Saturday, August 29, 2020
Friday, August 28, 2020
Thursday, August 27, 2020
Wednesday, August 26, 2020
Tuesday, August 25, 2020
Monday, August 24, 2020
Friday, August 21, 2020
Thursday, August 20, 2020
Wednesday, August 19, 2020
Tuesday, August 18, 2020
Monday, August 17, 2020
Sunday, August 16, 2020
Saturday, August 15, 2020
Friday, August 14, 2020
Thursday, August 13, 2020
Tuesday, August 11, 2020
Monday, August 10, 2020
Sunday, August 9, 2020
Saturday, August 8, 2020
Thursday, August 6, 2020
Wednesday, August 5, 2020
Tuesday, August 4, 2020
Monday, August 3, 2020
Sunday, August 2, 2020
ರಕ್ಷಾಬಂಧನದ ಬೆಸುಗೆ
ಅಣ್ಣನ ಶ್ರೀರಕ್ಷೆ
ತಂಗಿಯ ಮೇಲಿರಲೆಂದು
ತಂಗಿಯ ಬಂಧನವ ಎಂದಿಗೂ
ಅಣ್ಣ ತೊರೆಯ ಬಾರದೆಂದು
ರಕ್ಷಾ ಬಂಧನಕೆ
ನಾಂದಿಯಾಯಿತು ನೋಡಿ ಇಂದು
ಅತ್ಯಂತ ಅಗಾಧ ಪ್ರೀತಿಯ ಬಂಧನವಿದು, ಈ ಅಣ್ಣ ತಂಗಿಯ ಸಂಬಂಧವು. ಒಡಹುಟ್ಟಿದವರಾಗಿ ಹೆತ್ತವರ ಖುಷಿಯ ಕಡಲಿವರು.
ಈ ಭವ್ಯ ಬಂಧನವು ಇಡಿ ದೇಶದಾದ್ಯಂತ ಆಚರಿಸಲ್ಪಡುವ ಮಹತ್ವದ ಹಬ್ಬವೆಂದೆ ಪರಿಗಣಿಸಲಾಗಿದೆ.
ಈ ಆಚರಣೆಯು ಹಿಂದು ಧರ್ಮಗಳಲ್ಲಿ ಒಂದಾಗಿದ್ದರು ಸಹ, ಎಲ್ಲ ಧರ್ಮಿಯರು ಅತೀವ ಸಂಭ್ರಮದಿಂದ ಆಚರಿಸುತ್ತಾರೆ.
ಹಾಗಾದರೆ ಈ ರಕ್ಷಾಬಂದನ ಎಂದರೆ ಏನು? ಎಂಬುವುದು ತಿಳಿಯಲೇಬೇಕಾದದ್ದು
*ರಕ್ಷಾ-ರಕ್ಷಣೆ* *ಬಂಧನ-ಬಂಧ* ಅಂದರೆ ರಕ್ಷಣೆಯ ಬಂಧನದ ಬೆಸುಗೆ ಎಂತಲೆ ಹೇಳಬಹುದು. ಅಣ್ಣನಾದವನು ತಂಗಿಯ ರಕ್ಷಾ ಕವಚವಿದ್ದಂತೆ. ತಂಗಿಯ ಕಷ್ಟಕೆ ಓ ಗೊಡುವ ಮೊದಲ ದೇವರೆ ಈ ಅಣ್ಣನು.
*ತಂಗಿಯ ಬೆನ್ನ ಹಿಂದೆ ಸದಾ ಅಣ್ಣನ ದೈರ್ಯವಿದ್ದು ಅವಳ ಮೇಲೆ ಅಪಾರ ಪ್ರೀತಿ ಇದ್ದೊಡೆ ಅಲ್ಲಿ ಯಾವ ಬಯದ ಅಂಕುಶವು ಸುಳಿಯದು ತಂಗಿಯ ಬಾಳಿನೊಲು* ತಂಗಿಯ ಜೀವನವು ಭವ್ಯತೆಯ ಹಾದಿಯಲಿ ಮುನ್ನುಗ್ಗುವದೆಂಬ ಆತ್ಮವಿಶ್ವಾಸ ಸದೃಡಗೊಳ್ಳುವುದೆಂದರೆ ನಿಜಕ್ಕೂ ತಪ್ಪಾಗಲಾರದು. ಅಣ್ಣನ ಪ್ರೀತಿ ತಂಗಿಯ ಮೇಲೆ ಸದಾ ಹಚ್ಚಹಸಿರಂತಿದ್ದರೆ ಅವಳ ಬಾಳು ಎಂದೆಂದಿಗೂ ಸುಂದರವು.
