Saturday, April 30, 2022
Monday, April 25, 2022
Sunday, April 24, 2022
Friday, April 22, 2022
Wednesday, April 20, 2022
Tuesday, April 19, 2022
Saturday, April 16, 2022
ಪತ್ರಕರ್ತರ ಸದಸ್ಯತ್ವ ನವೀಕರಣಕ್ಕೆ ಅರ್ಜಿ
ಈ ದಿವಸ ವಾರ್ತೆ
ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ ಮತ್ತು ನೂತನ ಸದಸ್ಯತ್ವಕ್ಕೆ ಜಿಲ್ಲೆಯ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಘಟಕದ ನಿಯಮಾವಳಿಗಳನ್ವಯ ಏ. 21ರ ಸಂಜೆ 4ರೊಳಗಾಗಿ ಪೂರಕ ದಾಖಲೆಗಳೊಂದಿಗೆ ಸದಸ್ಯತ್ವ ನವೀಕರಣ ಹಾಗೂ ನೂತನ ಸದಸ್ಯತ್ವಕ್ಕೆ ಮೂರು ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಏ.17ರಂದೇ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ವರೆಗೆ ಅರ್ಜಿ ನಮೂನೆ ವಿತರಿಸಲಾಗುವುದು. ಅರ್ಹ ಪತ್ರಕರ್ತರು ಸ್ವ ಹಸ್ತಾಕ್ಷರದಿಂದ ಭರ್ತಿ ಮಾಡಿದ ಅರ್ಜಿಗಳನ್ನು ನಗರದ ಹಳೆ ತಹಸೀಲ್ದಾರ್ ಕಚೇರಿ ಬಳಿಯಿರುವ ಪತ್ರಕರ್ತರ ಸಂಘದ ಹಳೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ಆಯಾ ತಾಲೂಕು ಘಟಕಗಳ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರಲ್ಲಿ ಒಬ್ಬರು ಜಿಲ್ಲಾ ಕಚೇರಿಗೆ ಆಗಮಿಸಿ ಅರ್ಜಿ ನಮೂನೆಗಳನ್ನು ಪಡೆದುಕೊಳ್ಳಬೇಕು.
ತಾಲೂಕು ಘಟಕದವರು ತಮ್ಮ ಸಂಘದ ಕಾರ್ಯಕಾರಿ ಸಭೆ ಕರೆದು ಅನುಮೋದಿಸಿದ ಸದಸ್ಯರ ಪಟ್ಟಿ ಮತ್ತು ಅರ್ಜಿಗಳ ಸಮೇತ ಏ.21ರ ಸಂಜೆ 4 ಗಂಟೆಯೊಳಗೆ ಜಿಲ್ಲಾ ಕಚೇರಿಗೆ ಅರ್ಜಿ ಸ್ವೀಕರಿಸಲು ನೇಮಕ ಮಾಡಿರುವ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಜಿಲ್ಲಾ ಘಟಕದ ಖಜಾಂಚಿ ರಾಹುಲ್ ಆಪ್ಟೆ ಹಾಗೂ ನಿಕಟಪೂರ್ವ ಖಜಾಂಚಿ ದೀಪಕ ಶಿಂತ್ರೆ ಅವರಿಗೆ ಸಲ್ಲಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಕರ್ಣಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಡಿ.ಬಿ.ವಡವಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Friday, April 15, 2022
Wednesday, April 13, 2022
Tuesday, April 12, 2022
Monday, April 11, 2022
Sunday, April 10, 2022
Saturday, April 9, 2022
ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ: ಫ.ಗು.ಸಿದ್ಧಾಪುರ
ಈ ದಿವಸ ವಾರ್ತೆ
ವಿಜಯಪುರ: ಇಂದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಖ್ಯಾತ ಮಕ್ಕಳ ಸಾಹಿತಿ ಫ.ಗು.ಸಿದ್ದಾಪುರ ಹೇಳಿದರು.
ತಾಲೂಕಿನ ಮುಳವಾಡದ ಶಿವರಾಯ ಪ್ರಾಥಮಿಕ ಶಾಲೆ ಯಲ್ಲಿ ಈಚೆಗೆ ನಡೆದ ಶಾಲೆಯ 9ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳು ಓದಿನಲ್ಲಿ ಹೆಚ್ಚು ಅಂಕ ಪಡೆದು ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಜನನಿ ಜನ್ಮಭೂಮಿ, ಗುರುಹಿರಿ ಯರ ಋಣ ತೀರಿಸುವ ಸದ್ಭಾವನೆ ಹೊಂದಿದರೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಾಧಕರಿಗೆ ಶಿವರಾಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರವಿಗೌಡ ಬಿರಾದಾರ (ವೈದ್ಯಕೀಯ)ಕಲ್ಲನಗೌಡ ಬಿರಾದಾರ(ದೇಶ ಸೇವೆ) ಎಸ್. ಆರ್.ಭೂಸರಡ್ಡಿ(ಶಿಕ್ಷಣ) ಚನ್ನಪ್ಪ ಧೂಳಗೊಂಡ( ಕೃಷಿ ಫ. ಗು.ಸಿದ್ದಾಪುರ (ಸಾಹಿತ್ಯ) ಇವರೆಲ್ಲರೂ ಪ್ರಶಸ್ತಿಗೆ ಭಾಜನರಾದವರು. ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಸಾನ್ನಿಧ್ಯ ವನ್ನು ಸದಾನಂದ ಮಹಾರಾಜರು, ಸಿದ್ಧರಾಮೇಶ್ವರ ಮಹಾರಾಜರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಯುಕ್ತಾ ಪಾಟೀಲ, ತಾನಾಜಿ ನಾಗರಾಳ, ಚಂದ್ರಪ್ಪ ಆಸಂಗಿ, ಮಲ್ಲು ಆಸಂಗಿ, ಚಂದ್ರು ಚಿಣಣೇಕರ, ಡಾ.ಎಸ್.ಎಂ.ಕೆಂಗನಾಳ, ಚನ್ನಪ್ಪಗೌಡ ಬಿರಾದಾರ ಉಪಸ್ಥಿತರಿದ್ದರು. ಸಂತೋಷ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ರಮೇಶ ಮೇತ್ರಿ ವಂದಿಸಿದರು.