Thursday, June 30, 2022
Tuesday, June 28, 2022
Monday, June 27, 2022
Sunday, June 26, 2022
Saturday, June 25, 2022
Thursday, June 23, 2022
Wednesday, June 22, 2022
Tuesday, June 21, 2022
Monday, June 20, 2022
Sunday, June 19, 2022
Saturday, June 18, 2022
Friday, June 17, 2022
Tuesday, June 14, 2022
Monday, June 13, 2022
Sunday, June 12, 2022
Saturday, June 11, 2022
Friday, June 10, 2022
ಗಡಿನಾಡನಲ್ಲಿ ಅರ್ಥಪೂರ್ಣ ವನಮಹೋತ್ಸವ ಆಚರಣೆ ಮರ ಕಡಿದರೆ ಮನುಕುಲಕ್ಕೆ ಮಾರಕ : ಸಾಹಿತಿ ಜಗದೀಶ ಗಲಗಲಿ ಕಳವಳ
ಈ ದಿವಸ ವಾರ್ತೆ:
ವಿಜಯಪುರ : ಮರಗಳ ಸಂರಕ್ಷಣೆಯೇ ಪರಿಸರ ಅಭಿವೃದ್ಧಿಗೆ ಪೂರಕ. ಮರ ಕಡಿದರೆ ಮನುಕುಲಕ್ಕೆ ಮಾರಕ. ಇಂದಿನ ಮಕ್ಕಳಿಗೆ ಪರಿಸರ ಪ್ರಜ್ಞೆಯ ಪಾಠ ಹೇಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವನಮಹೋತ್ಸವದಲ್ಲಿ ಮಕ್ಕಳನ್ನು ತೊಡಗಿಸಿಕೊಂಡು ಅವರಿಗೆ ಪರಿಸರ ಕಾಳಜಿ ಮತ್ತು ಪ್ರಜ್ಞೆಯ ಬಗ್ಗೆ ತಿಳಿವಳಿಕೆ ಮೂಡಿಸಬೇಕೆಂದು ಜನಪದ ಸಾಹಿತಿ ಜಗದೀಶ ಗಲಗಲಿ ಕರೆ ನೀಡಿದರು.
ವಿಜಯಪುರ ಜಿಲ್ಲೆಯ ಗಡಿಭಾಗದ ಹಿಪ್ಪರಗಿ ದಡ್ಡಿ, ಸರ್ಕಾರಿ ಶಾಲಾ ಆವರದಲ್ಲಿ ಅಖಿಲ ಭಾರತ ಅರಣ್ಯಾಧಿಕಾರಿಗಳ ಒಕ್ಕೂಟ, ನವದೆಹಲಿ, ಸಾಮಾಜಿಕ ಅರಣ್ಯ ವಲಯ, ಅರಣ್ಯ ಇಲಾಖೆ, ವಿಜಯಪುರ, ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆ (ರಿ), ವಿಜಯಪುರ ಹಾಗೂ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಹಿಪ್ಪರಗಿ ದಡ್ಡಿ -ಕನ್ನೂರ ಅವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ವನಮಹೋತ್ಸವ-ಪರಿಸರ ಸಂರಕ್ಷಣೆಯ ಉಪನ್ಯಾಸ, ರಾಷ್ಟçಮಟ್ಟದ ಪರಿಸರ ಮನ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲಾವಣಿ ಮತ್ತು ಜಾನಪದ ಸಾಹಿತ್ಯದಲ್ಲಿ ಮರಗಿಡಗಳ ಸಂರಕ್ಷಣೆ ಕುರಿತು ನಮ್ಮ ಹಿರಿಯರು ತ್ರಿಪದಿಗಳನ್ನು ರಚಿಸಿದ್ದಾರೆ. ಆಡಿ ಬಾ ನನಕಂದ ಅಂಗಾಲ ತೊಳೆದೆನು ತೆಂಗಿನ ತಿಳಿನೀರು ತಕ್ಕೊಂಡು ಹೀಗೆ ಕಲ್ಪವೃಕ್ಷದ ಮಹತ್ವವನ್ನು ಅದರ ಸಂರಕ್ಷಣೆಯನ್ನು ಕುರಿತು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಡಾ. ರಮೇಶ ತೇಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಆಧುನಿಕ ದಿನಮಾನಗಳಲ್ಲಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿದ್ದೆ. ಅದನ್ನು ನಾವೆಲ್ಲರೂ ಮನಗಂಡು ಪರಿಸರವನ್ನು ಸಂರಕ್ಷಿಸಬೇಕಾಗಿದೆ. ಇಂದು ಪ್ಲಾಸ್ಟಿಕ್ಗೆ ನಾವೆಲ್ಲರೂ ಅಂಟಿಕೊಳ್ಳುತ್ತಾ ಪರಿಸರದ ಮೇಲೆ ಹಾನಿಮಾಡುತ್ತಿದ್ದೇವೆ. ಪರಿಸರ ಉಳಿಸಿ ಬೆಳೆಸಬೇಕಾದರೆ ನಾವು ಪ್ಲಾö್ಯಸ್ಟಿಕ್ನ್ನು ತ್ಯಜಿಸಬೇಕು. ಅದರಂತೆ ಪರಿಸರ ಕುರಿತು ಕಾಳಜಿ ವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆ (ರಿ) ಅಧ್ಯಕ್ಷರಾದ ಕಲ್ಲಪ್ಪ ಶಿವಶರಣ ಮಾತನಾಡಿ, ಜನಸಂಖ್ಯೆ ಕಡಿತ, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ, ಮತ್ತು ಪ್ರತಿ ಸಮುದಾಯದಲ್ಲಿ ಮರಗಳನ್ನು ನೆಡಬೇಕು. ಇದು ಪರಿಸರದ ನಾಶವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನಮ್ಮ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮ ಕೈಯಲ್ಲಿದೆ. ಅದನ್ನು ನಾವು ಕಾಟಾಚಾರಕ್ಕೆ ಮಾಡದೆ ಆತ್ಮತೃಪ್ತಿಗಾಗಿ ಮಾಡಬೇಕು. ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಸೋಮಲಿಂಗ ಹಿಪ್ಪರಗಿ ಮಾತನಾಡಿ, ಮಾನವರಿಗೆ ರಸ್ತೆಗಳು ಮತ್ತು ಮನೆಗಳನ್ನು ನಿರ್ಮಿಸಲು ಭೂಮಿ ಜಾಗವನ್ನು ಸೃಷ್ಟಿಸಲು ಅರಣ್ಯನಾಶದ ಅಗತ್ಯವಿದೆ. ಇದು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಆವಾಸಸ್ಥಾನದ ನಾಶಕ್ಕೆ ಕಾರಣವಾಗುತ್ತದೆ. ಪರಿಸರ ಸಂಕುಲವನ್ನು ನಾವು ಉಳಿಸಿ ಬೆಳೆಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ರಾಜು ಗೌಡ ಪಾಟೀಲ ಮಾತನಾಡಿದರು.
ವೇದಿಕೆ ಮೇಲಿದ್ದ ಕನ್ನೂರ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಮಾಹಸಿದ್ಧ ಮ.ಪೂಜಾರಿ, ಶಾಲೆಯ ಭೂ ದಾನಿಗಳಾದ ಹಣಮಂತ ಲ. ಇಚ್ಚೂರ, ಎಸ್.ಡಿ.ಎಂ.ಸಿ ರೇವಣಸಿದ್ಧ ಸಿ. ಜೀಲಂಕರಗಿ, ಉಪ ವಲಯ ಅರಣ್ಯಾಧಿಕಾರಿಗಳಾದ ಸಾಮಾಜಿಕ ಅರಣ್ಯ ವಲಯದ ಪ್ರವೀಣ ಹುನ್ನೂರ, ಲೋಕಾಯುಕ್ತ ಕಾರ್ಯಾಲಯದ ಪೊಲೀಸ್ ಇಲಾಖೆಯ ಮನಗೇನಿ ಇಚ್ಚೂರ, ಶ್ರೀಮತಿ ಜೆ.ಎಂ. ಜಂಬಗಿ, ಗಿರೀಶ ಡಿ. ಹಲಗುಡೆ, ಜ್ಯೂನಿಯರ್ ಶಿವರಾಜಕುಮಾರ ಚಂದ್ರಶೇಖರ ಅಂಬಲಿ, ಭೀಮರಾವ ಶಿಂಧೆ, ಬಾಬುರಾವ ಚವ್ಹಾಣ, ಸುರೇಶಗೌಡ ಪಾಟೀಲ, ಬಾಬುರಾವ ಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪರಿಸರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಎ.ಸಿ. ಅರವಳ್ಳಿ, ನಾನಾಸಾಹೇಬ ದ್ಯಾಮನಗವಡ ಪಾಟೀಲ, ಅಂಬಾದಾಸ ಜೋಶಿ, ಡಾ. ನಾನಾಸಾಹೇಬ ಹಚ್ಚಡದ, ಸದಾಶಿವ ಎಮ್.ಮರಡಿ ಅವರಿಗೆ ರಾಷ್ಟಮಟ್ಟದ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಾಮೂಹಿಕವಾಗಿ ಸರ್ಕಾರಿ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಸುರೇಶ ಸೋಮಣ್ಣ ಬೆಳ್ಳುಂಡಗಿ ಮಾಜಿ ಯೋಧರಾದ , ಪುಂಡಲಿಕ ಇಂಚೂರು, ಶ್ರೀಕಾಂತ ಮೇಂಡೆಗಾರ, ಕಾವೇರಿ ಮೇಂಡೆಗಾರ, ಉಮೇಶ ಶಿವಶರಣ, ನೇತ್ರಾ ಶಿವಶರಣ, ಚಾಮುಂಡಿ ಶಿವಶರಣ, ಮಲಕಾರಿ ಹಿರೇಕುರಬರ, ಸುನೀಲಕುಮಾರ ಸುಧಾಕರ, ಅಮಸಿದ್ಧ ಕ. ಹಿಪ್ಪರಗಿ, ಎ.ಐ.ಹಂಜಗಿ, ಯಲ್ಲವ್ವ ದರ್ಗಾ, ಸಾಯಬಣ್ಣಾ ಹಿಪ್ಪರಗಿ, ಮಾಳು ಹಿಪ್ಪರಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಅಮಸಿದ್ಧ ಎಚ್. ಹಿಪ್ಪರಗಿ ನಿರೂಪಿಸಿ,ವಂದಿಸಿದರು.