ಒಂದೇ ಒಡಲಿನ ಹೂ ಬಳ್ಳಿಗಳು
ಈ ಅಣ್ಣ-ತಂಗಿಯು
ಒಂದೇ ರಕ್ತದ ಮಾದರಿಯ
ಮುದ್ದು ಕೂಸುಮರಿಗಳಿವರು
ಅಣ್ಣನ ದೀರ್ಘಾಯುಶ್ಯದಿ ಬಾಳೆಂದು ಹಾರೈಸಿ ಕಟ್ಟುವಳು ತಂಗಿ
ಅಣ್ಣನ ಕೈಗೆ ರಾಖಿಯು
ಅತೀವ ಸಂಭ್ರಮದಿ ತೆಲಾಡುತ
ಅಣ್ಣ ತಂಗಿಗೆ ನೀಡುವನು
ಸವಿನೆನಪಿನ ಉಡುಗೊರೆಯು
ಸಹೋದರ ಸಹೋದರಿಯರ ಪ್ರೀತಿ ಹಂಚಿಕೊಳ್ಳುವ ಸಡಗರದ ಸುದಿನವಾಗಿದೆ ಈ ರಕ್ಷಾ ಬಂಧನ ದಿನವೂ. ಈ ಬಂಧನದ ಆಚರಣೆಯು ಅನೇಕ ಪೌರಾಣಿಕ ಕಥೆಗಳಿಂದ ತಿಳಿಯಬಹುದಾಗಿದೆ.
ಒಂದು ಸಲ ಬಲಿ ರಾಕ್ಷಸನು ತನ್ನೊಂದಿಗೇ ಇರಬೇಕು ಎಂದು ವಿಷ್ಣು ವಿನೊಂದಿಗೆ ಮಾತು ಪಡೆಯುತ್ತಾನೆ ವಿಷ್ಣು ದೀರ್ಘ ಕಾಲ ವೈಕುಂಠಕ್ಕೆ ಬರದೇ ಇದ್ದಾಗ ಲಕ್ಷ್ಮೀದೇವಿ ಚಿಂತಿತಳಾಗುತ್ತಾಳೆ ಆಗ ಲಕ್ಷ್ಮಿ ದೇವಿಗೆ ಈ ವಿಚಾರ ತಿಳಿದಾಗ ಲಕ್ಷ್ಮಿಯು ಬಲಿರಾಕ್ಷಸನ ಕೈಗೆ ರಾಖಿಯನ್ನು ಕಟ್ಟಿ ಸಹೋದರನ್ನಾಗಿ ಮಾಡಿಕೊಂಡು, ತನಗೆ ಉಡುಗೊರೆಯಾಗಿ ವಿಷ್ಣುವನ್ನು ಕೊಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಆಗ ಬಲಿ ರಾಕ್ಷಸನು ಅವಳ ಮಾತಿನಂತೆ ವಿಷ್ಣುವನ್ನು ವೈಕುಂಠಕ್ಕೆ ಕಳಿಸುತ್ತಾನೆ. ಇದೆ ಅಣ್ಣ ತಂಗಿಯ ಸಂಬಂಧವು.
ಹಾಗೇ ಇನ್ನೊಂದು ಪೌರಾಣಿಕ ಕಥೆ ಉಂಟು ವೃತ್ರಅರಸು ನಿಂದ ಸೋಲಿಸಲ್ಪಟ್ಟಂತ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ತನ್ನ ಕೈಗೆ ರಾಖಿ ಕಟ್ಟಿಕೊಳ್ಳಬೇಕು ಎಂದು ಗುರು ಬ್ರಹಸ್ಮತಿ ಹೇಳುತ್ತಾರೆ. ಆಗ ಇಂದ್ರನ ಒಡನಾಡಿ ಸಚ್ಚಿದಾ ದೇವಿಯು ಇಂದ್ರನಿಗೆ ತಿಲಕವನಿಟ್ಟು ರಾಖಿ ಕಟ್ಟುವುದು ಎಂದು ಭವಿಷ್ಯ ಪುರಾಣದಲ್ಲಿ ತಿಳಿಯಲಾಗಿದೆ.
