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ರಾಜ್ಯ ಕಾರ್ಯಕಾರಿ ಸಮಿತಿ, ಜಿಲ್ಲಾಧ್ಯಕ್ಷರ ಸಮಿತಿಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಸಾರ್ವಜನಿಕರು ಸಮ್ಮೇಳನದ ಸರ್ವಾಧ್ಯಕ್ಷರ ಹೆಸರನ್ನು ಸೂಚಿಸಬಹುದಾಗಿದೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯ ಮಾರ್ಗದಲ್ಲಿ ಮುನ್ನಡೆಯುತ್ತಿರುವ ದಲಿತ ಸಾಹಿತ್ಯ ಪರಿಷತ್ ಎಲ್ಲ ಪಂಗಡಗಳನ್ನು ಸೇರಿಸಿಕೊಂಡು, ಸಾಹಿತ್ಯ ಹಾಗೂ ಸಮಾಜವನ್ನು ಒಟ್ಟೊಟ್ಟಿಗೆ ಮುನ್ನಡೆಸಿಕೊಂಡು ಹೋಗುತ್ತಿದೆ ಎಂದರು.
ದಲಿತ ಸಾಹಿತ್ಯ ಪರಿಷತ್ ಈಗಾಗಲೇ 9 ಸಮ್ಮೇಳನಗಳನ್ನು ಮಾಡಿದ್ದು, ವಿಜಯಪುರದಲ್ಲಿಯೇ 2008 ರಲ್ಲಿ ಹಮ್ಮಿಕೊಂಡ ಸಮ್ಮೇಳನದಲ್ಲಿ ಖ್ಯಾತ ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಳಿಕ ಡಾ.ಅರವಿಂದ ಮಾಲಗತ್ತಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಚೆನ್ನಣ್ಣ ವಾಲೀಕಾರ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ.ಸತ್ಯಾನಂದ ಪಾತ್ರೋಟ, ಡಾ. ಸಮತಾ ದೇಶಮಾನೆ, ಅಲ್ಲಾ ಗರಾಜ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಪ್ರಸಕ್ತ ಸಮ್ಮೇಳನದ ಸರ್ವಾಧ್ಯಕ್ಷರನ್ನು ಇನ್ನು ಕೆಲ ದಿನಗಳಲ್ಲಿ ಆಯ್ಕೆಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ವೈ.ಎಂ. ಭಜಂತ್ರಿ, ದೊಡ್ಡಣ್ಣ ಬಜಂತ್ರಿ, ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ಪತ್ರಕರ್ತ ಸುಭಾಷ ಹೊದ್ಲುರ, ಡಾ.ಎಚ್.ಬಿ. ಕೋಲಾರ, ಸುಜಾತಾ ಚಲವಾದಿ, ಶ್ರೀನಾಥ ಪೂಜಾರಿ ಇದ್ದರು.
Saturday, June 10, 2023
Friday, June 9, 2023
Thursday, June 8, 2023
Wednesday, June 7, 2023
ಜೂ.11 ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಈ ದಿವಸ ವಾರ್ತೆ
ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಬೆಳ್ಳಿ ಸಂಭ್ರಮದ ನಿಮಿತ್ತ ನಡೆಯಲಿರುವ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ರವಿವಾರ ದಿನಾಂಕ 11.06.2023 ರಂದು ಮಧ್ಯಾಹ್ನ 12-00 ಕ್ಕೆ ವಿಜಯಪುರದ ಜಿಲ್ಲಾ ಸರ್ಕಾರಿ ನೌಕರ ಭವನದಲ್ಲಿ ಕರೆಯಲಾಗಿದೆ. ಜಿಲ್ಲೆಯ ದಲಿತ ಬಂಡಾಯ ಸಾಹಿತಿಗಳು, ಸಂಘಟನೆಯ ಸಂಗಾತಿಗಳು, ಪ್ರಗತಿಪರ ಚಿಂತಕರು, ಕಲಾವಿದರು, ಬುದ್ದ ಬಸವ ಅಂಬೇಡ್ಕರ್ ಅಭಿಮಾನಿಗಳು, ಮಹಿಳಾ ಸಾಹಿತಿಗಳು ಹಾಗೂ ಸಂಘಟಿಕರು, ಯುವ ಮಿತ್ರರು, ವಿದ್ಯಾರ್ಥಿಗಳು, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ವಿಜಯಪುರ ಜಿಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲು ಸಲಹೆ ಸೂಚನೆ ನೀಡಬಹುದಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ, ಕಾರ್ಯದರ್ಶಿಗಳಾದ ಸುಭಾಷ್ ಹೊದ್ಲೂರ, ಬೆಳಗಾವಿ ವಿಭಾಗೀಯ ಸಂಯೋಜನಾಧಿಕಾರಿ ಡಾ.ಸುಜಾತಾ ಚಲವಾದಿ, ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಜಾಲವಾದಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tuesday, June 6, 2023
Monday, June 5, 2023
Sunday, June 4, 2023
ಪ್ರತಿಯೊಬ್ಬ ಉದ್ಯೋಗ ಮಾಡುವವರಿಗೆ ಜಿಎಸ್ಟಿ ಕಡ್ಡಾಯ
ಈ ದಿವಸ ವಾರ್ತೆ
ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಸಿಯೇಶನ್ (ರಿ) ವಿಜಯಪುರ ಹಾಗೂ ಅಪ್ಸರಾ ಸೀನಿಪ್ಲೇಕ್ಸ್ ಥೇಟರ್ , ವಿಜಯಪುರ ಇವರ ಸಹಯೋಗದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಹಿತಿ ಕಾರ್ಯಾಗಾರವು ನಗರದ ಅಪ್ಸರಾ ಮಲ್ಟಿ ಪರ್ಪಜ್ ಫಂಕ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಹಿತಿ ಕಾರ್ಯಗಾರ ಹಾಗೂ ಲೆಕ್ಕ ಪರಿಶೋಧಕರಾದ ಲಖನ್ ಜಿ. ಜಾಜು ಮಾತನಾಡಿ, ಸರಕು ಮತ್ತು ಸೇವೆಗಳ ತೆರಿಗೆ ಜಾರಿಗೊಳಿಸಿದಾಗ, ಅನ್ವಯವಾಗುವ ಸರಕುಗಳು ಮತ್ತು ಸೇವೆಗಳ ತೆರಿಗೆಗಳು 3 ವಿಧಗಳಾಗಿರುತ್ತವೆ: ಸಿ.ಜಿ.ಎಸ್.ಟಿ.ಎಸ್: ಆದಾಯವನ್ನು ಕೇಂದ್ರ ಸರಕಾರದಿಂದ ಸಂಗ್ರಹಿಸಲಾಗುವುದು ಎಸ್ ಜಿ.ಎಸ್ ಟಿ: ಇನ್ಟ್ರಾ-ಸ್ಟೇಟ್ ಮಾರಾಟಕ್ಕಾಗಿ ಆದಾಯವನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸಲಿವೆ ಐಜಿಎಸ್ ಟಿ: ಅಂತರ್-ರಾಜ್ಯ ಮಾರಾಟಕ್ಕಾಗಿ ಕೇಂದ್ರ ಸರ್ಕಾರವು ಆದಾಯವನ್ನು ಸಂಗ್ರಹಿಸುತ್ತದೆ
ಜಿಎಸ್ ಟಿ ಟ್ರೇಡಿಂಗದವರಿಗೆ 40 ಲಕ್ಷ ವರೆಗೂ ಯೂನಿಟ ಮಾಡುತ್ತಿರುವರಿಗೆ ಜಿಎಸ್ ಟಿ ಮಾಡಬಹುದು.
ಜಾಬ್ ವರ್ಕ್ ಗೆ 6% ಆಗಬಹುದು. ಶಾಲೆಗೆ ಸಂಬಂಧಪಟ್ಟ ಮುದ್ರಣಕ್ಕೆ 12 % ಆಗಬಹುದು. ಇದು ಇನ್ನೀತರ ಮುದ್ರಣಕ್ಕೇ 18% ಆಗುತ್ತದೆ.
