ಚಡಚಣ: ಶ್ರೀ ಸಂಗಮೇಶ್ವರ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಪಟ್ಟಣ ಪಂಚಾಯತ ಚಡಚಣ ಇವರ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಅದ್ದೂರಿಯಾಗಿ ಜರುಗುತ್ತಿದ್ದು , ದಿನಾಂಕ: 29.01.2025 ರಂದು ಬುಧವಾರ ದಿವಸ ಮುಂಜಾನೆ ಶ್ರೀ ಸಂಗಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಮತ್ತು ನಂದೀಶನಿಗೆ ಎಣ್ಣೆಮಜಲು ಪೂಜೆ ನಡೆಯುವುದು, ಮುಂಜಾನೆ 7-೦೦ ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿಧ್ವಜ, ವಾದ್ಯ-ವೈಭವಗಳೊಂದಿಗೆ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪುವುದು. ಮುಂಜಾನೆ 9-೦೦ ಗಂಟೆಗೆ "ದೇವರ ನುಡಿ" ಜರುಗುವುದು ಮುಂಜಾನೆ 10=00 ಗಂಟೆಗೆ "ಶಿವೋಹಂ" ಡಾನ್ಸ್ ಅಕಾಡಮಿ ವಿಜಯಪುರ ಇವರಿಂದ "ಭರತನಾಟ್ಯ" ಕಾರ್ಯಕ್ರಮ ಜರುಗುವುದು. ಅಂದು ರಾತ್ರಿ 9-೦೦ ಗಂಟೆಗೆ ದೇವಸ್ಥಾನ ಆವರಣದಲ್ಲಿ ರಂಗ ಸಂಗಮ ಶ್ರೀಮತಿ ರೇಶ್ಮಾ ಅಳವಂಡಿ ಇವರಿಂದ "ಮಲಮಗಳು" ಎಂಬ ಸಾಮಾಜಿಕ ನಾಟಕ ಜರುಗುವುದು.
ದಿನಾಂಕ: 30.01.2025 ಗುರುವಾರ ಸಾಯಂಕಾಲ 3.00 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ-ನಂದೀಧ್ವಜವು ಬಾಜಾ ಬಜಂತ್ರಿಯೊಂದಿಗೆ ಹೊರಟು ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಬರುವುದು. ರಾತ್ರಿ 9.00 ಗಂಟೆಗೆ ದೇವಸ್ಥಾನದ ಹತ್ತಿರವಿರುವ ಎತ್ತರದ ಸ್ಥಳದಲ್ಲಿ ಶ್ರೀ ದತ್ತ ಶುಗರ್ಸ್ ಹಾವಿನಾಳ ಅವರಿಂದ “ಚಿತ್ರ-ವಿಚಿತ್ರವಾದ ಮದ್ದು" ಸುಡಲಾಗುವುದು. ಅಂದು ರಾತ್ರಿ 10.00 ಗಂಟೆಗೆ ಶ್ರೀಮತಿ ಉಷಾರಾಣಿ ಬಾರಿಗಿಡದ ಇವರಿಂದ ನಲವಡಿ "ಹೇಮರಡ್ಡಿ ಮಲ್ಲಮ್ಮ" ಎಂಬ ಪೌರಾಣಿಕ ಭಕ್ತಿಮಯ ನಾಟಕ ಜರುಗುವುದು.
ದಿನಾಂಕ : 31.01.2025 ಶುಕ್ರವಾರ ಮಧ್ಯಾಹ್ನ: 2.30 ಗಂಟೆಗೆ "ಪ್ರಸಿದ್ಧ ಮಲ್ಲರ ಕುಸ್ತಿಗಳು" ಜರಗುವವು. ವಿಜೇತ ಪೈಲವಾನರಿಗೆ ಬಹುಮಾನ ಕೊಡಲಾಗುವುದು.ಅಂದು ರಾತ್ರಿ 10.00 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಹಾಸ್ಯ ಚತುರ ಸಿದ್ದು ನಾಲ್ವತವಾಡ ಇವರಿಂದ"ನೀನೂ ಸಾಹುಕಾರನಾಗು" ಎಂಬ ಹಾಸ್ಯಮಯ ನಾಟಕ ಜರುಗುವುದು. ದಿನಾಂಕ : 01.02.2025 ಶನಿವಾರ ಮಧ್ಯಾಹ್ನ: 3-೦೦ ಗಂಟೆಗೆ ಪಶು ವೈದ್ಯಾಧಿಕಾರಿಗಳು ಆಯ್ಕೆ ಮಾಡಿದ ಯೋಗ್ಯ ರಾಸುಗಳಿಗೆ ಜಾನುವಾರ ಪ್ರಶಸ್ತಿ ಸಮಾರಂಭ ಜರಗುವುದು. ದಿನಾಂಕ : 02.02.2025 ರವಿವಾರ ರಾತಿ 9-೦೦ ಗಂಟೆಗೆ ಸರಿಗಮ ಖ್ಯಾತಿಯ ಕುಮಾರಿ ದಿವ್ಯಾ ಹೆಗಡೆ, ಲಫಂಗ ರಾಜಾ, ಮ್ಯೂಜಿಕ ಮೈಲಾರಿ ಇವರುಗಳಿಂದ ಶ್ರೀ ಕಾಂತುಗೌಡ ಪಾಟೀಲ ಬಿಜೆಪಿ ಮಂಡಲ ಅಧ್ಯಕ್ಷರು ಇವರ ಪ್ರಾಯೋಜಿಕ ವತಿಯಿಂದ ರಸಮಂಜರಿ ಕಾರ್ಯಕ್ರಮ ಜರುಗುವದು. ದಿನಾಂಕ : 04.02.2025 ಮಂಗಳವಾರ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ 7 ದಿವಸಕ್ಕೆ ಪಲ್ಲಕ್ಕಿ-ನಂದಿಧ್ವಜ ನಾನಾ ತರಹದ ವಾದ್ಯಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ಗುಡಿಗೆ ಹೋಗುವದು. ದಿನಾಂಕ: 29.01.2025 ರಂದು ಶ್ರೀ ರವಿ ಪಾವಲೆ ಇವರಿಂದ ಮತ್ತು ಶ್ರೀ ವಿವೇಕಾನಂದ ಹಿಟ್ನಳ್ಳಿ, ಶ್ರೀ ಚೌಡೇಶ್ವರಿ ಡ್ರೆಸಿಸ್ ಚಡವಣ ಇವರಿಂದ ದಿನಾಂಕ 30.01.2025 ರಿಂದ 02.02.2025 ರ ವರೆಗೆ "ಅನ್ನ ಪ್ರಸಾದ" ಸೇವೆ ಇರುತ್ತದೆ.
ಆದ ಕಾರಣ ಹೆಚ್ಚು ಹೆಚ್ಚು ಸಂಖ್ಯೇಯಲ್ಲಿ ಭಕ್ತಾದಿಗಳು ಆಗಮಿಸಿ ಈ ಜಾತ್ರೆಗೆ ಹೆಚ್ಚು ಮೆರಗು ತರ ಬೇಕೆಂದು ಶ್ರೀ ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಯರಾದ ಜಿ,ಡಿ.ಪಾವಲೆ ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.