ಹೀಗೆ ಅನೇಕ ಪೌರಾಣಿಕ ಕಥೆಗಳು ಉಂಟು ಈ ರಕ್ಷಾ ಬಂಧನದ ಆಚರಣೆಗೆ.
ಒಟ್ಟಾರೆಯಾಗಿ ಈ ರಕ್ಷಾ ಬಂಧನವು ಅಣ್ಣ ತಂಗಿಯರ ಸ್ನೇಹ ಬಂಧನದ ಸಂಕೇತವಾಗಿದೆ.ತಂಗಿ ಅಣ್ಣನ ಹಣೆಗೆ ತಿಲಕವನ್ನಿಟ್ಟು ಅವನ ಕೈಗೆ ಈ ರಕ್ಷಾ ಬಂಧನದ ರಾಖಿಯನ್ನು ಕಟ್ಟಿ ಅಣ್ಣನ ಸಕಲ ಜಯಾ ಜಯಗಳು ದೊರೆಯಲಿ, ಸುದೀರ್ಘದಿ ಬಾಳಲೆಂದು ಹಾರೈಸುತ ಕಳಸವನ್ನು ಬೆಳಗಿ ತಂಗಿ ತನ್ನ ಆಸೆಯನ್ನು ಪೂರೈಸಿಕೊಳ್ಳುವ ಸುದಿನವೆಂದೆ ಹೇಳಬಹುದು.
ಇದುವೆ ರಕ್ಷಾ ಬಂಧನದ ವಿಶೇಷತೆ.
ಸಹೋದರರಿಗೆ ರಾಖಿ ಕಟ್ಟಿ ರಕ್ಷಾ ಬಂಧನವ ಆಚರಿಸುವ ಬನ್ನಿ..
ಮಮತಾ ಗುಮಶೆಟ್ಟಿ
ವಿಜಯಪುರ
Saturday, August 1, 2020
ಆರ್.ಟಿ.ಪಿ.ಸಿ.ಆರ್ ಲ್ಯಾಬ್ನಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಯನ್ನು ಮೂರು ಶಿಫ್ಟ್ ಗಳಲ್ಲಿ ಕೈಗೊಳ್ಳಿ : ಜಿಲ್ಲಾಧಿಕಾರಿ ಪಿ. ಸುನೀಲಕುಮಾರ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಕಾಗಿ ಪರಿಣಾಮಕಾರಿ ಕ್ರಮವಾಗಿ ಹೊಸದಾಗಿ ಪ್ರಾರಂಭಿಸಲಾಗಿರುವ ಆರ್.ಟಿ.ಪಿ.ಸಿ.ಆರ್ (ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ) ಲ್ಯಾಬ್ನಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಯನ್ನು ಮೂರು ಶಿಫ್ಟ್ಗಳಲ್ಲಿ ಮಾಡಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಂಟಲುದ್ರವ ಮಾದರಿಯನ್ನು ಪರೀಕ್ಷಿಸಲು ಸಾಧ್ಯವಾಗುತಯ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಪಂಚಾಯತ ಕಾರ್ಯಾಲಯ ಸಭಾಂಗಣದಲ್ಲಿಂದು ನಡೆದ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಆರ್.ಟಿ.ಪಿ.ಸಿ.ಆರ್ ಲ್ಯಾಬ್ನಲ್ಲಿ ಎರಡು ಶಿಪ್ಟಗಳಲ್ಲಿ ಗಂಟಲುದ್ರವ ಮಾದರಿಯನ್ನು ಪರೀಕ್ಷಿಸಲಾಗುತ್ತಿದ್ದು, ಮುಂದಿನ ಶುಕ್ರವಾರದಿಂದ ಮೂರು ಶಿಪ್ಟಗಳಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಅವರನ್ನು ನೇಮಿಸಿಕೊಂಡು ತರಬೇತಿಯನ್ನು ನೀಡಬೇಕು. ಒಂದು