ನಿಮ್ಮಗೆ ಸರ್ಕಾರದ ಅನುದಾನದಡಿ ಕಾರ್ಯ ನಿರ್ವಹಿಸಬೇಕೆಂದರೆ ಕಡ್ಡಾಯವಾಗಿ ಜಿಎಸ್ ಟಿ ಇರಬೇಕು. ಮುಂದಿನ ಭವಿಷ್ಯಕ್ಕಾಗಿ ನೀವು ಬೆಳೆಯಬೇಕೆಂದರೆ ಜಿಎಸ್ ಟಿ ಇರಬೇಕು. ನಿಮ್ಮ ಜಾಬವರ್ಕ್ ಗಳಾದ, ಬಿಲ್ ಬುಕ್, ಮ್ಯಾರೇಜ್ ಕಾರ್ಡ್ , ಕ್ಯಾಲೇಂಡರ್, ವಿಜಿಇಂಗ ಕಾರ್ಡ್ ಮುಂತಾದವುಗಳಿಗೆ 18 % ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಕೀಲರಾದ ಶಂಕ್ರೆಯ್ಯಾ ಆರ್. ಮಠಪತಿ ಮಾತನಾಡಿ, ಇವತ್ತಿನ ದಿನ ತಂತ್ರಜ್ಞಾನದ ದಿನವಾಗಿದೆ. ಜಿಎಸ್ ಟಿ ಬಗ್ಗೇ ಹೆದರುವ ಪ್ರಶ್ನೆ ಇಲ್ಲ ಯಾಕೆಂದರೇ ಈಗಿನ ಜನರಿಗೆ ಮಾಹಿತಿಯ ಬಗ್ಗೆ ಕಲೆ ಹಾಕಲು ಯಾರ ಬಳಿ ಹೋಗಲು ಅನಿವಾರ್ಯತೆ ಇಲ್ಲ ಅದಕ್ಕೇ ನಿಮ್ಮ ಗೂಗಲ್ ನಲ್ಲಿ ಸಾಕಷ್ಟು ಮಾಹಿತಿ ಲಭ್ಯ ಇವೆ. ಅದನ್ನು ಸರಿಯಾಗಿ ಓದುಕೊಂಡು ಅದರ ಪ್ರಕಾರ ಸರ್ಕಾರಕ್ಕೆ ವಂಚನೆ ಮಾಡದೇ ಜಿಎಸ್ ಟಿ ತುಂಬಿದರೆ ಸಾಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರಾದ ಸಂಘದ ಅಧ್ಯಕ್ಷರಾದ ರಾಜಶೇಖರ ಮಾತನಾಡಿ, ಜಿಎಸ್ ಟಿ ರೆಗ್ಯೂಲರ ಆಗಿ ತಗೆದುಕೊಳ್ಳುವುದು ಅತಿ ಉತ್ತಮವಾಗಿದೆ. ಜಿಎಸ್ ಟಿ ಯಾಗಿ ಪ್ರತಿಯೊಬ್ಬ ಉದ್ಯೋಗ ಮಾಡುವವರು ಕಡ್ಡಾಯವಾಗಿ ತಗೆದುಕೊಳ್ಳಬೇಕು. ಕಾನೂನು ರೀತಿಯಾಗಿ ಪ್ರತಿಯೊಬ್ಬರು ಮುದ್ರಣಕಾರರು ಕಾರ್ಯ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಚಿದಾನಂದ ವಾಲಿ ಸ್ವಾಗತದೊಂದಿಗೆ ಕಾರ್ಯಕ್ರಮ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಚಂದ್ರಶೇಖರ ಬುರಾಣಪುರ, ಕಾರ್ಯದರ್ಶಿ ವೆಂಕಟೇಶ ಕಾಳೆ, ಖಜಾಂಚಿ ಹನಿಪ ಮುಲ್ಲಾ, ನಿರ್ದೇಶಕರುಗಳಾದ ನಬಿ ಮಕಾಂದಾರ, ಉಮೇಶ ಕುಲಕರ್ಣಿ, ನಾಗರಾಜ ಬಿಸನಾಳ, ಉಮೇಶ ಶಿವಶರಣ, ಸುರೇಶ ಗೊಳಸಂಗಿ, ಜಗದೀಶ ಶಹಾಪುರ, ಮಂಜು ರೂಗಿ, ದೀಪಕ ಜಾಧವ ಹಾಗೂ ಮುದ್ರಣಕಾರರಾದ ಈರಣ್ಣ ಅಳ್ಳಗಿ, ರವಿ ಕುಲಕರ್ಣಿ, ಗೀತಾ ಪ್ರಿಂಟಿಂಗ್ ಪ್ರೆಸ್, ಸಂತೋಷ ಹುಣಶ್ಯಾಳ, ಬಸವರಾಜ ಗೊಳಸಂಗಿ, ಉಬೇದ ಜಹಾಗೀರದಾರ, ಮಹ್ಮದಉಸ್ಮಾನ ಗಣಿ ಮುಲ್ಲಾ, ಮಹಾನಿಂಗ ಗುಬ್ಬಿ, ರಾಜು ರೇಶ್ಮೀ, ಬಸವರಾಜ ಬಿಜ್ಜರಗಿ, ರಮೇಶ ಹೆಗಡಿ, ಸಿದ್ದಲಿಂಗ ಸಿಂಪಗಿ, ಸದಾ ಘೋರ್ಪಡೆ, ಅಪ್ಪು ಹಳ್ಳಿ, ಹಿರಿಯರಾದ ಆರ್. ಬಿ. ಕುಲಕರ್ಣಿ ಮುಂತಾದವರು ಇದ್ದರು.
ಕಾರ್ಯಕ್ರಮವನ್ನು ಶ್ರೀಮಂತ ಬೂದಿಹಾಳ ನಿರೂಪಿಸಿದರು.