ಶಿಪ್ಟನಲ್ಲಿ ಸೂಮಾರು 91 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದ್ದು. ಜಿಲ್ಲೆಯಲ್ಲಿ 2 ಶಿಪ್ಟಗಳಲ್ಲಿ ಕಾರ್ಯಾರಂಭವಾಗಿದ್ದು. ಮುಂದಿನ ಶುಕ್ರವಾರದಿಂದ ಮೂರು ಶಿಪ್ಟಗಳಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಆರ್.ಟಿ.ಪಿ.ಸಿ.ಆರ್ ಲ್ಯಾಬ್ನಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಿಕೊಂಡು ಅವರಿಗೆ ಸೂಕ್ತ ತರಬೇತಿಯನ್ನು ನೀಡಬೇಕು. ನೇಮಕಗೊಂಡವರಿಗೆ ತರಬೇತಿ ನೀಡಿದ ನಂತರ ಇಗಾಗಲೇ ಕಾರ್ಯ ನಿರ್ವಹಿಸುತ್ತಿರುವ ತಂಡಗಳ ಜೊತೆಯಲ್ಲಿ ಸೆರ್ಪಡೆಗೊಳಿಸಿ ಮೂರು ತಂಡಗಳನ್ನು ರಚಿಸಿಕೊಂದು ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 61 ಸ್ವ್ಯಾಬ್ ಕಲೆಕ್ಷನ್ ಸೆಂಟರ್ಗಳಿದ್ದು, ಎಲ್ಲ ಸೆಂಟರ್ಗಳಲ್ಲಿ ಗಂಟಲು ದ್ರವ ಮಾದರಿಯನ್ನು ಪಡೆದುಕೊಳ್ಳಲಾಗುತ್ತಿದ್ದು. ಗಂಟಲು ದ್ರವ ಮಾದರಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅವರ ಮೋಬೈಲ್ ಸಂಖ್ಯೆಯನ್ನು ಪಡೆದುಕೊಂಡು ಒ.ಟಿ.ಪಿ ಯನ್ನು ಈಗಾಗಲೆ ಪಡೆದುಕೊಳ್ಳಲಾಗುತ್ತದೆ ಇದರ ಜೊತೆಗೆ ಅವರ ಆಧಾರಕಾರ್ಡ್ನಲ್ಲಿರುವ ವಿಳಾಸವನ್ನು ಪಡೆಯಬೇಕು ಎಂದು ಸೂಚಿಸಿದರು.
ಗಂಟಲು ದ್ರವ ಮಾದರಿಯನ್ನು ಪಡೆದಕೊಂಡ ನಂತರ ವ್ಯಕ್ತಿಗೆ ನೆಗೆಟಿವ್ ಬಂದಲ್ಲಿ ನಂತರದ ಕೆಲವು ದಿನಗಳ ಕಾಲ ನಿಗಾ ಇಡಬೇಕು. ಕ್ವಾರಂಟೈನ್ ವಾಚ್ ಆಪ್ ಮೂಲಕ ಪ್ರತಿ ದಿನದ ಮಾಹಿತಿಯನ್ನು ತಿಳಿಸಬೇಕು. ಜೊತೆಗೆ ಆರೋಗ್ಯದ ಬಗ್ಗೆ ಸ್ಥಳಿಯ ಆರೋಗ್ಯ ಅಧಿಕಾರಿಗಳು ಹಾಗೂ ಟಿ.ಎಚ್.ಓ ಗಳು ಮುನ್ನೆಚ್ಚರಿಕೆಯನ್ನು ವಹಿಸಬೇಕು. ಹೋಮ್ ಕ್ವಾರಂಟೈನ್ ಸಂದರ್ಭದಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಯಲ್ಲಿ ಕೋವಿಡ್ಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಲ್ಲಿ ಅವರ ಗಂಟಲು ದ್ರವ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಬೇಕು ಎಂದರು.
ಕೋವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತಿಯ ಸಂಪರ್ಕ ಹೊಂದಿದವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಕ್ವಾರಂಟೈನ್ ವಾಚ್ ಆಪ್, ಆರೋಗ್ಯ ಸೇತು ಆಪ್ ಗಳನ್ನು ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆ ವ್ಯವಸ್ಥಿತ ರೀತಿಯಲಿ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 15 ಆಂಬುಲೆನ್ಸ್ಗಳು ಕೋವಿಡ್ಗಾಗಿಯೇ ಮೀಸಲು ಇಡಲಾಗಿದ್ದು. ಪ್ರತ್ಯೇಕವಾಗಿ ಪ್ರತಿ ತಾಲೂಕಿಗೆ ಒಂದರಂತೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಒಂದೊಂದು ಆಂಬುಲೆನ್ಸ್ಗಳನ್ನು ಪ್ರತಿ ತಾಲೂಕಾವಾರು ನೀಡಬೇಕು. ರೋಗಿಗಳಿಗೆ ಸರಿಯಾದ ಸಮಯದಲ್ಲಿ ನಿಗದಿತ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಾವುದೆ ತೊಂದರೆಗಳ ಆಗದಂತರೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರತಿ ತಾಲೂಕಾ ಆಸ್ಪತ್ರೆಗಳಲ್ಲಿ ಶೇ50 ಬೆಡ್ಗಳನ್ನು ಕೋವಿಡ್ಗಳಿಗಾಗಿ ಮೀಸಲಿಡಬೇಕು, ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ತಾಲೂಕಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಶೇ 50 ರಷ್ಟು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳ ಬೆಡ್ಗಳ ವ್ಯವಸ್ಥೆಯ ಜೊತೆಗೆ ಶೇ 50ರಷ್ಟು ಕೋವಿಡ್ ರೋಗಿಗಳಿಗೆ ಮೀಸಲಿಡ ಬೇಕಾಗಿರುವುದರಿಂದ. ಯಾವುದೇ ರೀತಿಯಿಂದ ತೊಂದರೆಗಳಾಗದಂತೆ ನೋಡಿಕೊಳ್ಳಬೇಕು ಜೊತೆಗೆ ಈಗಾಗಲೆ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಕೋವಿಡ್ ಚಿಕಿತ್ಸೆಗಳನ್ನು ಕೈಗೊಳ್ಳಬೇಕು. ಕೆಲವು ತಾಲೂಕುಗಳಲ್ಲಿ ಪ್ರಾರಂಭವಾಗಿದ್ದು, ಇನ್ನೂ ಕೆಲವು ತಾಲೂಕುಗಳಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದರ ಮೂಲಕ ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಕೋವಿಡ್ ಪಾಸಿಟಿವ್ ಬಂದಿರುವ ರೋಗಿಗಳನ್ನು ಕೋವಿಡ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರಿಗೆ ಯಾವುದೇ ರೀತಿಯಲ್ಲಿ ಚಿಕಿತ್ಸೆ ಹಾಗೂ ಊಟದಲ್ಲಿ ತೊಂದರೆಗಳಾಗಬಾರದು. ಮೂಲಭೂತ ಸೌಕರ್ಯದ ಜೊತೆಗೆ ಪ್ರತಿದಿನದ ಚಿಕಿತ್ಸೆಯನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಸಾರಿ ಮತ್ತು ಐ.ಎಲ್ಐ ರೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಹಚ್ಚಬೇಕು. ಜಿಲ್ಲೆಯಲ್ಲಿ ನೆಗಡಿ.ಕೆಮ್ಮು ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆ ಇರುವ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1077ಗೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಇಂಡಿ ಎ,ಸಿ ಸ್ನೇಹಲ್ ಲೋಖಂಡೆ, ವಿಜಯಪುರ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ಬಿರಾದಾರ, ಡಬ್ಲೂ.ಎಚ್.ಓ ಅಧಿಕಾರಿ ಡಾ. ಮುಕುಂದ ಗಲಗಲಿ, ಡಾ. ಲಕ್ಕಣ್ಣವರ, ಡಾ.ಕಟ್ಟಿ, ಡಾ. ಧಾರವಾಡಕರ ಸೇರಿದಂತೆ ಇತರರಿದ್ದರು.
Subscribe to:
Posts (Atom)