Saturday, June 3, 2023
Friday, June 2, 2023
ವಿಶ್ವ ಹಾಲು ದಿನಾಚರಣೆ ಹೈನೋದ್ಯಮ ರೈತರ ಪಾಲಿಗೆ ವರದಾನ : ಡಾ.ಲಕ್ಕಣ್ಣವರ
ಈ ದಿವಸ ವಾರ್ತೆ
ವಿಜಯಪುರ : ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ರೈತರ ಪಾಲಿಗೆ ಹೈನೋದ್ಯಮ ವರದಾನವಾಗಿದೆ. ರೈತರ ಹಾಲಿಗೆ ಯೋಗ್ಯ ದರದ ಮಾರುಕಟ್ಟೆಯನ್ನು ವರ್ಷವಿಡಿ ಒದಗಿಸಿ, ಜೀವನೋಪಾಯ ಕಲ್ಪಿಸುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಣ್ಣ ಎಲ್.ಲಕ್ಕನ್ನವರ ಹೇಳಿದರು.
ವಿಜಯಪುರು ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ಆಯೋಜಿಸಿದ ವಿಶ್ವ ಹಾಲು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಹಾಲು ಒಂದು ಸಂಪೂರ್ಣ ಆಹಾರ, ಹಾಲಿನಲ್ಲಿ ಮನುಷ್ಯನ ದೇಹಕ್ಕೆ ಬೇಕಾಗಿರುವಂತಹ ಬಹುತೇಕ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿದೆ. ಪ್ರತಿದಿನ ಒಂದು ಲೋಟ ಹಾಲು ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮುಖ್ಯ ಅಥಿತಿಗಳಿಗಾಗಿ ಆಗಮಿಸಿದ ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕರು ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀಶೈಲಗೌಡ ಭೀ. ಪಾಟೀಲ ನಿಡೋಣಿ ಮಾತನಾಡಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಯೋಗ್ಯ ದರದಲ್ಲಿ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುವುದಲ್ಲದೇ, ಅವಳಿ ಜಿಲ್ಲೆಯಲ್ಲಿ ಸಹಕಾರಿ ಹೈನು ಉದ್ಯಮ ಪ್ರಗತಿಗೆ ಅವಶ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕ.ಹಾ.ಮ ಮತ್ತು ಹಾಲು ಒಕ್ಕೂಟವು ಒದಗಿಸುತ್ತಿದೆ. ಈ ಸೌಲಭ್ಯ ಬಳಸಿಕೊಂಡು ಹೆಚ್ಚು ಹೆಚ್ಚು ರೈತರು ಸಹಕಾರಿ ಹೈನು ಉದ್ಯಮದಲ್ಲಿ ತೊಡಗಬೇಕೆಂದು ಕರೆ ನೀಡಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೆಶಕ ಡಾ|| ಸಂಜೀವ ದೀಕ್ಷಿತ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಎ.ಜಿ.ಬಿರಾದಾರ ಆರ್.ಎಮ್.ಓ, ಡಾ. ಮಹೇಶ ಮೋರೆ ಹಾಗೂ ಡಾ.ಗುಂಡಪ್ಪ ರವರು ಉಪಸ್ಥಿತರಿದ್ದರು.
ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ನಂದಿನಿ ಹರ್ಬಲ್ ಸುವಾಸಿತ ಹಾಲನ್ನು ವಿತರಿಸಲಾಯಿತು. ಗ್ರಾಹಕರ ಜಾಗೃತಿಗಾಗಿ ಗಾಂಧಿ ಚೌಕದಿಂದ ಜಿಲ್ಲಾ ಆಸ್ಪತ್ರೆಯವರೆಗೆ ಜಾಥಾ ಏರ್ಪಡಿಸಲಾಯಿತು. ಎಮ್.ಎಸ್.ಕೌಲಾಪೂರ, ಕೆ.ಆರ್.ಪಲ್ಲೇದ, ಕೆ.ವಿ.ದೇಸಾಯಿ, ಡಾ. ಸಿದ್ದಲಿಂಗಪ್ಪ.ಜಾಡರ, ಎಸ್.ಬಿ.ಅಥಣಿ, ಎಸ್.ಕೆ.ಹಡಪದ ಉಪಸ್ಥಿತರಿದ್ದರು. ಹೇಮಂತ ಬಂಕಾಪೂರ ಸ್ವಾಗತಿಸಿದರು. ವಿಕ್ರಮ ಮಾಲಿಬಾನ್ ನಿರೂಪಿಸಿದರು ತುಕಾರಾಮ ವಂದಿಸಿದರು.